ಮೂಲಸೌಕರ್ಯ ವ್ಯವಸ್ಥೆ(Infrastructure System)

 

ಆರ್ಥಿಕ ಪ್ರಗತಿಗೆ ಅಗತ್ಯವಾದ ಎಲ್ಲ ರೀತಿಯ ಅವಶ್ಯಕತೆಗಳನ್ನು ಮೂಲ ಸೌಕರ್ಯಗಳೆನ್ನುವರು.
ಮೂಲ ಸೌಕರ್ಯಗಳಲ್ಲಿ 2 ವಿಧಗಳಿವೆ.
೧.ಆರ್ಥಿಕ ಮೂಲ ಸೌಕರ್ಯಗಳು:ಆರ್ಥಿಕ ಅಭಿವೃದ್ಧಿಗೆ ನೇರವಾಗಿ ಕೊಡುಗೆ ನೀಡುವ ಮೊಲ್ಲಾ ಸೌಲಭ್ಯಗಳನ್ನು ಆರ್ಥಿಕ ಮೂಲ ಸೌಕರ್ಯಗಳೆನ್ನುವರು.
ಉದಾ:ಇಂಧನ,ವಿದ್ಯುತ್,ಸಾರಿಗೆ,ಸಂಪರ್ಕ,ಬ್ಯಾಂಕಿಂಗ್,ವಿಮೆ,ಕೃಷಿ,ಕೈಗಾರಿಕೆ,ವ್ಯಾಪಾರ,ವಿಜ್ಞಾನ,ತಂತ್ರಜ್ಞಾನ,ಇತ್ಯಾದಿ
೨.ಸಾಮಾಜಿಕ ಮೂಲ ಸೌಲಭ್ಯಗಳು:ದೇಶದ ಸಾಮಾಜಿಕ ವ್ಯವಸ್ಥೆಯ ಸುಗಮ ಕಾರ್ಯಾಚರಣೆಗೆ ಅಗತ್ಯವಾದ ಎಲ್ಲ ಅವಶ್ಯಕತೆಗಳನ್ನು ಸಾಮಾಜಿಕ ಮೂಲ ಸೌಲಭ್ಯಗಳು ಎಂದು ಕರೆಯುತ್ತೇವೆ.
ಉದಾ:ಶಿಕ್ಷಣ,ತರಬೇತಿ,ಆರೋಗ್ಯ,ನೈರ್ಮಲ್ಯ,ಪೌಷ್ಟಿಕ ಆಹಾರ, ಇತ್ಯಾದಿ

ಸಾರಿಗೆ


ಸಾರಿಗೆಯ ವಿಧಗಳು
1. ರಸ್ತೆ ಸಾರಿಗೆ
2. ರೈಲು ಸಾರಿಗೆ
3. ಜಲ ಸಾರಿಗೆ
4. ವಾಯು ಸಾರಿಗೆ

1. ರಸ್ತೆ ಸಾರಿಗೆ


ರಸ್ತೆಗಳ ಮೇಲೆ ವಿವಿಧ ವಾಹನಗಳನ್ನು ಬಳಸಿ ಜನರನ್ನು ಮತ್ತು ಸರಕುಗಳನ್ನು ಒಂದು ಕಡೆಯಿಂದ ಮತ್ತೊಂದು ಕಡೆಗೆ ರವಾನಿಸುವ ವ್ಯವಸ್ಥೆಯನ್ನು ರಸ್ತೆ ಸಾರಿಗೆ ಎಂದು ಕರೆಯುತ್ತೇವೆ

ರಸ್ತೆಗಳ ವರ್ಗಿಕರಣ


1. ರಾಷ್ಟ್ರೀಯ ಹೆದ್ದಾರಿಗಳು:ದೇಶದ ರಾಜಧಾನಿ ಮತ್ತು ಎಲ್ಲ ರಾಜ್ಯಗಳ ರಾಜಧಾನಿಗಳು ಮತ್ತು ಪ್ರಮುಖ ಬಂದರು ಪಟ್ಟಣಗಳನ್ನು ಸಂಪರ್ಕಿಸುವ ರಸ್ತೆಗಳು.
2. ರಾಜ್ಯ ಹೆದ್ದಾರಿಗಳು:ರಾಜ್ಯದ ರಾಜಧಾನಿಯಿಂದ ಎಲ್ಲ ಜಿಲ್ಲಾ ಕೇಂದ್ರಗಳಿಗೆ ಹಾಗೂ ಪ್ರಮುಖ ನಗರ ಪಟ್ಟಣಗಳನ್ನು ಸಂಪರ್ಕಿಸುವ ರಸ್ತೆಗಳು.
3. ಜಿಲಾ ರಸ್ತೆಗಳು :ಜಿಲ್ಲಾ ಕೇಂದ್ರದಿಂದ ಎಲ್ಲ ತಾಲ್ಲೂಕು, ಹಾಗೂ ಇತರೆ ಪ್ರವಾಸಿ ತಾಣಗಳನ್ನು ಸಂಪರ್ಕಿಸುವ ರಸ್ತೆಗಳು.
4. ಹಳ್ಳಿ ರಸ್ತೆಗಳು:ಗ್ರಾಮಾಂತರ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳು

