ಕನ್ನಡ ವ್ಯಾಕರಣ

 

ಕನ್ನಡ ವ್ಯಾಕರಣ


ಭಾಷೆಗೆ ಸಂಸ್ಕಾರವನ್ನುಂಟು ಮಾಡುವ ನಿಯಮಾವಳಿಗಳಿಗೆ ವ್ಯಾಕರಣ ಎಂದು ಕರೆಯುವರು
ಯಾವ ಭಾಷೆಯನ್ನಾದರೂ ಶುದ್ಧವಾಗಿ ಪ್ರಯೋಗಿಸಬೇಕಾದರೆ ಆ ಭಾಷೆಯ ವ್ಯಾಕರಣದ ಪರಿಚಯ ಅತ್ಯಾವಶ್ಯಕ.
ವ್ಯಾಕರಣ ಜ್ಞಾನವಿಲ್ಲದೆ ಭಾಷೆಯ ಅಧ್ಯಯನ ಪೂರ್ಣವಾಗದು.

ಕನ್ನಡ ವರ್ಣಮಾಲೆ


ವ್ಯವಸ್ಥಿತವಾಗಿ ಜೋಡಿಸಿದ ಅಕ್ಷರ ಗುಂಪನ್ನು ವರ್ಣಮಾಲೆ ಎನ್ನಬಹುದು.
ಅ ಆ ಇ ಈ ಉ ಊ ಋ ಎ ಏ ಐ ಒ ಓ ಔ ಅಂ ಅಃ
ಕ ಖ ಗ ಘ ಙ
ಚ ಛ ಜ ಝ ಞ
ಟ ಠ ಡ ಢ ಣ
ತ ಥ ದ ಧ ನ
ಪ ಫ ಬ ಭ ಮ
ಯ ರ ಲ ವ ಶ ಷ ಸ ಹ ಳ

ವರ್ಣಮಾಲೆಯ ವಿಧಗಳು


1> ಸ್ವರಗಳು (Vowels)
2> ವ್ಯಂಜನಗಳು (Consonants)
3> ಯೋಗವಾಹಗಳು

ಸ್ವರಗಳು (Vowels)


ಸ್ವರಗಳು:13
ಸ್ವತಂತ್ರವಾಗಿ ಉಚ್ಛರಿಸಲ್ಪಡುವ ಅಕ್ಷರಗಳನ್ನು ಸ್ವರಗಳು ಎಂದು ಕರೆಯುತ್ತೇವೆ.
ಉದಾ: ಅ ಆ ಇ ಈ ಉ ಊ ಋ ಎ ಏ ಐ ಒ ಓ ಔ

ಸ್ವರಗಳ ವಿಧಗಳು (types of Vowels)


I ) ಹ್ರಸ್ವಸ್ವರ


ಒಂದು ಮಾತ್ರೆಯ ಕಾಲದಲ್ಲಿ ಉಚ್ಛರಿಸಲ್ಪಡುವ ಅಕ್ಷರಗಳಿಗೆ ಹ್ರಸ್ವಸ್ವರ ಅಕ್ಷರಗಳು ಎನಿಸುವುದು.
ಉದಾ:ಅ ಇ ಉ ಋ ಎ ಒ

II ) ದೀರ್ಘ ಸ್ವರ


ಎರಡು ಮಾತ್ರೆಯ ಕಾಲದಲ್ಲಿ ಉಚ್ಛರಿಸಲ್ಪಡುವ ಅಕ್ಷರಗಳಿಗೆ ದೀರ್ಘ ಸ್ವರ ಎನ್ನಲಾಗಿದೆ.
ಉದಾ:ಆ ಈ ಊ ಏ ಓ ಐ ಔ

III ) ಪ್ಲುತ ಸ್ವರ


ಮೂರು ಮಾತ್ರೆಗಳ ಕಾಲದಲ್ಲಿ ಉಚ್ಛರಿಸಲ್ಪಡುವ ಅಕ್ಷರಗಳಿಗೆ ಪ್ಲುತ ಸ್ವರ ಎನ್ನಲಾಗಿದೆ.
ಉದಾ:
ಅಕ್ಕಾ=ಕ್+ಆ=ಕಾs
ಅಮ್ಮಾ= ಮ್+ಆ=ಮಾs
ಅಯ್ಯಾ=ಯ್+ಆ=ಯಾs

2> ವ್ಯಂಜನಗಳು (Consonants)


ವ್ಯಂಜನಗಳು:34
ಸ್ವರಾಕ್ಷರಗಳ ಸಹಾಯದಿಂದ ಉಚ್ಛರಿಸಲ್ಪಡುವ ಅಕ್ಷರಗಳಿಗೆ ವ್ಯಂಜನಗಳು ಎಂದು ಕರೆಯುತ್ತೇವೆ.

