ರಾಷ್ಟೀಯ ವರಮಾನ(National Income)

 

• ರಾಷ್ಟ್ರೀಯ ಆದಾಯ ಪರಿಕಲ್ಪನೆಯು ಆಧುನಿಕ ಆರ್ಥಿಕ ವ್ಯವಸ್ಥೆಯಲ್ಲಿ ವಿಶೇಷ ಮಹತ್ವ ಪಡೆದಿದೆ.
• ಒಂದು ಆರ್ಥಿಕ ವ್ಯವಸ್ಥೆಯ ಸ್ಥಿತಿಗತಿಗಳನ್ನು ತಿಳಿದುಕೊಳ್ಳಬೇಕೆಂದರೆ ಆ ರಾಷ್ಟ್ರದ ರಾಷ್ಟ್ರೀಯ ಆದಾಯವೆಂಬ ನರನಾಡಿಗಲ ಮೇಲೆ ಕಣ್ಣಾಡಿಸಬೇಕಾಗುತ್ತದೆ
• ರಾಷ್ಟ್ರೀಯ ಆದಾಯವು ಒಂದು ರಾಷ್ಟ್ರದ ಜನರ ಜೀವನ ಮಟ್ಟ, ಅಭಿವೃದ್ಧಿ ಮಟ್ಟ, ಆದಾಯ ವಿತರಣೆ, ಆರ್ಥಿಕ ಮುನ್ನಡೆಯ ಪಥ, ವಿವಿಧ ಕ್ಷೇತ್ರಗಳ ಅಭಿವೃದ್ಧಿ ಜನರ ಆರ್ಥಿಕ ಚಟುವಟಿಕೆಗಳ ಸ್ವರೂಪ ಮತ್ತು ರಚನೆಯ ಮೇಲೆ ಬೆಳಕು ಬೀರುತ್ತದೆ.
• ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಆದಾಯವೆಂದರೆ ಒಂದು ಗೊತ್ತಾದ ವರ್ಷದಲ್ಲಿ ಒಂದು ರಾಷ್ಟ್ರದಲ್ಲಿ ಉತ್ಪಾದನೆಯಾಗುವ ಎಲ್ಲಾ ಸರಕು ಮತ್ತು ಸೇವೆಗಳ ಮಾರುಕಟ್ಟೆ ಮೌಲ್ಯವಾಗಿದೆ.

