ಆರ್ಥಿಕ ವಲಯಗಳು(Sectors of economy)

 

ಅರ್ಥಶಾಸ್ತ್ರಜ್ಞರು ಮುಖ್ಯವಾಗಿ 3 ಆರ್ಥಿಕ ವಲಯಗಳನ್ನು ಗುರುತಿಸಿದ್ದಾರೆ. ಅವುಗಳೆಂದರೆ,
1. ಪ್ರಾಥಮಿಕ ವಲಯ
2. ದ್ವಿತೀಯ ವಲಯ
3. ತೃತೀಯ ವಲಯ

1.ಪ್ರಾಥಮಿಕ ವಲಯ


ಆರ್ಥಿಕ ಚಟುವಟಿಕೆ ನೈಸರ್ಗಿಕ ಸಂಪನ್ಮೂಲಗಳ ಬಳಕೆ ಮೇಲೆ ಅವಲಂಬನೆಯಾದಾಗ ಆ ಚಟುವಟಿಕೆ ಪ್ರಾಥಮಿಕ ವಲಯದ ಅಡಿಯಲ್ಲಿ ಬರುತ್ತದೆ. ಈ ವಲಯವು ನೈಸರ್ಗಿಕ ಸಂಪನ್ಮೂಲಗಳ ಮೇಲೆ ನೇರವಾಗಿ ಅವಲಂಬಿತವಾಗಿದೆ.
ಉದಾ: ಕೃಷಿ ಹಾಗೂ ಅದಕ್ಕೆ ಸಂಬಂಧಿಸಿದ ಉಪ ಕಸುಬುಗಳು, ಮೀನುಗಾರಿಕೆ, ಗಣಿಗಾರಿಕೆ, ಅರಣ್ಯಗಾರಿಕೆ ಇತ್ಯಾದಿ.

2. ದ್ವಿತೀಯ ವಲಯ


ಈ ವಲಯದಲ್ಲಿ ಪ್ರಾಥಮಿಕ ವಲಯಗಳಿಂದ ಉತ್ಪಾದಿಸುವ ಉತ್ಪನ್ನಗಳನ್ನು ಕಚ್ಚಾವಸ್ತುವನ್ನಾಗಿ ಉಪಯೋಗಿಸುತ್ತೇವೆ.
ಉದಾ : ಆಟೋಮೋಬೈಲ್ ವಲಯ, ಟೆಕ್ಸಟೈಲ್ಸ್ ವಲಯ, ಕಬ್ಬಿಣ ಹಾಗೂ ಉಕ್ಕಿನ ವಲಯ ಹಾಗೂ ಇತರ ಉತ್ಪಾದನಾ ವಲಯ.

3.ತೃತೀಯ ವಲಯ


ಇದು ಸೇವೆಗೆ ಸಂಬಂಧಪಟ್ಟ ಚಟುವಟಿಕೆಗಳನ್ನು ಒಳಗೊಂಡಿರುವುದರಿಂದ ಇದನ್ನು ಸೇವಾ ವಲಯ ಸಹ ಎನ್ನುವರು. ಐಟಿ ಉದ್ಯಮ, ಪ್ರವಾಸೋದ್ಯಮ, ಶೈಕ್ಷಣಿಕ ವಲಯ, ಬ್ಯಾಂಕಿಂಗ್, ಹೋಟೆಲ್ ಉದ್ಯಮ, ಆರೋಗ್ಯಕ್ಕೆ ಸಂಬಂಧಿಸಿದ ಉದ್ಯಮಗಳನ್ನು ನಾವು ತೃತೀಯ ವಲಯ ಎಂದು ಕರೆಯುತ್ತೇವೆ.

ವಿವಿಧ ಆರ್ಥಿಕತೆಗಳು


1. ಕೃಷಿ ಅವಲಂಬಿತ ಆರ್ಥಿಕ ವ್ಯವಸ್ಥೆ :
ಯಾವ ದೇಶದ ಆರ್ಥಿಕ ವ್ಯವಸ್ಥೆಯು ಶೇ.50ಕ್ಕಿಂತಲೂ ಅಧಿಕವಾಗಿ ಕೃಷಿಗೆ ಸಂಬಂಧಿಸಿದ ಚಟುವಟಿಕೆಗಳ ಮೇಲೆ ಅವಲಂಬಿತವಾಗಿದೆಯೋ ಅವುಗಳನ್ನು ನಾವು ಕೃಷಿ ಅವಲಂಬಿತ ಆರ್ಥಿಕ ವ್ಯವಸ್ಥೆ ಎಂದು ಕರೆಯುತ್ತೇವೆ.
2. ಕೈಗಾರಿಕೆ ಅವಲಂಬಿತ ಆರ್ಥಿಕ ವ್ಯವಸ್ಥೆ :
ಯಾವ ದೇಶ ಆರ್ಥಿಕ ವ್ಯವಸ್ಥೆಯು ಶೇ. 50ಕ್ಕಿಂತಲೂ ಅಧಿಕವಾಗಿ ಕೈಗಾರಿಕೆಗಳ ಮೇಲೆ ಅವಲಂಬಿತವಾಗಿದೆಯೋ ಅವುಗಳನ್ನು ನಾವು ಕೈಗಾರಿಕಾ ಅವಲಂಬಿತ ಆರ್ಥಿಕ ವ್ಯವಸ್ಥೆ ಎಂದು ಕರೆಯುತ್ತೇವೆ.
3. ಸೇವಾ ಕ್ಷೇತ್ರಗಳ ಮೇಲೆ ಅವಲಂಬಿತ ಆರ್ಥಿಕ ವ್ಯವಸ್ಥೆ :
ಯಾವ ದೇಶದ ಆರ್ಥಿಕ ವ್ಯವಸ್ಥೆಯು ಶೇ. 50ಕ್ಕಿಂತಲೂ ಅಧಿಕವಾಗಿ ಕೈಗಾರಿಕೆಗಳ ಮೇಲೆ ಅವಲಂಬಿತವಾಗಿದೆಯೋ ಅವುಗಳನ್ನು ನಾವು ಸೇವಾಕ್ಷೇತ್ರಗಳ ಮೇಲೆ ಅವಲಂಬಿ ಆರ್ಥಿಕ ವ್ಯವಸ್ಥೆ ಎಂದು ಕರೆಯುತ್ತೇವೆ.