ಆರ್ಥಿಕ ಯೋಜನೆಗಳು(Financial Plans)

 

ಭಾರತದಲ್ಲಿ ಯೋಜನೆಗಳ ಹಿನ್ನೆಲೆ :


ಎ) 1934ರಲ್ಲಿ ಸರ್.ಎಂ.ವಿಶ್ವೇಶ್ವರಯ್ಯನವರು “ಭಾರತಕ್ಕೆ ಯೋಜಿತ ಅರ್ಥವ್ಯವಸ್ಥೆ” ಎಂಬ ಲೇಖನವನ್ನು ಬರೆದು ಭಾರತಕ್ಕೆ ಯೋಜನೆಗಳ ಮಹತ್ವವನ್ನು ತಿಳಿಸಿದರು.
ಬಿ) 1938 ರಲ್ಲಿ ಜವಾಹಾರಲಾಲ್ ನೆಹರು ಅವರ ನೇತೃತ್ವದಲ್ಲಿ ರಾಷ್ಟ್ರೀಯ ಯೋಜನಾ ಸಮಿತಿಯನ್ನು ಸ್ಥಾಪಿಸಿದರು.

ಯೋಜನೆಗಳ ಉದ್ದೇಶಗಳು :


ಎ) ಆರ್ಥಿಕಾಭಿವೃದ್ದಿ
ಬಿ) ನಿರುದ್ಯೋಗ ನಿವಾರಣೆ
ಸಿ) ಬಡತನ ನಿವಾರಣೆ
ಡಿ) ದೇಶದ ಸರ್ವಾಂಗೀಣಾಭಿವೃದ್ಧಿ
ಇ) ರಾಷ್ಟ್ರೀಯ ಆದಾಯವನ್ನು ಹೆಚ್ಚಿಸುವುದು
ಎಫ್) ತಲಾದಾಯವನ್ನು ಹೆಚ್ಚಿಸುವುದು
ಜಿ) ಮೂಲಭೂತ ಸೌಕರ್ಯಗಳನ್ನು ಒದಗಿಸುವುದು
ಹೆಚ್) ಕೈಗಾರಿಕಾಭಿವೃದ್ದಿ
ಐ) ಅಸಮಾನತೆಯ ನಿವಾರಣೆ
ಜೆ) ಕೃಷಿ ಹಾಗೂ ಕೃಷಿಗೆ ಸಂಬಂಧಿಸಿದ ಉಪಕಸಬುಗಳ ಅಭಿವೃದ್ದಿ
ಹೆಚ್) ಸರ್ವೋತೋಮುಖ ಅಭಿವೃದ್ದಿ.

ಯೋಜನಾ ಆಯೋಗ (Planning Commission)


ಯೋಜನಾ ಆಯೋಗವನ್ನು ಮಂತ್ರಿಮಂಡಲದ ನಿರ್ಣಯದಂತೆ 15ರ ಮಾರ್ಚ 1950ರಲ್ಲಿ ಸ್ಥಾಪಿಸಲಾಯಿತು. ಇದು ಒಂದು ಸಂವಿಧಾನೇತರ ಸಂಸ್ಥೆಯಾಗಿದೆ. ಇತ್ತೀಚೆಗೆ ಕೇಂದ್ರ ಸರ್ಕಾರ ರದ್ದುಗೊಳಿಸಿ, ಬದಲಾಗಿ ನೀತಿ ಆಯೋಗವನ್ನು ಜಾರಿಗೆ ತಂದಿದೆ

ಧ್ಯೇಯ


“ಮಾನವ ಸಂಪತ್ತು ಹಾಗೂ ನೈಸರ್ಗಿಕ ಸಂಪತ್ತನ್ನು ಬಳಸಿಕೊಂಡು ಭಾರತದ ಜನತೆಯ ಜೀವನ ಶೈಲಿಯನ್ನು ಉತ್ತಮಗೊಳಿಸುವುದು”

ಯೋಜನಾ ಆಯೋಗದ ಸಂಯೋಜನೆ


ಅಧ್ಯಕ್ಷರು : ಪ್ರಧಾನ ಮಂತ್ರಿಗಳು
ಉಪಾಧ್ಯಕ್ಷರು : ಮೋಂಟೆಕ್ಸಿಂಗ್ ಆಹ್ಲುವಾಲಿಯಾ (ಕೊನೆಯ ಉಪಾಧ್ಯಕ್ಷರು)
ಮತ್ತು ಇತರೆ ಸದಸ್ಯರುಗಳು, ಭಾರತ ಸರ್ಕಾರವು ಒಬ್ಬ ಹಿರಿಯ ಐ.ಎ.ಎಸ್.ಅಧಿಕಾರಿಯನ್ನ ಸಹ ಇದರ ಕಾರ್ಯದರ್ಶಿಯಾಗಿ ನೇಮಿಸುತ್ತಿತ್ತು.

