ವರ್ಗೀಕರಣ (Classification)

 

• ಭೂಮಿಯ ಮೇಲೆ ಅಸಂಖ್ಯಾತ ಜೀವಿಗಳು ವಾಸಿಸುತ್ತಿದ್ದು,ಸುಮಾರು 1.9 ಮಿಲಿಯನ್ ಪ್ರಭೇದಗಳು ಇವೆ ಎಂದು ಗುರುತಿಸಲಾಗಿದೆ.
• ಅಧ್ಯಯನದ ಅನುಕೂಲಕ್ಕಾಗಿ ಜೀವಿಗಳನ್ನು ಅವುಗಳ ಹೋಲಿಕೆ ಹಾಗೂ ವ್ಯತ್ಯಾಸಗಳಿಗನುಗುಣವಾಗಿ, ವಿವಿಧ ಗುಂಪುಗಳನ್ನಾಗಿ ವಿಂಗಡಿಸಿದ್ದಾರೆ. ಹಾಗೂ ಜೀವಿಗಳ ವರ್ಗೀಕರಣದ ಶಾಸ್ತ್ರವನ್ನು ವರ್ಗೀಕರಣ ಶಾಸ್ತ್ರಎಂದು ಕರೆಯುತ್ತಾರೆ .
• ಚರಕ (ಕ್ರಿ.ಪೂ. 600) : ಭಾರತದ ಆಯುರ್ವೇದ ಪಿತಾಮಹ ಎಂದು ಕರೆಯರ್ಳಲ್ಪಟ್ಟ ಚರಕನು, ಚರಕ ಸಂಹಿತ ಎಂಬ ಪುಸ್ತಕದಲ್ಲಿ ಸುಮಾರು 340 ವಿಧಗಳ ಸಸ್ಯಗಳ, 200 ವಿಧಗಳ ಪ್ರಾಣಿಗಳ ಪಟ್ಟಿ ಮಾಡಿದ್ದಾನೆ.
• ಅರಿಸ್ಟಾಟಲ್ : ಜೀವಶಾಸ್ತ್ರ ಪಿತಾಮಹ ಎಂದು ಜನಪ್ರಿಯರಾದ ಅರಿಸ್ಟಾಟಲ್ ಸಸ್ಯಗಳು ಮತ್ತು ಪ್ರಾಣಿಗಳನ್ನು ಈ ಕೆಳಗಿನಂತೆ ವಿಂಗಡಿಸಿದ್ದಾರೆ.
• ಸಸ್ಯಗಳು : ಮೃದುಕಾಂಡವಿರುವ ಮೂಲಿಕೆಗಳುಸ, ಗಟ್ಟಿಯಾದ ಕೆಲವು ಕಾಂಡಗಳಿರುವ ಪೊದೆಗಳು, ಗಟ್ಟಿಯಾದ ಒಂದು ಕಾಂಡವಿರುವ ಮರಗಳು
• ಪ್ರಾಣಿಗಳು : ನೀರಿನಲ್ಲಿ ವಾಸಿಸುವ ಜಲಚರಗಳು ,ನೆಲದ ಮೇಲೆ ವಾಸಿಸುವ ನೆಲಚರಗಳು,ಗಾಳಿಯಲ್ಲಿ ಹಾರುವ ಖೇಚರಗಳು.
• ಆಧುನಿಕ ವರ್ಗೀಕರಣ ಶಾಸ್ತ್ರದ ಪಿತಾಮಹ ಎಂದು ಕರೆಯಲ್ಪಟ್ಟ ಕರೋಲಸ್ ಲಿನೇಯಸ್‍ರವರು ಜೀವಿಗಳನ್ನು ವೈಜ್ಞಾನಿಕವಾಗಿ ಹೆಸರಿಸುವ ದ್ವಿನಾಮನಾಮಕರಣ (binomial nomenclature) ಪದ್ಧತಿಯನ್ನು ಪರಿಚಯಿಸಿದ್ದಾರೆ.
• ಪ್ರತಿ ವೈಜ್ಞಾನಿಕ ಹೆಸರು ಎರಡು ಪದಗಳನ್ನು ಒಳಗೊಂಡಿದೆ. ಮೊದಲನೆಯ ಪದ ಜಾತಿ(Genus) ಯನ್ನು ಸೂಚಿಸಿದರೆ, ಎರಡನೆಯ ಪದ ಪ್ರಭೇದ(Species) ವನ್ನು ಸೂಚಿಸುತ್ತದೆ.

