ವಿದೇಶಿ ವ್ಯಾಪಾರ(Foreign Trade)

 

• ಭಾರತದಂತಹ ಅಭಿವೃದ್ಧಿ ಹೊಂದುತ್ತಿರುವ ದೇಶದಲ್ಲಿ ವಿದೇಶಿ ವ್ಯಾಪಾರವು ಆರ್ಥಿಕಾಭಿವೃದ್ದಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
• ಭಾರತದ ಪ್ರಮುಖ ಆಮದು ಸರಕುಗಳು: ಪೆಟ್ರೋಲಿಯಂ ಉತ್ಪನ್ನಗಳು,ಬೆಲೆಬಾಳುವ ಹರಳುಗಳು, ಬಂಡವಾಳ ಸರಕುಗಳು, ರಸಗೊಬ್ಬರಗಳು, ಕಬ್ಬಿಣ ಮತ್ತು ಉಕ್ಕು,ಆಹಾರ ಧಾನ್ಯಗಳು ಇತ್ಯಾದಿ
• ಭಾರತದ ಪ್ರಮುಖ ರಫ್ತುಗಳು : ಕೃಷಿ ಮತ್ತು ಸಂಬಂದಿ ಸರಕುಗಳು,ಖನಿಜ ಮತ್ತು ಅದಿರುಗಳು,ತಂತ್ರಜ್ಞಾನ ಸೇವೆಗಳು,ಇಂಜಿನಿಯರಿಂಗ್ ಸರಕುಗಳು,ಕರಕುಶಲ ವಸ್ತುಗಳು,ಬೆಲೆ ಬಾಳುವ ಹರಳು ಮಾತು ಆಭರಣ,ಸೆಣಬು ಪದಾರ್ಥಗಳು ಇತ್ಯಾದಿ

ಭಾರತದ ಪಾವತಿ ಶಿಲ್ಕು


ಭಾರತದ ಪಾವತಿ ಶಿಲ್ಕನ್ನು a)ಚಾಲ್ತಿ ಖಾತೆಯಲ್ಲಿ ಪಾವತಿ ಶಿಲ್ಕು ಮತ್ತು b) ಬಂಡವಾಳ ಖಾತೆಯಲ್ಲಿ ಪಾವತಿ ಶಿಲ್ಕು ಎಂದು ಎರಡು ವಿಭಾಗಗಳಾಗಿ ವಿಂಗಡಿಸಲಾಗಿದೆ.

a) ಚಾಲ್ತಿ ಖಾತೆ


ಒಂದು ಗೊತ್ತಾದ ಅವಧಿಯಲ್ಲಿ ದೇಶವು ಜಗತ್ತಿನ ಉತಾರೆ ದೇಶಗಳೊಂದಿಗೆ ನಡೆಸಿದ ಸರಕು ಮತ್ತು ಸೇವೆಗಳ ವ್ಯಾಪಾರ ವ್ಯವಹಾರದ ನಮೂನೆಯನ್ನು ಚಾಲ್ತಿ ಖಾತೆ ಎನ್ನುವರು.

b) ಬಂಡವಾಳ ಖಾತೆ


ಬಂಡವಾಳ ಖಾತೆಯು ಸಾಲಗಳು ಮತ್ತು ಹೂಡಿಕೆಗಳ ಅಂತಾರಾಷ್ಟ್ರೀಯ ಹರಿವನ್ನು ತೋರಿಸುತ್ತದೆ, ಮತ್ತು ದೇಶದ ವಿದೇಶಿ ಆಸ್ತಿಗಳು ಮತ್ತು ಜವಾಬ್ದಾರಿಗಳಲ್ಲಾದ ಬದಲಾವಣೆಗಳನ್ನು ಪ್ರತಿನಿಧಿಸುತ್ತದೆ.

ಭಾರತದ ರಫ್ತು ಆಮದು ಬ್ಯಾಂಕ್ (EXIM BANK)


• ರಫ್ತು ಆಮದು ಬ್ಯಾಂಕ್ (ಸಂಕ್ಷಿಪ್ತವಾಗಿ "ಎಕ್ಸಿಮ್ ಬ್ಯಾಂಕ್") ಭಾರತದ ವಿದೇಶಿ ವ್ಯಾಪಾರದ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಒಂದು ಪ್ರತಿಷ್ಠಿತ ಬ್ಯಾಂಕಾಗಿದೆ. ಇದನ್ನು 1982 ರ ಜನವರಿ 1 ರಂದು ಸ್ಥಾಪಿಸಲಾಯಿತು.
ಕಾರ್ಯಗಳು
1. ಭಾರತ ಮತ್ತು ತೃತೀಯ ಜಗತ್ತಿನ ದೇಶಗಳ ಆಮದು ಮತ್ತು ರಫ್ತುದಾರರಿಗೆ ಹಣಕಾಸಿನ ಸೌಲಭ್ಯ ನೀಡುವುದು.
2. ಯಂತ್ರೋಪಕರಣಗಳ ಆಮದು ಮತ್ತು ರಫ್ತುಗಳಿಗೆ ಗುತ್ತಿಗೆ ಅಥವಾ ಗೇಣಿಯ ಆಧಾರದ ಮೇಲೆ ಹಣಕಾಸನ್ನು ಒದಗಿಸುವುದು.
3. ಆಮದು ಅಥವಾ ರಫ್ತುಗಳಿಗೆ ಸಂಬಂಧಿಸಿದಂತೆ ಆಡಳಿತಾತ್ಮಕ ತಾಂತ್ರಿಕ ನೆರವನ್ನು ನೀಡುವುದು.
4. ವಿದೇಶಗಳಲ್ಲಿ ಉದ್ಯಮಗಳ ಸ್ಥಾಪನೆಗೆ ಸಾಲ ನೀಡುವುದು