ಕರ್ನಾಟಕದ ವಿದ್ಯುಚ್ಛಕ್ತಿ(Karnataka : Electricity)

 

ಪ್ರಾಮುಖ್ಯತೆ


• ವಿದ್ಯುಚ್ಛಕ್ತಿಯು ಅತ್ಯಂತ ಉಪಯುಕ್ತ ಹಾಗೂ ಅನುಕೂಲಕರವಾದ ಶಕ್ತಿಯ ರೂಪವಾಗಿದೆ.
• ಇದನ್ನು ವಿವಿಧ ಮೂಲಗಳಿಂದ ಉತ್ಪಾದಿಸಿ ಬಹು ದೂರದ ಬಳಕೆಯ ಪ್ರದೇಶಗಳಿಗೆ ಲೋಹದ ತಂತಿಗಳ ಮೂಲಕ ಸುಲಭವಾಗಿ ಸಾಗಿಸಬಹುದು.
• ಅಲ್ಲದೆ ವಿದ್ಯುಚ್ಛಕ್ತಿಯನ್ನು ಶಕ್ತಿಯ ಇತರ ರೂಪಗಳಿಗೆ ಸುಲಭವಾಗಿ ಪರಿವರ್ತಿಸಬಹುದು.
• ಕೈಗಾರಿಕಾ ಕ್ಷೇತ್ರವು ಇದರ ಬಳಕೆಯನ್ನು ಪ್ರಧಾನವಾಗಿ ಅವಲಂಬಿಸಿದೆ.
• ವಿದ್ಯುತ್ತ್ತಿನ ಬಳಕೆಯ ಪ್ರಮಾಣವು ಆರ್ಥಿಕ ಅಭಿವೃದ್ಧಿಯ ಮಟ್ಟವನ್ನು ಸೂಚಿಸುವುದು.ಇದರಿಂದಾಗಿ ವಿದ್ಯುತ್ತಿನ ಉತ್ಪಾದನೆಗೆ ಎಲ್ಲ ರಾಷ್ಟ್ರೀಯ ಹಾಗೂ ರಾಜ್ಯದ ಯೋಜನೆಗಳಲ್ಲಿ ಪ್ರಾಮುಖ್ಯತೆಯನ್ನು ನೀಡಲಾಗಿದೆ.

ಜಲ ವಿದ್ಯುಚ್ಛಕ್ತಿ


• ಕೋಲಾರದ ಚಿನ್ನದ ಗಣಿಗೆ ವಿದ್ಯುಚ್ಛಕ್ತಿಯನ್ನು ಸರಬರಾಜು ಮಾಡಲು 1902 ರಲ್ಲಿ ಶಿವನಸಮುದ್ರದ ಬಳಿ ವಿದ್ಯುದಾಗರವು ಕಾರ್ಯ ಆರಂಭಿಸಿತು. ಇದು ಕಾವೇರಿ ನದಿಗೆ ನಿರ್ಮಿಸಿದ ಯೋಜನೆ.
• ಇದಕ್ಕೆ ಸಮೀಪದಲ್ಲೇ ರಾಜ್ಯದ ಎರಡನೆಯ ಜಲವಿದ್ಯುತ್ ಯೋಜನೆಯನ್ನು 1940 ರಲ್ಲಿ ಶಿಂಷಾ ನದಿಗೆ ನಿರ್ಮಿಸಲಾಯಿತು.
• ಶರಾವತಿ ನದಿಯ ಜೋಗ್ ಜಲಪಾತದ ಬಳಿ ಮಹಾತ್ಮ ಗಾಂಧಿ ಜಲವಿದ್ಯುತ್ ಯೋಜನೆ (1947) ಸ್ಥಾಪನೆಯಾಯಿತು.
• ತರುವಾಯ ಪಂಚವಾರ್ಷಿಕ ಯೋಜನೆಗಳಡಿಯಲ್ಲಿ ಇನ್ನೂ ಹಲವು ಜಲವಿದ್ಯುಚ್ಛಕ್ತಿ ಯೋಜನೆಗಳು ಅಭಿವೃದ್ಧಿಗೊಂಡವು. ಪರಿಣಾಮವಾಗಿ ಕರ್ನಾಟಕವು ಜಲವಿದ್ಯುತ್ ಉತ್ಪಾದನೆಯಲ್ಲಿ ಭಾರತದಲ್ಲಿಯೇ ಮೊದಲನೆಯದಾಗಿದೆ.
• ಕರ್ನಾಟಕದ ಪ್ರಮುಖ ಜಲವಿದ್ಯುಚ್ಛಕ್ತಿ ಯೋಜನೆಗಳು : ಶಿವನಸಮುದ್ರ, ಶಿಂಷಾ (ಕಾವೇರಿ ನದಿ), ಮಹಾತ್ಮ ಗಾಂಧಿ ಜಲವಿದ್ಯುತ್ ಕೇಂದ್ರ (ಶರಾವತಿ ನದಿ), ಸೂಪ, ನಾಗಝರಿ, ಕದ್ರ ಮತ್ತು ಕೊಡಸಳ್ಳಿ (ಕಾಳಿನದಿ), ವಾರಾಹಿ ಮತ್ತು ಮಾರಿ ಕಣಿವೆ, ಭದ್ರ, ತುಂಗಭದ್ರಾ ಮತ್ತು ಆಲಮಟ್ಟಿ (ಕೃಷ್ಣ ನದಿ) ಯೋಜನೆಗಳು.