ಮಾನವನ ಕ್ರಮಬದ್ಧ ಸ್ಥಾನ


1) ಸಾಮ್ರಾಜ್ಯ -ಪ್ರಾಣಿ
2) ವಂಶ -ಕಾರ್ಡೇಟಾ
3) ವರ್ಗ- ಸ್ತನಿ
4) ಗಣ- ಪ್ರೈಮೇಟ್
5) ಕುಟುಂಬ ಹೋಮಿನಿಡೆ
6) ಜಾತಿ -ಹೋಮೋ
7) ಪ್ರಭೇದ-ಸೆಪಿಯನ್ಸ್

ವರ್ಗಿಕರಣದ ಇತಿಹಾಸ


1) ಎರಡು ಸಾಮ್ರಾಜ್ಯ ವರ್ಗೀಕರಣ : ಎರಡು ಸಾಮ್ರಾಜ್ಯಗಳ ಪದ್ಧತಿ ಸಸ್ಯ ಸಾಮ್ರಾಜ್ಯ ಮತ್ತು ಪ್ರಾಣಿ ಸಾಮ್ರಾಜ್ಯ ಯನ್ನು 1758ರಲ್ಲಿ ಕರೋಲಸ್ ಲಿನೇಯಸ್‍ರವರು ನೀಡಿದರು.
2) ಮೂರು ಸಾಮ್ರಾಜ್ಯ ವರ್ಗೀಕರಣ : ಅರ್ನೆಸ್ಟ್ ಹೆಕಲ್ ರವರು 1866ರಲ್ಲಿ ಮೂರನೇ ಸಾಮ್ರಾಜ್ಯ ಪ್ರೊಟಿಸ್ಟಾವನ್ನು ಸೂಚಿಸಿದರು ಮತ್ತು ಇದರಲ್ಲಿ ಆದಿ ಜೀವಿಗಳೂ, ಸೂಕ್ಷ್ಮಜೀವಿಗಳೂ ಆದ ಪ್ರೊಟೊಜೋವಾ, ಬ್ಯಾಕ್ಟೀರಿಯಾ, ಶೈವಲ ಮತ್ತು ಶಿಲೀಂಧ್ರ್ರಗಳನ್ನು ಸೇರಿಸಿದರು.
3) ನಾಲ್ಕು ಸಾಮ್ರಾಜ್ಯ ವರ್ಗೀಕರಣ : ಕೋಪ್‍ಲ್ಯಾಂಡ್gವರು, ಮೊನೆರಾ, ಪ್ರೊಟಿಸ್ಟಾ, ಸಸ್ಯ ಮತ್ತು ಪ್ರಾಣಿ ಎಂಬ ನಾಲ್ಕು ಸಾಮ್ರಾಜ್ಯಗಳನ್ನು ಪ್ರತಿಪಾದಿಸಿದರು. ಪ್ರೊ-ಕ್ಯಾರಿಯೋಟ್‍ಗಳನ್ನು ಅಳವಡಿಸುವುದಕ್ಕಾಗಿ ಕೋಪ್‍ಲ್ಯಾಂಡ್ 1966ರಲ್ಲಿ ಮೊನೆರಾ ಎಂಬ ಮತ್ತೊಂದು ಸಾಮ್ರಾಜ್ಯವನ್ನು ಸೇರಿಸಿ ನಾಲ್ಕು ಸಾಮ್ರಾಜ್ಯಗಳ ಪದ್ಧತಿಯನ್ನು ಪ್ರತಿಪಾದಿಸಿದರು.
4) ಐದು ಸಾಮ್ರಾಜ್ಯ ವರ್ಗೀಕರಣ : ಶಿಲೀಂಧ್ರ ಮತ್ತು ಇತರ ಸಸ್ಯಗಳ ನಡುವಣ ವ್ಯತ್ಯಾಸವನ್ನು ರಾಬರ್ಟ್ ವ್ಹಿಟೇಕರ್ ಗುರುತಿಸಿ ಮೈಕೋಟ, ಎಂಬ ಹೊಸ ಸಾಮ್ರಾಜ್ಯವನ್ನು 1969ರಲ್ಲಿ ¸ಸೃಷ್ಟಿಸಿ, ಅದರಲ್ಲಿ ಶಿಲಿಂದ್ರಗಳನ್ನು ಸೇರಿಸಿದರು. ಇವರು ಪರಿಚಯಿಸಿದ ಐದು ಸಾಮ್ರಾಜ್ಯಗಳೆಂದರೆ ಮೊನೆರಾ, ಪ್ರೊಟಿಸ್ಟಾ, ಮೈಕೋಟ, ಸಸ್ಯ ಮತ್ತು ಪ್ರಾಣಿ.

