ಕರ್ನಾಟಕದ ಭೂ ಬಳಕೆ (Karnataka : Land Utilization)

 

• ಭೂಮಿಯನ್ನು ವಿವಿಧ ಉದ್ದೇಶಗಳಿಗೆ ಬಳಸುವುದನ್ನು ‘ಭೂ ಬಳಕೆ’ ಎನ್ನುವರು.
• ಇದರಲ್ಲಿ ಸಾಗುವಳಿ ಭೂಮಿ, ಅರಣ್ಯಪ್ರದೇಶ, ಬೀಳುಭೂಮಿ, ಕೃಷಿಯೇತರ ವಸತಿ, ರಸ್ತೆ, ರೈಲುಮಾರ್ಗ, ಅಣೆಕಟ್ಟು,ಕಾಲುವೆ ಮುಂತಾದವುಗಳ ನಿರ್ಮಾಣ ಮೊದಲಾದವು ಸೇರುವುವು.
• ಕರ್ನಾಟಕ ರಾಜ್ಯವು ಒಟ್ಟು 19.05 ಲಕ್ಷ ಹೆಕ್ಟೇರ್ ಭೌಗೋಳಿಕ ಪ್ರದೇಶವನ್ನು ಹೊಂದಿದ್ದು, ಅದು ಈ ಕೆಳಕಂಡ ಪ್ರಮುಖ ಉದ್ದೇಶಗಳಿಗೆ ಬಳಕೆಯಾಗುತ್ತದೆ.

