ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಗಳು

 

ಅಂತರರಾಷ್ಟ್ರೀಯ ಹಣಕಾಸು ನಿಧಿ(IMF-International Monetary Fund)


ಅಂತರರಾಷ್ಟ್ರೀಯ ಹಣಕಾಸಿನ ಸಹಕಾರದ ಇತಿಹಾಸದಲ್ಲಿ ಅತ್ಯಂತ ಮಹತ್ವದ ಘಟನೆಯೆಂದರೆ ಅಂತರರಾಷ್ಟ್ರೀಯ ಹಣಕಾಸು ನಿಧಿಯ ಸ್ಥಾಪನೆಯೇ ಸರಿ. 1944 ರ ಬ್ರಿಟಿನ್ ವುಡ್ಸ್ ಸಮ್ಮೇಳನದ ನಿರ್ಣಾಯಕದ ಫಲವಾಗಿ ಅಂತರರಾಷ್ಟ್ರೀಯ ಹಣಕಾಸು ನಿಧಿ ಜನ್ಮತಾಳಿತು. ಐಎಂಎಫ್ 1945ರ ಡಿಸೆಂಬರ್ ತಿಂಗಳಲ್ಲಿ ಅಸ್ತಿತ್ವಕ್ಕೆ ಬಂದಿತ್ತಾದರೂ, ಅದರ ವಿನಿಯಮ ಕಾರ್ಯಕಲಾಪಗಳು 1947 ರ ಮಾರ್ಚ ತಿಂಗಳಿನಿಂದ ಅಧೀಕೃತವಾಗಿ ಪ್ರಾರಂಭಗೊಂಡವು. ಐಎಂಎಫ್ನ ಕೇಂದ್ರ ಕಚೇರಿಯು ಅಮೇರಿಕಾದ ವಾಷಿಂಗ್ಟನ್ನಲ್ಲಿದೆ. ಪ್ರಾರಂಭದಲ್ಲಿ ಐಎಂಎಫ್ ಕೇವಲ 44 ಸದಸ್ಯ ದೇಶಗಳನ್ನು ಹೊಂದಿತ್ತು. ಅದರೆ ಇತ್ತೀಚಿನ ಅಂಕಿ ಅಂಶಗಳ ಪ್ರಕಾರ ಐಎಂಎಫ್ನ ಸದಸ್ಯರ ದೇಶಗಳ ಸಂಖ್ಯೆ 189ಕ್ಕೇರಿದೆ.

ಉದ್ದೇಶಗಳು


• ಅಂತರರಾಷ್ಟ್ರೀಯ ಹಣಕಾಸು ನಿಧಿಯು ಅಂತರರಾಷ್ಟ್ರೀಯ ಹಣಕಾಸಿನ ಸಹಕಾರ
• ಅಂತರರಾಷ್ಟ್ರೀಯ ವ್ಯಾಪಾರದ ಸಮತೋಲನ ವೃದ್ದಿ
• ವಿನಿಯಮ ದರದಲ್ಲಿ ಸ್ಥಿರತೆ ಕಾಪಾಡುವುದು
• ವಿನಿಯಮ ನಿಯಂತ್ರಣಗಳ ನಿರ್ಮೂಲನೆ
• ಬಹು ಪಾಶ್ರ್ಚ ಪರಿವರ್ತನೆ
• ಪಾವತಿ ಶಿಲ್ಕಿನಲ್ಲಿಯ ಅಸಮತೋಲನ ನಿವಾರಣೆ

ಸಂಘಟನೆ


ಐಎಂಎಫ್ ಆಡಳಿತವನ್ನು ಒಂದು ಗವರ್ನರ್ ಮಂಡಳಿ (A board of governors) ಒಂದು ಕಾರ್ಯನಿರ್ವಾಹಕ ನಿರ್ದೇಶಕರ ಮಂಡಳಿ (A board of executive directors), ಒಬ್ಬ ವ್ಯವಸ್ಥಾಪಕ ನಿರ್ದೇಶಕ (A managing director) ಮತ್ತು ಇತರೆ ಸಿಬ್ಬಂದಿಯೊಂದಿಗೆ ಕಾರ್ಯನಿರ್ವಹಿಸುತ್ತದೆ. ಐಎಂಎಫ್ನ ದಿನ ನಿತ್ಯದ ಕಾರ್ಯ ಕಲಾಪಗಳನ್ನು ನೇರವೇರಿಸಿಕೊಂಡು ಹೋಗುವ ಜವಾಬ್ದಾರಿಯು ನಿರ್ದೇಶಕರ ಮಂಡಳಿಯದ್ದಾಗಿದೆ. ಈ ಮಂಡಳಿಯಲ್ಲಿ ಒಟ್ಟು 20 ಮಂದಿ ನಿರ್ದೇಶಕರುಗಳಿರುತ್ತಾರೆ. ಅವರಲ್ಲಿ ಐದು ಮಂದಿ ನಿರ್ದೇಶಕರು ಶಾಶ್ವತ ಸದಸ್ಯರುಗಳಾಗಿರುತ್ತಾರೆ. ಮಂಡಳಿಯ ಶಾಶ್ವತ ಸದಸ್ಯತ್ವ ಪಡೆದ ರಾಷ್ಟ್ರಗಳೆಂದರೆ, ಅಮೆರಿಕ, ಬ್ರಿಟನ್, ಫ್ರಾನ್ಸ್, ಜರ್ಮನಿ ಮತ್ತು ಭಾರತಗಳಾಗಿವೆ. 15 ಮಂದಿ ನಿರ್ದೇಶಕರನ್ನು ಭೌಗೋಳಿಕ ಹಂಚಕೆಯ ಆಧಾರದ ಮೇಲೆ 2 ವರ್ಷಗಳಿಗೊಮ್ಮೆ ಚುನಾಯಿಸಲಾಗುತ್ತದೆ. ಕಾರ್ಯನಿರ್ವಾಹಕ ನಿರ್ದೇಶಕ ಮಂಡಳಿಯು ಒಬ್ಬ ವ್ಯವಸ್ಥಾಪಕ ನಿರ್ದೇಶಕನನ್ನು ಐದು ಐಎಂಎಫ್ ನ ವ್ಯವಸ್ಥಾಪಕ ನಿರ್ದೇಶಕರು ಮಿ.ಕ್ರಿಸ್ಟಿನೆ ಲಗರ್ಡೆ (Christine Lagarde ) ಯವರು 2011ರ ಜುಲೈನಿಂದ ಕಾರ್ಯನಿರ್ವಹಿಸುತ್ತಿದ್ದಾರೆ.