1) ಎರಡು ಸಾಮ್ರಾಜ್ಯ ವರ್ಗೀಕರಣ :


ಎರಡು ಸಾಮ್ರಾಜ್ಯಗಳ ಪದ್ಧತಿ ಸಸ್ಯ ಸಾಮ್ರಾಜ್ಯ ಮತ್ತು ಪ್ರಾಣಿ ಸಾಮ್ರಾಜ್ಯ ಯನ್ನು 1758ರಲ್ಲಿ ಕರೋಲಸ್ ಲಿನೇಯಸ್ರವರು ನೀಡಿದರು.

2) ಮೂರು ಸಾಮ್ರಾಜ್ಯ ವರ್ಗೀಕರಣ :


ಅರ್ನೆಸ್ಟ್ ಹೆಕಲ್ ರವರು 1866ರಲ್ಲಿ ಮೂರನೇ ಸಾಮ್ರಾಜ್ಯ ಪ್ರೊಟಿಸ್ಟಾವನ್ನು ಸೂಚಿಸಿದರು ಮತ್ತು ಇದರಲ್ಲಿ ಆದಿ ಜೀವಿಗಳೂ, ಸೂಕ್ಷ್ಮಜೀವಿಗಳೂ ಆದ ಪ್ರೊಟೊಜೋವಾ, ಬ್ಯಾಕ್ಟೀರಿಯಾ, ಶೈವಲ ಮತ್ತು ಶಿಲೀಂಧ್ರ್ರಗಳನ್ನು ಸೇರಿಸಿದರು.

3) ನಾಲ್ಕು ಸಾಮ್ರಾಜ್ಯ ವರ್ಗೀಕರಣ :


ಕೋಪ್ಲ್ಯಾಂಡ್ ನವರು, ಮೊನೆರಾ, ಪ್ರೊಟಿಸ್ಟಾ, ಸಸ್ಯ ಮತ್ತು ಪ್ರಾಣಿ ಎಂಬ ನಾಲ್ಕು ಸಾಮ್ರಾಜ್ಯಗಳನ್ನು ಪ್ರತಿಪಾದಿಸಿದರು. ಪ್ರೊ-ಕ್ಯಾರಿಯೋಟ್ಗಳನ್ನು ಅಳವಡಿಸುವುದಕ್ಕಾಗಿ ಕೋಪ್ಲ್ಯಾಂಡ್ 1966ರಲ್ಲಿ ಮೊನೆರಾ ಎಂಬ ಮತ್ತೊಂದು ಸಾಮ್ರಾಜ್ಯವನ್ನು ಸೇರಿಸಿ ನಾಲ್ಕು ಸಾಮ್ರಾಜ್ಯಗಳ ಪದ್ಧತಿಯನ್ನು ಪ್ರತಿಪಾದಿಸಿದರು.

4) ಐದು ಸಾಮ್ರಾಜ್ಯ ವರ್ಗೀಕರಣ :