ರಾಷ್ಟ್ರೀಯ ವರಮಾನ ಮತ್ತು ವಿವಿಧ ಪರಿಕಲ್ಪನೆಗಳು


ಎ) ಒಟ್ಟು ದೇಶೀಯ ಉತ್ಪನ್ನ ( Gross Domestic product -GDP)
ಒಂದು ದೇಶದ ಭೌಗೋಳಿಕ ವ್ಯಾಪ್ತಿಯಲ್ಲಿ ನಿರ್ಧಿಷ್ಟ ಹಣಕಾಸಿನ ವರ್ಷದಲ್ಲಿ ಉತ್ಪಾದಿಸುವ ಎಲ್ಲಾ ವಸ್ತುಗಳು ಹಾಗೂ ಸೇವೆಗಳು ಒಟ್ಟು ಮೌಲ್ಯವನ್ನೇ “ಒಟ್ಟು ದೇಶಿಯ ಉತ್ಪನ್ನ” ಎಂದು ಕರೆಯುತ್ತೇವೆ.
ಬಿ) ಒಟ್ಟು ರಾಷ್ಟ್ರೀಯ ಉತ್ಪನ್ನ (Gross National product-GNP)
ಒಂದು ದೇಶದ ಎಲ್ಲಾ ನಾಗರಿಕರು ನಿರ್ಧಿಷ್ಟ ಹಣಕಾಸಿನ ವರ್ಷದಲ್ಲಿ ಉತ್ಪಾದಿಸುವ ಎಲ್ಲಾ ವಸ್ತುಗಳು ಹಾಗೂ ಸೇವೆಗಳ ಒಟ್ಟು ಮೌಲ್ಯವನ್ನು ನಾವು “ಒಟ್ಟು ರಾಷ್ಟ್ರೀಯ ಉತ್ಪನ್ನ” ಎಂದು ಕರೆಯುತ್ತೇವೆ. ಇದರಲ್ಲಿ ನಾವು ನಾಗರಿಕರ ಭೌಗೋಳಿಕ ಪ್ರದೇಶವನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ.
• ಒಟ್ಟು ರಾಷ್ಟೀಯ ಉತ್ಪನ್ನ = ನಿವ್ವಳ ರಾಷ್ಟೀಯ ಉತ್ಪನ್ನ + ಸವಕಳಿ ವೆಚ್ಚ (Depreciation Cost)
ಸಿ) ನಿವ್ವಳ ದೇಶೀಯ ಉತ್ಪನ್ನ (Net Domestic Product-NDP)
ಒಟ್ಟು ದೇಶೀಯ ಉತ್ಪನ್ನದಲ್ಲಿ ಸವಕಳಿ ವೆಚ್ಚವನ್ನು ಕಳೆದರೆ ನಮಗೆ ನಿವ್ವಳ ದೇಶೀಯ ಉತ್ಪನ್ನ ದೊರಕುತ್ತದೆ.
• ನಿವ್ವಳ ದೇಶೀಯ ಉತ್ಪನ್ನ=ಒಟ್ಟು ದೇಶೀಯ - ಉತ್ಪನ್ನ ಸವಕಳಿ ವೆಚ್ಚ (Depreciation)
ಡಿ) ನಿವ್ವಳ ರಾಷ್ಟ್ರೀಯ ಉತ್ಪನ್ನ (Net National Product-NNP)
ಭಾರತದಲ್ಲಿ ನಿವ್ವಳ ರಾಷ್ಟ್ರೀಯ ಉತ್ಪನ್ನವನ್ನು (NNP) ರಾಷ್ಟ್ರೀಯ ಆದಾಯ ಎಂದು ಪರಿಗಣಿಸುತ್ತೇವೆ.
• ನಿವ್ವಳ ರಾಷ್ಟೀಯ ಉತ್ಪನ್ನ = ಒಟ್ಟು ರಾಷ್ಟೀಯ ಉತ್ಪನ್ನ -ಸವಕಳಿ ವೆಚ್ಚ

ತಲಾದಾಯ (Per Capita Income)


ಒಂದು ರಾಷ್ಟ್ರದ ಪ್ರತಿಯೊಬ್ಬ ವ್ಯಕ್ತಿಯ ಒಂದು ವರ್ಷದ ಸರಾಸರಿ ಆದಾಯವನ್ನು ತಲಾದಾಯ ಎನ್ನಲಾಗುತ್ತದೆ. ರಾಷ್ಟ್ರೀಯ ಆದಾಯವನ್ನು ಒಟ್ಟು ಜನಸಂಖ್ಯೆಯಿಂದ ಭಾಗಿಸಿದಾಗ ತಲಾದಾಯ ಲಭ್ಯವಾಗುತ್ತದೆ. ಆದ್ದರಿಂದ ತಲಾದಾಯವು ಒಂದು ರಾಷ್ಟ್ರದ ಜನರ ಸರಾಸರಿ ಆದಾಯವಾಗಿರುತ್ತದೆ. ಪ್ರತಿಯೊಬ್ಬ ವ್ಯಕ್ತಿಯ ಸರಾಸರಿ ಆದಾಯ ಮತ್ತು ಜೀವನ ಮಟ್ಟವನ್ನು ತಲಾದಾಯದ ಸಹಾಯದಿಂದ ತಿಳಿದುಕೊಳ್ಳಬಹುದು.
• ತಲಾದಾಯ= ರಾಷ್ಟ್ರೀಯ ಆದಾಯ /ಒಟ್ಟು ಜನಸಂಖ್ಯೆ