ಯೋಜನಾ ಆಯೋಗದ ಕಾರ್ಯಗಳು


ಎ) ಭಾರತದಲ್ಲಿ ಲಭ್ಯವ ಇರುವ ಭೌತಿಕ, ಅರ್ಥಿಕ ಹಾಗೂ ಮಾನವ ಸಂಪನ್ಮೂಲಗಳ ಅಂದಾಜು.
ಬಿ) ಈ ಸಂಪನ್ಮೂಲಗಳನ್ನು ಪರಿಣಾಮಕಾರಿಯಾಗಿ ಉಪಯೋಗಿಸಲು ಯೋಜನೆಗಳನ್ನು ರೂಪಿಸುವುದು.
ಸಿ) ಯೋಜನೆಯ ಹಂತಗಳನ್ನು ಆದ್ಯತೆಯ ಮೇರೆಗೆ ಹಾಗೂ ಅನುಕೂಲಕ್ಕೆ ತಕ್ಕಂತೆ ಮಾಡುವುದು.
ಡಿ) ಆರ್ಥಿಕ ಬೆಳವಣಿಗೆಗಳಿಗೆ ಅಡ್ಡಿಯಾಗಿರುವ ಅಂಶಗಳ ಬಗ್ಗೆ ತಿಳಿಸುವುದು.
ಇ) ಯೋಜನೆಯ ಪ್ರತಿ ಹಂತಗಳ ಸಮಸ್ಯೆಗಳಿಗೆ ಪರಿಹಾರ ಒದಗಿಸುವುದು ಹಾಗೂ ಅವುಗಳನ್ನು ಮೌಲ್ಯಮಾಪನ ಮಾಡುವುದು.
ಎಫ್) ಯೋಜನೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವುದು.
ಜಿ) ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಿಗೆ ಸಲಹೆಗಳನ್ನು ಕೊಡುವುದು.
ಹೆಚ್) ಪ್ರಸ್ತುತ ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ಸ್ಥಿತಿಯಲ್ಲಿ ಯೋಜನೆಯನ್ನು ಯಶಸ್ವಿ ಯಾಗಿ ಜಾರಿಗೆ vರÀಲು ಪ್ರಯತ್ನಿಸುವುದು.

ನೀತಿ ಆಯೋಗ (NITI )


• National Institution for Transforming India (NITI) “ನೀತಿ” ಎಂದರೆ :- ಕೇಂದ್ರ ಸರ್ಕಾರವು ಇತ್ತೀಚೆಗೆ ಯೋಜನಾ ಆಯೋಗವನ್ನು ರದ್ದುಗೊಳಿಸಿ ಅದರ ಬದಲು ‘ನೀತಿ’ ಸಂಸ್ಥೆಯನ್ನು ಸ್ಥಾಪಿಸಿದ್ದು, ಅದನ್ನು ಭಾರತ ಪರಿವರ್ತನಾ ರಾಷ್ಟ್ರೀಯ ಸಂಸ್ಥೆ ಎಂದು ಹೆಸರಿಸಿದೆ. ಇದನ್ನು ಪ್ರಧಾನಿ ನರೇಂದ್ರ ಮೋದಿ ಜನವರಿ 1,2015 ರಂದು ವಿದ್ಯುಕ್ತವಾಗಿ ಚಾಲನೆಗೊಳಿಸಿದರು. ಇದು ಮುಖ್ಯವಾಗಿ ಭಾರತದ ಆರ್ಥಿಕ ಬೆಳವಣಿಗೆಗೆ ಸಹಕಾರಿಯಾಗಿ ಕೇಂದ್ರ ಮತ್ತು ರಾಜ್ಯ ಸರಕಾರಗಳ ನೀತಿ ರೂಪಣೆಯಲ್ಲಿ ಬೌದ್ಧಿಕ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತದೆ.
• ಪ್ರಧಾನಿಯು ‘ನೀತಿ’ ಆಯೋಗದ ಅಧ್ಯಕ್ಷರಾದರೆ, ಪ್ರಥಮ ಆಯೋಗದ ಉಪಾಧ್ಯಕ್ಷರಾಗಿ ಅಮೇರಿಕಾದ (ಅನಿವಾಸಿ ಭಾರತೀಯ) ಖ್ಯಾತ ಅರ್ಥಶಾಸ್ತ್ರಜ್ಞ ಆರ್ಥಿಕ ನಿಪುಣ, ಪ್ರಸಿದ್ಧ ಹಣಕಾಸು ನೀತಿಜ್ಞ ಆರವಿಂದ್ ಪನಗಾರಿಯಾರನ್ನು ನೇಮಿಸಲಾಗಿತ್ತು, ಅವರು ರಾಜೀನಾಮೆ ನೀಡಿದ ಕಾರಣ ಅವರ ಜಾಗಕ್ಕೆ ಹಿರಿಯ ಅರ್ಥಶಾಸ್ತ್ರಜ್ಞ ರಾಜೀವ್ ಕುಮಾರ್ ಅವರನ್ನು ನೇಮಿಸಲಾಗಿದೆ. ಇವರು ಕೇಂದ್ರ ಸರ್ಕಾರದ ಕ್ಯಾಬಿನೆಟ್ ದರ್ಜೆಯ ಸಚಿವರ ಸ್ಥಾನಮಾನ ಪಡೆಯಲಿದ್ದಾರೆ.

