ವಚನಗಳು

 

ವಚನಗಳು


ಸಾಹಿತ್ಯದ ದೃಷ್ಟಿಯಲ್ಲಿ ವಚನ ಎಂದರೆ – ಪರಿಶುದ್ಧ / ನೀತಿಯುಕ್ತ ಮಾತು ಎಂದರ್ಥ .ಆದರೆ ವ್ಯಾಕರಣದ ದೃಷ್ಟಿಯಲ್ಲಿ ವಚನ ಎಂದರೆ ಸಂಖ್ಯೆ ಎಂದರ್ಥ

ವಚನಗಳ ವಿಧಗಳು


ಕನ್ನಡದ ವಚನಗಳಲ್ಲಿ ಮುಖ್ಯವಾಗಿ ಎರಡು ವಿಧಗಳು
1> ಏಕವಚನ (Singular)
2> ಬಹುವಚನ (Plural)

1> ಏಕವಚನ (Singular)


ಒಬ್ಬ ವ್ಯಕ್ತಿ , ಒಂದು ವಸ್ತು, ಒಂದು ಸ್ಥಳ ಎಂದು ಹೇಳುವ ಶಬ್ಬಗಳಿಗೆ ಏಕವಚನ ಎಂದು ಕರೆಯಲಾಗಿದೆ.
ಉದಾ ; ಅರಸು, ನೀನು, ಮನೆ , ನಾನು, ಮರ, ಕವಿ , ತಂದೆ, ತಾಯಿ, ರಾಣಿ, ಊರು….. ಇತ್ಯಾದಿ

2> ಬಹುವಚನ (Plural)


ಒಂದಕ್ಕಿಂತ ಹೆಚ್ಚು ವ್ಯಕ್ತಿ, ವಸ್ತುಗಳನ್ನು ಕುರಿತು ಹೇಳುವ ಶಬ್ಬಗಳಿಗೆ ಬಹುವಚನ
ಉದಾ : ಅರಸರು, ನೀವು, ಮನೆಗಳು, ನಾವು, ಮರಗಳು, ಕಿವಿಗಳು, ಅಣ್ನದಿರು, ತಾಯಿಯರು , ರಾಣಿಯರು, ಊರುಗಳು ಇತ್ಯಾದಿ…

ಪುಲ್ಲಿಂಗ, ಸ್ತ್ರೀಲಿಂಗ ನಾಮಪ್ರಕೃತಿಗಳ ಮೇಲೆ ಬಹುಮಟ್ಟಿಗೆ ಆರು , ಅಂದಿರುಗಳು, ಪ್ರತ್ಯಯಗಳು ಹತ್ತುತ್ತವೆ.
ಗಂಡಸರು, ಹೆಂಗಸರು, ಮುದುಕರು, ಜಾಣೆಯರು, ಗೆಳೆತಿಯರು, ಅರಸರು, ಗೆಳೆಯರು, ಆಟಗಾರರು, ಸೊಸೆಯರು,ಅತ್ತೆಯರು……. ಇತ್ಯಾದಿ
ಅಂದಿರು : ‘ಅ’ ಕಾರಂತ ಪ್ರಕೃತಿಗಳಿಗೆ ಅಂದಿರು ಎಂಬ ಪ್ರತ್ಯಯವು ಹತ್ತುತ್ತದೆ… ಅಣ್ಣಂದಿರು ಗಂಡಂದಿರು ಅಕ್ಕಂದಿರು, ತಮ್ಮಂದಿರು,ಭಾವಂದಿರು ,ಮಾವಂದಿರು ……….. ಇತ್ಯಾದಿಗಳು

(ಅ) ಅಕಾರಾಂತ ವಲ್ಲದ ಪುಲಿಂಗ,ಸ್ತ್ರೀಲ್ಲಿಂಗ ಪ್ರಕೃತಿಗಲಲ್ಲಿ ಹಲವಕ್ಕಿಗಳು ಪ್ರತ್ಯಯಗಳು ಸೇರುತ್ತದೆ.
ಉದಾ : ಋಷಿಗಳು, ಗುರುಗಳು, ದೊರೆಗಳು, ಮುನಿಗಳು, ಹೆಣ್ಣುಗಳು, ತಮದೆಗಳು, ……….. ಇತ್ಯಾದಿ

(ಆ) ನಪುಂಸಕ ಲಿಂಗದ ಪ್ರಕೃತಿಗಳಿಗೆಲ್ಲ ‘ಗಳು’ – ಸೇರುತ್ತವೆ.
ಉದಾ : ಮರಗಳು , ದೇವತೆಗಳು, ಹಸುಗಳು, ಎಮ್ಮೆಗಳು, ಕೊಳಗಳು , ಹುಲಿಗಳು, ಹಳ್ಳಿಗಳು, ಕೆರೆಗಳು, ಕಲ್ಲುಗಳು …………. ಇತ್ಯಾದಿ