ಹಣಕಾಸು ವಲಯ(Financial Sector)

 

ಭಾರತದಲ್ಲಿ ಬ್ಯಾಂಕಿಂಗ್ ವಲಯ


ಯಾವುದೇ ಒಂದು ಆರ್ಥಿಕ ವ್ಯವಸ್ಥೆಗೆ ಬ್ಯಾಂಕುಗಳು ಮಹತ್ವದ ಪಾತ್ರ ನಿರ್ವಹಿಸುತ್ತವೆ. ಬಾಂಕುಗಳಲ್ಲಿ ವಿವಿಧ ಬಗೆಗಳು ಯಾವುವೆಂದರೆ
1) ಸಂಘಟಿತ ವಲಯ
2) ಅಸಂಘಟಿತ ವಲಯ

ಸಂಘಟಿತ ವಲಯದಲ್ಲಿ ಮೂರು ವಿಧಗಳಿವೆ.
1. ಸಾರ್ವಜನಿಕ ವಲಯ
2. ಖಾಸಗಿ ವಲಯ
3. ವಿದೇಶಿ ಬ್ಯಾಂಕುಗಳು

ಭಾರತದಲ್ಲಿ ಪ್ರಪ್ರಥಮ ವಾಣಿಜ್ಯ ಬ್ಯಾಂಕ್ ಆದ “ಔದ್ ವಾಣಿಜ್ಯ ಬ್ಯಾಂಕ್” (1881) ಸಂಪೂರ್ಣವಾಗಿ ಭಾರತೀಯ ಮಂಡಳಿಯೇ ನಿರ್ವಹಿಸಿತು. ಮೊದಲನೇ ಶುದ್ದ ಭಾರತೀಯ ಬ್ಯಾಂಕು ಯಾವುದೆಂದರೆ ‘ಪಂಜಾಬ್ ನ್ಯಾಷನಲ್ ಬ್ಯಾಂಕ್’ ಇದನ್ನು 1894 ರಲ್ಲಿ ಸ್ಥಾಪಿಸಲಾಯಿತು.

ವಾಣಿಜ್ಯ ಬ್ಯಾಂಕುಗಳ ವರ್ಗೀಕರಣ


ಭಾರತೀಯ ರಿಸರ್ವ್ ಬ್ಯಾಂಕ್ 1934ರ ಪ್ರಕಾರ ಭಾರತದ ವಾಣಿಜ್ಯ ಬಾಂಕ್ಗಳಲ್ಲಿ ಎರಡು ವಿಧಗಳಿವೆ.
1. ಶೆಡ್ಯೂಲ್ ಬ್ಯಾಂಕ್ಗಳು
2. ನಾನ್ ಶೆಡ್ಯೂಲ್ ಬ್ಯಾಂಕ್ಗಳು.

1. ಶೆಡ್ಯೂಲ್ ವಾಣಿಜ್ಯ ಬ್ಯಾಂಕುಗಳು


ಯಾವ ಬ್ಯಾಂಕುಗಳಲ್ಲಿ ಐದು ಲಕ್ಷ ರೂ. ಅಥವಾ ಅದಕ್ಕಿಂತಲೂ ಹೆಚ್ಚಿನ ಬಂಡವಾಳವಿರುತ್ತದೆಯೋ ಹಾಗೂ ಯಾವ ಬ್ಯಾಂಕುಗಳು ರಿಸರ್ವ ಬ್ಯಾಂಕ್ ಕಾಯ್ದೆ, 1934ರಎರಡನೇ ಪರಿಚ್ಛೇದದಲ್ಲಿ ಸೇರಿದಿಯೋ ಅದನ್ನು ನಾವು ಶೆಡ್ಯೂಲ್ ಕಮರ್ಷಿಯಲ್ ಬ್ಯಾಂಕ್ ಎಂದು ಕರೆಯತ್ತೇವೆ.

2. ನಾನ್ ಶೆಡ್ಯೂಲ್ ವಾಣಿಜ್ಯ ಬ್ಯಾಂಕುಗಳು


ಯಾವ ಬ್ಯಾಂಕುಗಳಲ್ಲಿ ರೂ. ಐದು ಲಕ್ಷಕ್ಕಿಂತಲೂ ಕಡಿಮೆ ಬಂಡವಾಳವಿರುತ್ತದೆಯೋ ಹಾಗೂ ರಿಸರ್ವ್ ಬ್ಯಾಂಕ್ ಕಾಯ್ದೆ, 1934ರ ಎರಡನೇ ಪರಿಚ್ಛೇದದಲ್ಲಿ ಸೇರಿಲ್ಲವೋ ಅದನ್ನು ನಾವು ನಾನ್ ಶೆಡ್ಯೂಲ್ ಕಮರ್ಷಿಯಲ್ ಬ್ಯಾಂಕ್ ಎಂದು ಕರೆಯುತ್ತೇವೆ.