ಭಾರತದ ಪ್ರಮುಖ ರಾಷ್ಟೀಯ ಹೆದ್ದಾರಿಗಳು


NH No-1 ದೆಹಲಿ-ಅಮೃತಸರ
NH No-2 ದೆಹಲಿ-ಕೋಲ್ಕತ್ತಾ
NH No-1+NH No-2 ಆಗ್ರಾ-ಮುಂಬೈ
NH No-4 ಥಾಣೆ-ಚೆನ್ನೈ
NH No-6 ಧುಲೇ-ಕೋಲ್ಕತ್ತಾ
NH No-7 ವಾರಣಾಸಿ-ಕನ್ಯಾಕುಮಾರಿ
NH No-8 ದೆಹಲಿ-ಮುಂಬೈ

2. ರೈಲು ಸಾರಿಗೆ


ರೈಲ್ವೆ ಸಾರಿಗೆಯ ರಚನೆ


1. ಬ್ರಾಡ್ ಗೇಜ್ :ರೈಲು ಮಾರ್ಗದ 2 ಹಳಿಗಳ ಅಂತರ 1.676 ಮೀಟರ್ ಇರುತ್ತದೆ.
2. ಮೀಟರ್ ಗೇಜ್:ರೈಲು ಮಾರ್ಗದ 2 ಹಳಿಗಳ ಅಂತರ 1 ಮೀಟರ್ ಇರುತ್ತದೆ.
3. ನ್ಯಾರೋ ಗೇಜ್:ರೈಲು ಮಾರ್ಗದ 2 ಹಳಿಗಳ ಅಂತರ 0.762 ಮೀಟರ್ ಇರುತ್ತದೆ

• ಭಾರತದ ಮೊಟ್ಟ ಮೊದಲ ರೈಲು ಪ್ರಾರಂಭವಾದ್ದು 16 ಏಪ್ರಿಲ್ 1853 ರಂದು ಮುಂಬೈಯಿಂದ ಠಾಣೆಯವರೆಗೆ
• ಮೊದಲ ರೈಲು ಮುಂಬೈಯಿಂದ ಠಾಣೆಯವರೆಗೆ ಕ್ರಮಿಸಿದ ದೂರ-34 ಕಿ ಮೀ
• ಭಾರತೀಯ ರೈಲ್ವೆಯ ಮುಖ್ಯ ಕಚೇರಿ-ನವದೆಹಲಿ
• ಭಾರತದ ರೈಲ್ವೆಯು ಕೇಂದ್ರ ಸರ್ಕಾರದ ಅಧೀನದಲ್ಲಿದೆ.
• ಒಟ್ಟು ರೈಲ್ವೆ ವಿಭಾಗಗಳು-17
• ಭಾರತದಲ್ಲಿರುವ ಅತೀ ದೊಡ್ಡ ರೈಲ್ವೆ ಜಂಕ್ಷನ್ -ಮಥುರಾ
• ಏಷಿಯಾದಲ್ಲಿಯೇ ಅತೀ ಉದ್ದವಾದ ರೈಲ್ವೆ ಮಾರ್ಗವನ್ನು ಹೊಂದಿರುವುದು ಭಾರತ.