ಶಿಲೀಂಧ್ರ ಮತ್ತು ಇತರ ಸಸ್ಯಗಳ ನಡುವಣ ವ್ಯತ್ಯಾಸವನ್ನು ರಾಬರ್ಟ್ ವ್ಹಿಟೇಕರ್ ಗುರುತಿಸಿ ಮೈಕೋಟ, ಎಂಬ ಹೊಸ ಸಾಮ್ರಾಜ್ಯವನ್ನು 1969ರಲ್ಲಿ ¸ಸೃಷ್ಟಿಸಿ, ಅದರಲ್ಲಿ ಶಿಲಿಂದ್ರಗಳನ್ನು ಸೇರಿಸಿದರು. ಇವರು ಪರಿಚಯಿಸಿದ ಐದು ಸಾಮ್ರಾಜ್ಯಗಳೆಂದರೆ ಮೊನೆರಾ, ಪ್ರೊಟಿಸ್ಟಾ, ಮೈಕೋಟ, ಸಸ್ಯ ಮತ್ತು ಪ್ರಾಣಿ.
1) ಮೊನೆರಾ
• ಈ ಜೀವಿಗಳಲ್ಲಿ ನಿರ್ದಿಷ್ಟ ಕೋಶಕೇಂದ್ರ ಅಥವಾ ಕಣದಂಗಗಳಾಗಲೀ, ಬಹುಕೋಶಿಯ ದೇಹ ರಚನೆಯಾಗಲಿ ಕಂಡು ಬರುವುದಿಲ್ಲ.
• ಈ ಜೀವಿಗಳು ಸ್ವಪೋಷಕಗಳು ಅಥವಾ ಪರಪೋಷಕಗಳು ಆಗಿರುತ್ತವೆ.
• ಬ್ಯಾಕ್ಟೀರಿಯಾ, ನೀಲಿ ಹಸಿರು ಶೈವಲಗಳು ಮತ್ತು ಮೈಕೋಪ್ಲಾಸ್ಮಾ ಈ ಗುಂಪಿಗೆ ಸೇರಿದ ಜೀವಿಗಳು.
2) ಪ್ರೊಟಿಸ್ಟಾ
• ಇದು ಹಲವು ಬಗೆಯ ಏಕಕೋಶಿಯ ಯುಕ್ಯಾರಿಯೋಟ್ ಜೀವಿಗಳನ್ನು ಒಳಗೊಂಡಿದೆ.
• ಇವು ಸ್ವಪೋಷಕಗಳು ಅಥವಾ ಪರಪೋಷಕಗಳು. ಏಕಕೋಶಿಯ ಶೈವಲಗಳು, ಡಯಾಟಮ್‍ಗಳು ಮತ್ತು ಪ್ರೋಟೋಜೋವಾಗಳು ಈ ಗುಂಪಿಗೆ ಸೇರಿದ ಕೆಲವು ಜೀವಿಗಳು.
3) ಶಿಲೀಂಧ್ರಗಳು
• ಇವು ಕೊಳೆಯುವ ಸಾವಯವ ವಸ್ತುಗಳನ್ನು ಆಹಾರವಾಗಿ ಬಳಸುವದರಿಂದ ಇವುಗಳನ್ನು ಕೊಳೆತಿನಿಗಳು ಎಂದು ಕರೆಯಲಾಗುತ್ತದೆ. ಅಣಬೆ, ಯೀಸ್ಟ್ ಈ ಗುಂಪಿಗೆ ಸೇರಿದ ಕೆಲವು ಜೀವಿಗಳು.
4) ಸಸ್ಯ ಸಾಮ್ರಾಜ್ಯ
• ಇವು ಕೋಶಭಿತ್ತಿಯನ್ನು ಹೊಂದಿರುವ ಬಹುಕೋಶಿಯ ಜೀವಿಗಳಾಗಿದ್ದು ಸ್ವಪೋಷಕಗಳಾಗಿವೆ. ಕ್ಲೋರೋಫಿಲ್ ಬಳಸಿಕೊಂಡು ದ್ಯುತಿಸಂಶ್ಲೇಷಣೆ ನಡೆಸುತ್ತವೆ.
5) ಪ್ರಾಣಿ ಸಾಮ್ರಾಜ್ಯ
• ಇವು ಕೋಶಭಿತ್ತಿಯನ್ನು ಹೊಂದಿಲ್ಲದ ಬಹುಕೋಶಿಯ ಜೀವಿಗಳಾಗಿದ್ದು ಪರಪೋಷಕಗಳಾಗಿವೆ.