ಸಾರ್ವಜನಿಕ ವಲಯದ ಬ್ಯಾಂಕುಗಳು


• ಯಾವ ಬ್ಯಾಂಕುಗಳಲ್ಲಿ ಸರ್ಕಾರ ಶೇ. 51ಕ್ಕಿಂತಲೂ ಹೆಚ್ಚು ಬಂಡವಾಳವಿದೆಯೋ ಅಂತಹ ಬ್ಯಾಂಕು ಗಳನ್ನು ನಾವು ಸಾರ್ವಜನಿಕ ವಲಯದ ಬ್ಯಾಂಕುಗಳು ಎಂದು ಕರೆಯುತ್ತೇವೆ.
• ಭಾರತದಲ್ಲಿ ಸಾರ್ವಜನಿಕ ವಲಯದ ಬ್ಯಾಂಕುಗಳು ಯಾವುವೆಂದರೆ ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾ, ಕೆನರಾ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್, ದೇನಾ ಬ್ಯಾಂಕ್, ಯುನಿಯನ್ ಬ್ಯಾಂಕ್ ಆಫ್ ಇಂಡಿಯಾ, ಪಂಜಾಬ್ ನ್ಯಾಷನಲ್ ಬ್ಯಾಂಕ್, ಬ್ಯಾಂಕ್ ಆಫ್ ಮಹಾರಾಷ್ಟ, ಇಂಡಿಯನ್ ಬ್ಯಾಂಕ್, ಅಲಹಾಬಾದ್ ಬ್ಯಾಂಕ್, ಭಾರತೀಯ ಸ್ಟೇಟ್ ಬ್ಯಾಂಕ್, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕ್ ಆಫ್ ಬರೋಡಾ, ಇಂಡಿಯನ್ ಓವರ್ಸೀಸ್ ಬ್ಯಾಂಕ್, ವಿಜಯಾ ಬ್ಯಾಂಕ್, ಆಂಧ್ರ ಬ್ಯಾಂಕ್, ಕಾರ್ಪೋರೇಷನ್ ಬ್ಯಾಂಕ್ ಇತ್ಯಾದಿ.

ಖಾಸಗಿ ವಲಯದ ಬ್ಯಾಂಕುಗಳು


• ಯಾವ ಬ್ಯಾಂಕುಗಳು ಖಾಸಗಿ ಒಡೆತನದಲ್ಲಿವೆಯೋ ಅಂತಹ ಬ್ಯಾಂಕುಗಳನ್ನು ನಾವು ಖಾಸಗಿ ವಲಯದಲ್ಲಿ ಬ್ಯಾಂಕುಗಳು ಎಂದು ಕರೆಯುತ್ತೇವೆ.
• ಉದಾ: ಐಸಿಐಸಿಐ ಬ್ಯಾಂಕ್, ಎಚ್ಡಿಎಫ್ಸಿ ಬ್ಯಾಂಕ್, ಯೆಸ್ ಬ್ಯಾಂಕ್, ಕೊಟಕ್ ಮಹೀಂದ್ರಾ ಬ್ಯಾಂಕ್ ಇತ್ಯಾದಿ.

ವಿದೇಶಿ ಬ್ಯಾಂಕುಗಳು


• ಯಾವ ಬ್ಯಾಂಕುಗಳು ವಿದೇಶಿಗರ ಒಡೆತನದಲ್ಲಿವೆಯೋ ಅಂತಹ ಬ್ಯಾಂಕುಗಳನ್ನು ನಾವು ವಿದೇಶಿ ಬ್ಯಾಂಕುಗಳು ಎಂದು ಕರೆಯುತ್ತೇವೆ.
• ಉದಾ : ಸಿಟಿ ಬ್ಯಾಂಕ್, ಎಚ್ಎಸ್ಬಿಸಿ ಬಾಂಕ್, ಇತ್ಯಾದಿ.