ಕರ್ನಾಟಕದ ಭೂ ಬಳಕೆಯ ವಿಧಗಳು


1. ನಿವ್ವಳ ಸಾಗುವಳಿ ಭೂಮಿ :
• ಒಟ್ಟು ಸಾಗುವಳಿಗೆ ಬಳಕೆಯಾದ ಭೂಮಿ ರಾಜ್ಯದ ಎಲ್ಲಾ ಭಾಗಗಳಲ್ಲಿ ಒಂದೇ ರೀತಿಯಾಗಿಲ್ಲ.
• ಕಲಬುರಗಿ ಜಿಲ್ಲೆಯು ರಾಜ್ಯದಲ್ಲೇ ಅತಿ ಹೆಚ್ಚು ಸಾಗುವಳಿ ಭೂಮಿಯನ್ನು ಹೊಂದಿದೆ. ಅನಂತರದ ಸ್ಥಾನಗಳಲ್ಲಿ ಬೆಳಗಾವಿ, ವಿಜಯಪುರ, ತುಮಕೂರು, ರಾಯಚೂರು, ಬಾಗಲಕೋಟೆ, ಬಳ್ಳಾರಿ, ಚಿತ್ರದುರ್ಗ ಮತ್ತು ಮೈಸೂರು ಜಿಲ್ಲೆಗಳು ಬರುತ್ತವೆ.
• ತೀವ್ರ ನಗರೀಕರಣದಿಂದ ಬೆಂಗಳೂರು ಜಿಲ್ಲೆ ಕನಿಷ್ಠ ಸಾಗುವಳಿ ಭೂಮಿಯನ್ನು ಹೊಂದಿದೆ.
2. ಅರಣ್ಯ ಪ್ರದೇಶ :
• ಉತ್ತರ ಕನ್ನಡ ಜಿಲ್ಲೆಯು ಹೆಚ್ಚು ಅರಣ್ಯ ಪ್ರದೇಶವನ್ನು ಹೊಂದಿದೆ. ಶಿವಮೊಗ್ಗ, ಚಾಮರಾಜನಗರ, ಚಿಕ್ಕಮಗಳೂರು, ಕೊಡಗು, ಬೆಳಗಾವಿ, ದಕ್ಷಿಣ ಕನ್ನಡ, ಉಡುಪಿ, ಬಳ್ಳಾರಿ ಜಿಲ್ಲೆಗಳಲ್ಲಿಯೂ ಅರಣ್ಯ ಪ್ರದೇಶ ಹೆಚ್ಚಾಗಿ ಕಂಡುಬರುತ್ತದೆ.
• ಬಿಜಾಪುರ ಜಿಲ್ಲೆಯು ಅತಿ ಕನಿಷ್ಠ ಅರಣ್ಯ ಪ್ರದೇಶವನ್ನು ಹೊಂದಿದೆ. ಬೆಂಗಳೂರು, ಬೆಂಗಳೂರು ಗ್ರಾಮಾಂತರ, ರಾಯಚೂರು, ಬೀದರ್ ಮತ್ತು ಗದಗ ಜಿಲ್ಲೆಗಳಲ್ಲಿ ಕಡಿಮೆ.
3. ಸಾಗುವಳಿಗೆ ಲಭ್ಯವಿಲ್ಲದ ಭೂಮಿ :
• ಇದು ವ್ಯವಸಾಯಕ್ಕೆ ಬದಲು ಇನ್ನಿತರ ಹಲವು ಉದ್ದೇಶಗಳಿಗೆ ಭೂ ಬಳಕೆಯಾಗುವುದನ್ನು ಒಳಗೊಂಡಿದೆ. ರೈಲು ಮಾರ್ಗ, ರಸ್ತೆ, ವಸತಿ, ಕೈಗಾರಿಕೆ, ನೀರಾವರಿ ಯೋಜನೆಗಳು ಇವುಗಳಲ್ಲಿ ಮುಖ್ಯವಾದವುಗಳು.
• ಬೆಂಗಳೂರು ನಗರ ಜಿಲ್ಲೆ ಮೊದಲ ಸ್ಥಾನದಲ್ಲಿದೆ.
• ಬೀದರ್ ಜಿಲ್ಲೆಯು ಅತಿ ಕಡಿಮೆ ಸಾಗುವಳಿಗೆ ಲಭ್ಯವಿಲ್ಲದ ಭೂಮಿಯನ್ನು ಹೊಂದಿದೆ. ಉಳಿದ ಜಿಲ್ಲೆಗಳಲ್ಲಿ ಸಾಧಾರಣ ಪ್ರಮಾಣದಲ್ಲಿದೆ.
4. ಸಾಗುವಳಿ ಮಾಡದ ಇತರೆ ಭೂಮಿ :
• ಇದರಲ್ಲಿ ಖಾಯಂ ಗೋಮಾಳ, ವೃಕ್ಷ ಮತ್ತು ತೋಪುಗಳು ಸೇರುತ್ತವೆ. ಶಿವಮೊಗ್ಗ, ತುಮಕೂರು, ಕೋಲಾರ, ಚಿಕ್ಕಮಗಳೂರು ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿ ಹೆಚ್ಚು ಕಂಡುಬರುತ್ತವೆ. ಗದಗ, ಬಾಗಲಕೋಟೆ ಮತ್ತು ಧಾರವಾಡ ಜಿಲ್ಲೆಗಳಲ್ಲಿ ಕನಿಷ್ಠ. ಇಂತಹ ಭೂಮಿಯನ್ನು ಸುಧಾರಿಸಿ ಕೃಷಿಗಾಗಿ ಬಳಕೆ ಮಾಡಬಹುದು.
5. ಬೀಳು ಭೂಮಿ :
• ಎರಡು ಅಥವಾ ಮೂರು ವರ್ಷಗಳಿಗಿಂತ ಹೆಚ್ಚು ಅವಧಿಯವರೆಗೆ ನಿರಂತರವಾಗಿ ಸಾಗುವಳಿಯಾಗದ ಭೂಮಿಯನ್ನು ಬೀಳು ಭೂಮಿಯೆನ್ನುವರು.
• ಕಲಬುರಗಿ ಜಿಲ್ಲೆ ಅಧಿಕ ಬೀಳು ಭೂಮಿಯನ್ನು ಹೊಂದಿದೆ. ರಾಯಚೂರು, ಬೆಳಗಾವಿ, ವಿಜಯಪುರ, ಕೊಪ್ಪಳ, ತುಮಕೂರು ಜಿಲ್ಲೆಗಳು ನಂತರದ ಸ್ಥಾನಗಳಲ್ಲಿವೆ.
• ದಕ್ಷಿಣಕನ್ನಡ, ಚಿಕ್ಕಮಗಳೂರು, ಕೊಡಗು, ಮೈಸೂರು, ಉತ್ತರ ಕನ್ನಡ ಮತ್ತುಉಡುಪಿ ಜಿಲ್ಲೆಗಳಲ್ಲಿ ಬೀಳು ಭೂಮಿ ಕಡಿಮೆ ಇದ್ದರೂ ಇಲ್ಲಿಯೂ ಅದರ ವಿಸ್ತಾರ ಹೆಚ್ಚಾಗುತ್ತಿದೆ.

ಭೂ ಬಳಕೆಯ ಶೇಕಡ ಪ್ರಮಾಣ


1. ಸಾಗುವಳಿ ಭೂಮಿಯನ್ನು ಹೊಂದಿದೆ.
2. ಬೀಳು ಭೂಮಿ (9.5%)
3. ಸಾಗುವಳಿ ಮಾಡದ ಇತರೆ ಭೂಮಿ (7.2%)
4. ಸಾಗುವಳಿಗೆ ಲಭ್ಯವಿಲ್ಲದ ಇತರೆ ಭೂಮಿ (10.2%)
5. ಅರಣ್ಯ ಪ್ರದೇಶ (14.5%)
6. ಸಾಗುವಳಿ ಭೂಮಿ (58.1%)