ವ್ಯಂಜನಗಳ ವಿಧಗಳು


I) ವರ್ಗೀಯ ವ್ಯಂಜನಾಕ್ಷರಗಳು


ಸ್ವರಗಳ ಸಹಾಯದಿಂದ ಹಾಗೂ ಒಂದು ಮಾತ್ರಾ ಕಾಲದಲ್ಲಿ ಉಚ್ಛರಿಸಲ್ಪಡುವ ಎಲ್ಲಾ ಕಾಗುಣಿತಾಕ್ಷರಗಳಿಗೆ ವರ್ಗೀಯ ವ್ಯಂಜನಾಕ್ಷರಗಳು ಎಂದು ಕರೆಯುತ್ತೇವೆ
ಉದಾ:
ಕ ವರ್ಗ - ಕ ಖ ಗ ಘ ಙ
ಚ ವರ್ಗ - ಚ ಛ ಜ ಝ ಞ
ಟ ವರ್ಗ - ಟ ಠ ಡ ಢ ಣ
ತ ವರ್ಗ - ತ ಥ ದ ಧ ನ
ಪ ವರ್ಗ- ಪ ಫ ಬ ಭ ಮ

ವರ್ಗೀಯ ವ್ಯಂಜನಾಕ್ಷರಗಳ ವಿಧಗಳು


A) ಅಲ್ಪ ಪ್ರಾಣಾಕ್ಷರಗಳು


ಅಲ್ಪ ಪ್ರಾಣಾಕ್ಷರಗಳು:10
ಕಡಿಮೆ ಸ್ವರದಿಂದ / ಕಡಿಮೆ ಉಸಿರಿನಿಂದ ಉಚ್ಚರಿಸಲ್ಪಡುವ ಕಾಗುಣಿತಾಕ್ಷರಗಳಿಗೆ ಅಲ್ಪ ಪ್ರಾಣಾಕ್ಷರಗಳು ಎನ್ನಲಾಗಿದೆ.
ಉದಾ:
ಕ,ಚ,ಟ.ತ,ಪ,
ಗ,ಜ,ಡ,ದ,ಬ

B) ಮಹಾ ಪ್ರಾಣಾಕ್ಷರಗಳು


ಮಹಾ ಪ್ರಾಣಾಕ್ಷರಗಳು:10
ಹೆಚ್ಚು ಉಸಿರಿನಿಂದ ಉಚ್ಛರಿಸಲ್ಪಡುವ ಎರಡನೆಯ ಮತ್ತು ನಾಲ್ಕನೆಯ ವ್ಯಂಜನಗಳಿಗೆ ಮಹಾ ಪ್ರಾಣಾಕ್ಷರಗಳು ಎನ್ನಲಾಗಿದೆ.
ಉದಾ:
ಖ, ಛ ,ಠ ,ಧ, ಫ , ಘ ,ಝ, ಢ, ಧ, ಭ

C) ಅನುನಾಸಿಕಾಕ್ಷರಗಳು


ಅನುನಾಸಿಕಾಕ್ಷರಗಳು:5
ಮೂಗಿನ ಸಹಾಯದಿಂದುಚ್ಛರಿಸಲ್ಪಡುವ ವರ್ಣಕ್ಕೆ ಅನುನಾಸಿಕಾಕ್ಷರಗಳು ಎನ್ನಲಾಗಿದೆ. ಉದಾ:
ಙ ,ಞ ,ಣ, ನ, ಮ,

II ) ಅವರ್ಗೀಯ ವ್ಯಂಜನಾಕ್ಷರಗಳು


ಅವರ್ಗೀಯ ವ್ಯಂಜನಾಕ್ಷರಗಳು:9 ವರ್ಗಗಳಾಗಿ ವಿಂಗಡಿಸಲಾರದ ವ್ಯಂಜನಗಳಿಗೆ ವರ್ಗೀಯ ವ್ಯಂಜನಾಕ್ಷರಗಳೆಂದು ಹೆಸರು.
ಉದಾ:
ಯ ,ರ, ಲ, ವ ,ಶ, ಷ ,ಸ ,ಹ, ಳ