3. ಜಲ ಸಾರಿಗೆ


• ದೋಣಿ - ಹಡಗುಗಳ ಮೂಲಕ ಸರಕುಗಳನ್ನು ಸಾಗಿಸುವ ವ್ಯವಸ್ಥೆಯೇ ಜಲ ಸಾರಿಗೆ.
• ಭಾರತ ದೇಶವು 7516 ಕಿ.ಮೀ.ಉದ್ದದ ತೀರಪ್ರದೇಶವನ್ನು ಹೊಂದಿದ್ದು, ಒಟ್ಟು ವಿದೇಶಿ ವ್ಯಾಪಾರದ ಶೇ 85% ರಷ್ಟು ಜಲ ಸಾರಿಗೆಯ ಮೂಲಕವೇ ನಡೆಯುತ್ತದೆ.
• ದೇಶದಲ್ಲಿ ಒಟ್ಟು 14500 ಕಿ.ಮೀ.ಉದ್ದದ ಆಂತರಿಕ ಜಲಮಾರ್ಗಗಳನ್ನು ಹೊಂದಿದೆ.
• ರಾಷ್ಟ್ರೀಯ ಜಲ ಸಾರಿಗೆ ನಂ ೧-ಇದು ಗಂಗಾ ನದಿಯಲ್ಲಿ ಅಲಹಾಬಾದ್ ನಿಂದ ಹಳದಿಯಾವರೆಗೆ ಸೂಮಾರು 1620 ಕಿ.ಮೀ.ಉದ್ದದ ಜಲಮಾರ್ಗವಿದೆ.
• ರಾಷ್ಟ್ರೀಯ ಜಲ ಸಾರಿಗೆ ನಂ ೨-ಇದು ಬ್ರಹ್ಮಪುತ್ರ ನದಿಯಲ್ಲಿ ಸುಮಾರೂ 890 ಕಿ.ಮೀ. ಉದ್ದದ ಜಲಮಾರ್ಗವಿದ್ದು ಸಾಧಿಯಾದಿಂದ ಧೂಬ್ರಿಯವರೆಗೆ ಇದರ ಸೌಲಭ್ಯ ಲಭ್ಯವಿದೆ.
• ರಾಷ್ಟ್ರೀಯ ಜಲ ಸಾರಿಗೆ ನಂ ೩-ಇದು ಪಶ್ಚಿಮ ತೀರ ಕಾಲುವೆಯಲ್ಲಿ ಕೊಟ್ಟಪುರಂನಿಂದ ಕೊಲ್ಲಂವರೆಗೆಸೂಮಾರು 205 ಕಿ.ಮೀ. ಉದ್ದದ ಜಲ ಮಾರ್ಗವಿದೆ.

4. ವಾಯು ಸಾರಿಗೆ


• ಪ್ರಯಾಣಿಕರನ್ನು ಮತ್ತು ಸರಕುಗಳನ್ನು ವಿಮಾನಗಳ ಮೂಲಕ ಸಾಗಿಸುವುದಕ್ಕೆ ವಾಯು ಸಾರಿಗೆ ಎನ್ನುತ್ತಾರೆ.
• ವಾಯು ಸಾರಿಗೆಯು ಅತಿ ವೇಗ ಮತ್ತು ದುಬಾರಿ ವೆಚ್ಚದ ಸಾರಿಗೆಯಾಗಿದೆ.
• ಭಾರತದಲ್ಲಿ 1911 ರಲ್ಲಿ ಅಲಹಾಬಾದ್ನಿಂದ ನೈನಿವರೆಗೆ ಸುಮಾರು ೧೦ ಕಿ.ಮೀ ಅಂತರದ ಹಾರಾಟದೊಂದಿಗೆ ವಾಯು ಸಾರಿಗೆ ಪ್ರಾರಂಭವಾಯಿತು.
• ವಾಯುಸಾರಿಗೆಯ ವಿಧಗಳು
• ಆಂತರಿಕ ವಾಯು ಸಾರಿಗೆ:ದೇಶದ ವಿವಿಧ ಪ್ರದೇಶಗಳ ನಡುವೆ ಲಭ್ಯವಿರುವ ವಾಯು ಸಾರಿಗೆ ಸೇವೆಗಳನ್ನು ಆಂತರಿಕ ವಾಯು ಸಾರಿಗೆ ಎನ್ನುತೇವೆ.
• ಅಂತರ ರಾಷ್ಟ್ರೀಯ ವಾಯು ಸಾರಿಗೆ:ನಮ್ಮ ದೇಶದಿಂದ ಬೇರೆ ದೇಶಗಳಿಗೆ ಪ್ರಯಾಣಿಕರನ್ನು ಮತ್ತು ಸರಕುಗಳನ್ನು ವಾಯುಮಾರ್ಗದಲ್ಲಿ ಸಾಗಿಸುವುದಕ್ಕೆ ಅಂತರ ರಾಷ್ಟ್ರೀಯ ವಾಯು ಸಾರಿಗೆ ಎನ್ನುತ್ತೇವೆ.

ಭಾರತದ ಪ್ರಮುಖ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣಗಳು


• ಇಂದಿರಾ ಗಾಂಧಿ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣ ದೆಹಲಿ
• ಸುಭಾಷ್ ಚಂದ್ರ ಬೋಸ್ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣ,ಕೋಲ್ಕತ್ತಾ
• ಅಣ್ಣ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣ, ಚೆನ್ನೈ
• ಛತ್ರಪತಿ ಶಿವಾಜಿ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣ, ಮುಂಬೈ
• ಕೆಂಪೇಗೌಡ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣ,ಬೆಂಗಳೂರು