ಸಸ್ಯಗಳ ವರ್ಗಿಕರಣ


1. ಥ್ಯಾಲೋಫೈಟಾ
• ಸಸ್ಯದ ದೇಹಭಾಗಗಳು ಸ್ಪಷ್ಟವಾಗಿ ಪ್ರತ್ಯೆಕಿಸಲು ಸಾಧ್ಯವಿಲ್ಲದಂತಹ ರಚನೆಯನ್ನು ಹೊಂದಿರುವ ಸಸ್ಯಗಳನ್ನು ಒಳಗೊಂಡಿದೆ. ಉದಾಹರಣೆ: ಸ್ಪೈರೋಗೈರಾ, ಯುಲೋಥ್ರಿಕ್ಸ್, ಕ್ಲಾಡೋಫೋರಾ
2. ಹಾವಸೆ ಸಸ್ಯ
• ಈ ವಂಶದ ಸಸ್ಯಗಳು ನೀರು ಮತ್ತು ತೇವಾಂಶದಿಂದ ಕೂಡಿದ ನೆಲ ಎರಡೂ ಕಡೆಗಳಲ್ಲಿ ಬೆಳೆಯುವ ಕಾರಣ ಇವುಗಳನ್ನು ಸಸ್ಯ ಸಾಮ್ರಾಜ್ಯದ ಉಭಯವಾಸಿಗಳು ಎಂದು ಕರೆಯುತ್ತಾರೆ.
• ಉದಾಹರಣೆ : ರೀಕ್ಸಿಯಾ,ಮಾಸ್,ಪ್ಯೂನೆರಿಯಾ,ಇತ್ಯಾದಿ .
3. ಪುಚ್ಛ ಸಸ್ಯ
• ಈ ಗುಂಪಿನ ಸಸ್ಯಗಳು ನಿರ್ದಿಷ್ಟ ಬೇರು, ಕಾಂಡ ಮತ್ತು ಎಲೆಗಳನ್ನು ಹೊಂದಿದ್ದು, ನೀರು ಮತ್ತು ಇತರೆ ವಸ್ತುಗಳನ್ನು ಸಸ್ಯದ ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ಸಾಗಿಸಲು ವಿಶೇಷ ಅಂಗಾಂಶಗಳನ್ನು ಒಳಗೊಂಡಿರುತ್ತವೆ.
• ಉದಾಹರಣೆ: ಸೇಲಾಜಿನೆಲ್ಲ,ನೆಪ್ರೋಲೆಫಿಸ್,ಲೈಕೋಪೋಡಿಯಂ ಇತ್ಯಾದಿ
4. ಅನಾವೃತ ಬೀಜ ಸಸ್ಯಗಳು
• ಹಣ್ಣಿನ ಕವಚದಿಂದ ಆವೃತವಾಗಿಲ್ಲದ ಬೀಜಗಳನ್ನು ಅನಾವೃತ ಬೀಜಗಳು ಎನ್ನುವರು.ಇಂತಹ ಸಸ್ಯಗಳನ್ನು ಅನಾವೃತ ಬೀಜ ಸಸ್ಯಗಳು ಎನ್ನುವರು. ಸಾಮಾನ್ಯವಾಗಿ ಬಹು ವಾರ್ಷಿಕ ನಿತ್ಯಹರಿದ್ವರ್ಣ, ಗಟ್ಟಿಯಾದ ಕಾಂಡವನ್ನು ಹೊಂದಿರುತ್ತವೆ. ಉದಾಹರಣೆಗೆ : ಪೈನ್, ಸೈಕಾಸ್, ದೇವದಾರು,ಕೋನಿಫರ್ಗಳು
5. ಆವೃತಬೀಜ ಸಸ್ಯಗಳು
• ಇವು ಅತ್ಯಂತ ವಿಕಾಸಗೊಂಡಿರುವ ಸಸ್ಯಗಳು. ಬೀಜಗಳು ಹಣ್ಣಿನಂತಹ ಮಾರ್ಪಾಡಾದ ರಚನೆಯ ಒಳಗೆ ಬೆಳೆಯುತ್ತವೆ. ಇವುಗಳನ್ನು ಹೂಬಿಡುವ ಸಸ್ಯಗಳೆಂದೂ ಕರೆಯುತ್ತಾರೆ.
• ಉದಾ :ಸಾಸಿವೆ,ಮಾವು,ರಾಗಿ,ಭತ್ತ,ಗೋದಿ,ಜೋಳ ಇತ್ಯಾದಿ.