III) ಯೋಗವಾಹಗಳು


ಯೋಗವಾಹಗಳು:2
ಬೇರೆ ಅಕ್ಷರಗಳ ಸಹಯೋಗದೊಂದಿಗೆ ಉಚ್ಛರಿಸಲ್ಪಡುವ ಅಕ್ಷರಗಳಿಗೆ ಯೋಗವಾಹಗಳು ಎನ್ನಲಾಗಿದೆ.
ಉದಾ : ಅಂ ಅಃ

ಯೋಗವಾಹಗಳ ವಿಧಗಳು


A) ಅನುಸ್ವರ


ಅಂ-ಯಾವುದೇ ಅಕ್ಷರವು ಒಂದು ಸೊನ್ನೆ ಬಿಂದು, ಎಂಬ ಸಂಕೇತನವನ್ನು ಹೊಂದಿದ್ದರೆ ಅದು ಅನುಸ್ವಾರಾಕ್ಷರ ಎನಿಸುವುದು, ಉದಾ:ಅಂಕ , ಒಂದು, ಎಂಬ

B) ವಿಸರ್ಗ


ಅಃ -ಯಾವುದೇ ಅಕ್ಷರವು ಬಿಂದು ಸಮೇತ ಅಂದರೆ ಒಂದರ ಮೇಲೊಂದು ಇರುವ ಎರಡು ಸೊನ್ನೊಗಳ ಸಂಕೇತವನ್ನು ಹೊಂದಿದ್ದರೆ ಅದು ವಿಸರ್ಗಾಕ್ಷರ ಎನಿಸುವುದು,ಉದಾ:ಅಂತಃ , ದುಃಖ, ಸಃ, ನಃ

ಸಂಯುಕ್ತಾಕ್ಷರಗಳು


ಯಾವುದಾದರೂ ಒಂದು ಪದದಲ್ಲಿ ಎರಡು ಅಥವಾ ಅದಕ್ಕಿಂತ ಹೆಚ್ಚು ವ್ಯಂಜನಗಳು ಒಂದರ ನಂತರ ಒಂದು ಬಂದು ಅವುಗಳಾದ ಮೇಲೆ ಒಂದು ಸ್ವರ ಬಂದರೆ ಅಂತಹ ಅಕ್ಷರಗಳನ್ನು ಸಂಯುಕ್ತಾಕ್ಷರ / ಒತ್ತಕ್ಷರ ಎಂದು ಕರೆಯುತ್ತೇವೆ.
ಉದಾ:
ಕ್ + ತ್ + ಅ = ಕ್ತ
ಪ್ + ರ್ + ಅ = ಪ್ರ
ಗ್ + ಗ್ + ಅ = ಗ್ಗ
ಸ್ + ತ್ + ರ್ + ಅ = ಸ್ತ್ರ

ಸಂಯುಕ್ತಾಕ್ಷರಗಳ ವಿಧಗಳು


I) ಸಜಾತಿಯ ಸಂಯುಕ್ತಾಕ್ಷರಗಳು


ಯಾವುದೇ ಪದದಲ್ಲಿ ಒಂದೇ ವ್ಯಂಜನವು ಎರಡು ಬಾರಿ ಬಂದು ನಂತರ ಸ್ವರವೊಂದು ಬಂದರೆ ಅಂತಹ ಅಕ್ಷರಗಳನ್ನು ಸಜಾತೀಯ ವ್ಯಂಜನಾಕ್ಷರಗಳು ಎನ್ನುತ್ತೇವೆ.
ಉದಾ:
ಕತೇ–ಕ್+ತ್+ತ್+ಎ
ಅಕ್ಕ –ಅ+ಕ್+ಕ್+ಅ
ಹಗ್ಗ,ಅಜ್ಜ,ತಮ್ಮ,ಅಪ್ಪ

II) ವಿಜಾತೀಯ ಸಂಯುಕ್ತಾಕ್ಷರಗಳು


ಯಾವುದೇ ಪದದಲ್ಲಿ ಎರಡು ಬೇರೆ ಬೇರೆ ವ್ಯಂಜನಗಳು ಬಂದು ನಂತರ ಸ್ವರವೊಂದು ಬಂದರೆ ಅಂತಹ ಅಕ್ಷರಗಳನ್ನು ವಿಜಾತೀಯ ಸಂಯುಕ್ತಾಕ್ಷರಗಳು ಎನ್ನುತ್ತೇವೆ.
ಉದಾ:
ಅಗ್ನಿ- ಆ + ಗ್ + ನ್ + ಇ
ಆಪ್ತ – ಆ + ಪ್ + ತ್ + ಅ
ಸೂರ್ಯ , ಮಗ್ನ , ಸ್ವರ , ಪ್ರಾಣ