ಉಷ್ಣ ವಿದ್ಯುತ್ ಯೋಜನೆಗಳು


• ಶಾಖ ಶಕ್ತಿಯನ್ನು ವಿದ್ಯುತ್ ಶಕ್ತಿಯನ್ನಾಗಿ ಪರಿವರ್ತಿಸುವುದಕ್ಕೆ ಉಷ್ಣ ವಿದ್ಯುಚ್ಛಕ್ತಿ ಎನ್ನುವರು.
• ಕರ್ನಾಟಕದಲ್ಲಿ ರಾಯಚೂರು ಶಾಖ ವಿದ್ಯುತ್ ಉತ್ಪಾದನಾ ಕೇಂದ್ರ (RTPS) ಪ್ರಮುಖ ಉಷ್ಣ ಸ್ಥಾವರವಾಗಿದೆ.ಇದನ್ನು 1985 ರಲ್ಲಿ ಶಕ್ತಿ ನಗರದಲ್ಲಿ ಸ್ಥಾಪನೆ ಮಾಡಲಾಯಿತು.ಇದು 1470 ದ.ಲ. ಯೂನಿಟ್ ವಿದ್ಯುಚ್ಛಕ್ತಿ ಉತ್ಪಾದನೆ ಮಾಡುವ ಸಾಮರ್ಥ್ಯ ಹೊಂದಿದೆ.

ಯೋಜಿತ ಉಷ್ಣ(ಶಾಖ) ಸ್ಥಾವರ ಘಟಕಗಳು


1) ರಾಯಚೂರು ಬಳಿಯ ಯರಮರಾಸ್ ಶಾಖ ವಿದ್ಯುತ್ ಕೇಂದ್ರ
2) ಯಾದಗಿರಿ ಶಾಖ ವಿದ್ಯುತ್ ಕೇಂದ್ರ
3) ಆಣ್ಲೇಚಾಕನ ಶಾಖ ವಿದ್ಯುತ್ ಕೇಂದ್ರ
4) ಕಲ್ಕುಣಿಕೆ ಶಾಖ ವಿದ್ಯುತ್ ಕೇಂದ್ರ – ವಿಜಯಪುರ
5) ಕೂಡಿಗಿ ಶಾಖ ವಿದ್ಯುತ್ ಕೇಂದ್ರ – ವಿಜಯಪುರ
6) ಹಣಕೋಣ ಶಾಖ ವಿದ್ಯುತ್ ಕೇಂದ್ರ - ವಿಜಯಪುರ

ಅಣು ವಿದ್ಯುಚ್ಛಕ್ತಿ


• ಪರಮಾಣುವಿನ ವಿದಳನದಿಂದ ಉತ್ಪತ್ತಿಯಾಗುವ ಶಾಖವನ್ನು ವಿದ್ಯಚ್ಛಕ್ತಿಯನ್ನಾಗಿ ಮಾರ್ಪಾಡಿಸಲಾಗುವುದು.
• ಯುರೇನಿಯಂ,ಥೋರಿಯಂ,ರೇಡಿಯಂ ಮತ್ತು ಲಿಥಿಯಂ ಖನಿಜಗಳ ಅಣು ವಿದಳನದಿಂದ ವಿದ್ಯುತ್ತನ್ನು ಉತ್ಪಾದಿಸುವರು.
• ಕರ್ನಾಟಕದ ಕಾರವಾರ ಜಿಲ್ಲೆಯ ಕೈಗಾ ಎಂಬಲ್ಲಿ ಅಣುಸ್ಥಾವರವನ್ನು ನಿರ್ಮಿಸಲಾಗಿದೆ. ಇದು ಇತ್ತೀಚಿಗೆ 2000 ದಲ್ಲಿ ಎರಡನೆಯ ಘಟಕವು ಉತ್ಪಾದನೆಯನ್ನು ಆರಂಭಿಸಿತು. ಇದರಲ್ಲಿ ನಾಲ್ಕು ಘಟಕಗಳಿವೆ.
• ಇದು 880 ಮೆ.ವ್ಯಾಟ್ ಸಾಮರ್ಥ್ಯದ ವಿದ್ಯುತ್ ಉತ್ಪಾದಿಸುತ್ತಿದೆ.
• ಇಲ್ಲಿ ಇನ್ನು 2 ಯೋಜಿತ ಘಟಕಗಳನ್ನು ತೆರೆಯಲು ಉದ್ದೇಶಿಸಲಾಗಿದ್ದು, ಇವು 2024 -25 ರಲ್ಲಿ ಕಾರ್ಯಾರಂಭಗೊಳಿಸಲಿವೆ.