ಭಾರತದ ಆರ್ಥಿಕ ವ್ಯವಸ್ಥೆ(Indian economy system)

 

ಭಾರತದ ಆರ್ಥಿಕ ವ್ಯವಸ್ಥೆಯ ಮುಖ್ಯ ಲಕ್ಷಣಗಳು:


1. ಮಿಶ್ರ ಆರ್ಥಿಕ ವ್ಯವಸ್ಥೆ
ಸ್ವಾತಂತ್ರ್ಯಾ ನಂತರ ಭಾರತವು ಬಂಡವಾಳಶಾಹಿ ಹಾಗೂ ಸಮಾಜವಾದಿ ಆರ್ಥಿಕ ವ್ಯವಸ್ಥೆಗಳ ಕೆಲವು ಉತ್ತಮ ಗುಣಗಳ ಸಮ್ಮಿಶ್ರವಾಗಿದೆ. ಭಾರತದಲ್ಲಿ ಸಾರ್ವಜನಿಕ ವಲಯ, ಖಾಸಗಿ ವಲಯ ಹಾಗೂ ಜಂಟೀ ವಲಯಗಳು ಅಸ್ತಿತ್ವದಲ್ಲಿವೆ.
2. ಕೃಷಿ ಅವಲಂಬಿತ ಆರ್ಥಿಕ ವ್ಯವಸ್ಥೆ :
2011ರ ಜನಗಣತಿಯ ಪ್ರಕಾರ ಶೇ. 68.8 ರಷ್ಟು ಜನರು ಇನ್ನೂ ಗ್ರಾಮಗಳಲ್ಲಿ ವಾಸಿಸುತ್ತಾರೆ. ಅವರಲ್ಲಿ ಅಂದಾಜು ಶೇಕಡಾ ತೊಂಬತ್ತಕ್ಕೂ ಹೆಚ್ಚು ಜನರು ಕೃಷಿಯ ಮೇಲೆ ನೇರವಾಗಿ ಅಥವಾ ಪರೋಕ್ಷವಾಗಿ ಅವಲಂಬಿತರಾಗಿದ್ದಾರೆ.
3. ನಿರುದ್ಯೋಗ ಸಮಸ್ಯೆ :
ಭಾರತವು ಎದುರಿಸುತ್ತಿರುವ ಹಾಗೂ ಭಾರತವನ್ನು ಬೃಹದಾಕಾರವಾಗಿ ಕಾಡುತ್ತಿರುವ ಸಮಸ್ಯೆ ನಿರುದ್ಯೋಗ ಸಮಸ್ಯೆ. ಭಾರತದ ಅಭಿವೃದ್ದಿಗೆ ಮಾರಕವಾಗಿ ಪರಿಗಣಿಸಿರುವ ಮತ್ತು ಯುವಶಕ್ತಿಯ ಸೋರಿಕೆಯಾಗುತ್ತಿರುವುದು ನಿರುದ್ಯೋಗ ಸಮಸ್ಯೆ.
ಭಾರತದ ಅರ್ಥ ವ್ಯವಸ್ಥೆ ಉದ್ಯೋಗದ ಕೊರತೆಯಿಂದ ಕುಂಠಿತಗೊಳ್ಳುತ್ತಿದೆ.
4. ಮೂಲಭೂತ ಸೌಕರ್ಯಗಳ ಕೊರತೆ :
ಭಾರತದಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯಿಂದಾಗಿ ಅರ್ಥ ವ್ಯವಸ್ಥೆಯ ಶೀಘ್ರ ಬೆಳವಣಿಗೆ ಸಾಧ್ಯವಾಗುತ್ತಿಲ್ಲ.
5. ಆರ್ಥಿಕ ಹಾಗೂ ಸಾಮಾಜಿಕ ವ್ಯವಸ್ಥೆಯ ಸಮಸ್ಯೆ :
ಆರ್ಥಿಕ ಮತ್ತು ಸಾಮಾಜಿಕ ವ್ಯವಸ್ಥೆಗಳೆರಡೂ ಪರಸ್ಪರ ಒಂದಕ್ಕೊಂದು ಪೂರಕವಾಗಿರುವುದು ಉತ್ತಮ. ಇವು ಒಂದನ್ನೊಂದು ಅವಲಂಬಿಸಿರುತ್ತವೆ. ಈ ಅವಲಂಬನೆಯಿಂದಾಗಿ ಇವು ಒಂದಕ್ಕೊಂದು ಸಹಕಾರಿಯಾಗಿದ್ದು, ಬೆಳವಣಿಗೆ ಸ್ಪಂದಿಸುವಂತಿದ್ದರೆ ಎರಡು ಕ್ಷೇತ್ರಗಳಲ್ಲಿ ನಾವು ಬೆಳವಣಿಗೆಯನ್ನು ಕಾಣಬಹುದು.
6. ಭಾರತ ಒಂದು ಅಭಿವೃದ್ಧಿಶೀಲ ರಾಷ್ಟ್ರ :
ಭಾರತವು ಶೀಘ್ರವಾಗಿ ಅಭಿವೃದ್ದಿ ಹೊಂದುತ್ತಿರುವ ಅಭಿವೃದ್ಧಿ ಶೀಲ ರಾಷ್ಟ್ರವಾಗಿದ್ದು, ಭಾರತದ ಅರ್ಥವ್ಯವಸ್ಥೆಯು ಕೃಷಿಆಧಾರಿತವಾಗಿದ್ದರೂ, ಅದು ಮಿಶ್ರ ಆರ್ಥಿಕ ವ್ಯವಸ್ಥೆಯನ್ನು ಹೊಂದಿದೆ.
7. ಕ್ರಮಬದ್ದವಾಗಿ ಅಭಿವೃದ್ಧಿಗೊಳ್ಳದ ಆರ್ಥಿಕತೆ :
ಭಾರತದ ಅರ್ಥವ್ಯವಸ್ಥೆಯು ಅಭಿವೃದ್ದಿ ಸಾಧಿಸುತ್ತಿದ್ದರೂ ಅದು ಕ್ರಮಬದ್ಧವಾಗಿ ಸಾಗುತ್ತಿಲ್ಲ. ಆದ್ದರಿಂದಾಗಿ ಭಾರತದ ಅರ್ಥವ್ಯವಸ್ಥೆಯಲ್ಲಿ ಸುಧಾರಣೆಯಾಗಿದ್ದರೂ ಅದು ಮೇಲ್ನೊಟ್ಟಕ್ಕೆ ಕಾಣುತ್ತಿಲ್ಲ.