ಬ್ಯಾಂಕುಗಳ ರಾಷ್ಟ್ರೀಕರಣ


1969 ರಲ್ಲಿ ಮೊದಲನೇ ಹಂತದ ಬ್ಯಾಂಕುಗಳ ರಾಷ್ಟ್ರೀಕರಣ ಮಾಡಲಾಯಿತು. ಇದಕ್ಕೆ ಕಾರಣಗಳೇನೆಂದರೆ.
1. ಕೃಷಿ ಹಾಗೂ ಕೃಷಿಗೆ ಸಂಬಂಧಿಸಿದ ಉಪಕಸಬುಗಳ ಸಾಲಗಳ ಬಗ್ಗೆ ನಿರ್ಲಕ್ಷ್ಯ.
2. ಅತಿ ಸಣ್ಣ, ಸಣ್ಣ ಹಾಗೂ ಮಾಧ್ಯಮ ಕೈಗಾರಿಕೆಗಳ ಸಾಲ ನೀಡುವಿಕೆಯಲ್ಲಿ ನಿರ್ಲಕ್ಷ್ಯ.
3. ಕೆಳ ಹಾಗೂ ಮಾಧ್ಯಮ ವರ್ಗದವರಿಗೆ ಸಾಲ ಸೌಲಭ್ಯ ಒದಗಿಸುವುದು.
4. ಅಸಮತೋಲನ ನಿವಾರಣೆ.
5. ಸಾರ್ವಜನಿಕರ ಠೇವಣಿಗಳಿಗೆ ಭದ್ರತೆ ಒದಗಿಸುವುದು.

• 1969ರಲ್ಲಿ ಯಾವ ಬ್ಯಾಂಕುಗಳಲ್ಲಿ ರೂ.50 ಕೋಟಿಗಳಿಗಿಂತಲೂ ಅಧಿಕ ಬಂಡವಾಳವಿತ್ತೋ ಅಂಹ ಬ್ಯಾಂಕುಗಳನ್ನು ರಾಷ್ಟ್ರೀಕರಣಗೊಳಿಸಲು ಆಯ್ಕೆ ಮಾಡಲಾಯಿತು. ಈ ಹಂತದಲ್ಲಿ ಹದಿನಾಲ್ಕು (14) ಬ್ಯಾಂಕುಗಳನ್ನು ರಾಷ್ಟ್ರೀಕರಣಗೊಳಿಸಲಾಯಿತು.
1. ಅಲಹಾಬಾದ್ ಬ್ಯಾಂಕ್
2. ಬ್ಯಾಂಕ್ ಆಫ್ ಬರೋಡಾ
3. ಬ್ಯಾಂಕ್ ಆಫ್ ಇಂಡಿಯಾ
4. ಬ್ಯಾಂಕ್ ಆಫ್ ಮಹಾರಾಷ್ಟ್ರ
5. ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ
6. ಕೆನರಾ ಬ್ಯಾಂಕ್
7. ದೇನಾ ಬ್ಯಾಂಕ್
8. ಇಂಡಿಯನ್ ಬ್ಯಾಂಕ್
9. ಇಂಡಿಯನ್ ಓವರ್ಸೀಸ್ ಬ್ಯಾಂಕ್
10. ಪಂಜಾಬ್ ನ್ಯಾಷನಲ್ ಬ್ಯಾಂಕ್
11. ಸಿಂಡಿಕೇಟ್ ಬ್ಯಾಂಕ್
12. ಯುಕೋ ಬ್ಯಾಂಕ್
13. ಯೂನಿಯನ್ ಬ್ಯಾಂಕ್
14. ಯನೈಟೆಡ್ ಬ್ಯಾಂಕ್ ಆಫ್ ಇಂಡಿಯಾ

• 1980ರಲ್ಲಿ ಎರಡನೇ ಹಂತದ ಬ್ಯಾಂಕುಗಳ ರಾಷ್ಟ್ರೀಕರಣ ಮಾಡಲಾಯಿತು. ಯಾವ ಬ್ಯಾಂಕುಗಳ ಬಂಡವಾಳ ರೂ. ಇನ್ನೂರು ಕೋಟಿಗಿಂತಲೂ ಅಧಿಕವಿತ್ತೋ ಅಂತಹ ಬ್ಯಾಂಕುಗಳನ್ನು ಆಯ್ಕೆ ಮಾಡಲಾಯಿತು. ಅವು ಯಾವವೆಂದರೆ:-
1. ಆಂಧ್ರ ಬ್ಯಾಂಕ್
2. ಕಾರ್ಪೋರೇಷನ್ ಬ್ಯಾಂಕ್
3. ನ್ಯೂ ಬ್ಯಾಂಕ್ ಆಫ್ ಇಂಡಿಯಾ
4. ಓರಿಯೆಂಟಡ್ ಬ್ಯಾಂಕ್ ಆಫ್ ಕಾಮರ್ಸ
5. ಪಂಜಾಬ್ ಅಂಡ್ ಸಿಂಧ್ ಬ್ಯಾಂಕ್.