ನೀತಿ ಆಯೋಗದ ಸದಸ್ಯರು


1. ಅಧ್ಯಕ್ಷರು: ಪ್ರಧಾನಿ ನರೇಂದ್ರ ಮೋದಿ,
2. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ: ಅಮಿತಾಭ್ ಕಾಂತ್
3. ಉಪಾಧ್ಯಕ್ಷ: ಅರವಿಂದ್ ಪನಗಾರಿಯ
4. ಅಧಿಕಾರನಿಮಿತ್ತ ಸದಸ್ಯರು: ರಾಜನಾಥ್ ಸಿಂಗ್, ಅರುಣ್ ಜೇಟ್ಲಿ, ಸುರೇಶ್ ಪ್ರಭು ಮತ್ತು ರಾಧಾ ಮೋಹನ್ ಸಿಂಗ್
5. ವಿಶೇಷ ಆಹ್ವಾನಿತರು: ನಿತಿನ್ ಗಡ್ಕರಿ, ಸ್ಮೃತಿ ಜುಬಿನ್ ಇರಾನಿ ಮತ್ತು ತನ್ವರ್ ಚಂದ್ ಗೆಹ್ಲೋಟ್
6. ಪೂರ್ಣ ಅವಧಿ ಸದಸ್ಯರು: ಬೈಬೆಕ್ ದೇಬ್ರಾಯ್(ಅರ್ಥಶಾಸ್ತ್ರಜ್ಞ), ವಿ ಕೆ ಸಾರಸ್ವತ (ಮಾಜಿ DRDO ಮುಖ್ಯಸ್ಥ) ಮತ್ತು ರಮೇಶ್ ಚಂದ್ (ಕೃಷಿ ತಜ್ಞ)
7. ಆಡಳಿತದ ಸಮಿತಿ (ಕೌನ್ಸಿಲ್): ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಎಲ್ಲಾ ಮುಖ್ಯಮಂತ್ರಿಗಳು ಮತ್ತು ಲೆಫ್ಟಿನೆಂಟ್ ಗವರ್ನರ್ಗಳು

ಕಾರ್ಯಕ್ಷೇತ್ರ


ದೇಶದ ಅಭಿವೃದ್ಧಿಗೆ ಪರಿಗಣಿಸಬೇಕಾದ ವಿಷಯಗಳು,ಕ್ಷೇತ್ರಗಳು ಮತ್ತು ತಂತ್ರಗಳ ಕುರಿತು ರಾಜ್ಯಗಳ ಸಲಹೆಯೊಂದಿಗೆ ನೀತಿ ರೂಪಿಸುವುದು ಇದರ ಪ್ರಮುಖ ಕೆಲಸ. ಕೇಂದ್ರ -ರಾಜ್ಯಗಳ ನೀತಿ ರೂಪಣೆ ವಿಷಯದಲ್ಲಿ "ಚಿಂತಕರ ಚಾವಡಿ"ಯ ಪಾತ್ರವಹಿಸಿ ಸಲಹೆ ಸೂಚನೆಗಳನ್ನು ನೀಡುವುದು,ತಳಮಟ್ಟದಿಂದಲೇ ಅಭಿವೃದ್ಧಿಯಾಗುವಂತೆ ನೋಡಿಕೊಳ್ಳುವುದು ಮತ್ತು ಅಭಿವೃದ್ಧಿಯ ಮೌಲ್ಯಮಾಪನ ಮಾಡುವುದು.