ಹಣದುಬ್ಬರ(Inflation)

 

ಒಂದು ವಸ್ತು ಹಾಗೂ ಸೇವೆಗಳ ಬೆಲೆಯಲ್ಲಿ ನಿರಂತರ ಏರಿಕೆ ಉಂಟಾದಾಗ ಆ ಸ್ಥಿತಿಯನ್ನು ನಾವು ಅದನ್ನು ಹಣದುಬ್ಬರ ಎಂದು ಕರೆಯುತ್ತೇವೆ.

ವಿಧಗಳು


ಹಣದುಬ್ಬರ ದರದ ಆಧಾರದ ಮೇಲೆ
1) Creeping Inflation :
ಹಣದುಬ್ಬರದ ದರ ಶೇಕಡಾ 1 ರಿಂದ5ರಷ್ಟಿದ್ದರೆ ಅದನ್ನು ನಾವು Creeping Inflation ಎಂದು ಕರೆಯುತ್ತೇವೆ.
2) Trotting Inflation :
ಹಣದುಬ್ಬರದ ದರ ಶೇಕಡಾ 1 ರಿಂದ 10 ರಷ್ಟಿದ್ದರೆ ಅದನ್ನು ನಾವು Trotting Inflation ಎಂದು ಕರೆಯುತ್ತೇವೆ.
3) Hyper Inflation :
ಹಣದುಬ್ಬರದ ದರ ಶೇಕಡಾ 10ಕ್ಕಿಂತ ಹೆಚ್ಚಿದ್ದರೆ ಅದನ್ನು ನಾವು Hyper Inflation ಎಂದು ಕರೆಯುತ್ತೇವೆ.
ಹಣದುಬ್ಬರದ ಕಾರಣದ ಆಧಾರದ ಮೆಲೆ :
1) ಬೇಡಿಕೆ ಪ್ರೇರಿತ ಹಣದುಬ್ಬರ (Demand Pull Inflation)
ಯಾವುದೇ ವಸ್ತು ಅಥವಾ ಸೇವೆಗಳ ಬೇಡಿಕೆಯಲ್ಲಿ ಏರಿಕೆ ಉಂಟಾದಾಗ ಸಹಜವಾಗಿ ಆ ವಸ್ತು ಅಥವಾ ಸೇವೆಗಳ ಬೆಲೆಯಲ್ಲಿಯೂ ಕೂಡ ಹೆಚ್ಚಳವಾಗುತ್ತದೆ . ಇದನ್ನೇ ನಾವು ಬೇಡಿಕೆ ಪ್ರೇರಿತ ಹಣದುಬ್ಬರ ಎಂದು ಕರೆಯುತ್ತೇವೆ.
ಬೇಡಿಕೆ ಪ್ರೇರಿತ ಹಣದುಬ್ಬರ ಈ ಕೆಳಗಿನ ಸಂದರ್ಭಗಳಲ್ಲಿ ಸಂಭವಿಸುತ್ತವೆ.
ಎ) ಸರ್ಕಾರ ವೆಚ್ಚದಲ್ಲಿ ಹೆಚ್ಚಳ .
ಬಿ) ಖಾಸಗಿ ವೆಚ್ಚದಲ್ಲಿ ಹೆಚ್ಚಳ.
ಸಿ) ರಿಸರ್ವ್ ಬ್ಯಾಂಕ್ ತನ್ನ ಹಣಕಾಸಿನ ನೀತಿಯಲ್ಲಿ ವಿಸ್ತರಣಾ ಮನೋಭಾವನವನ್ನು ವ್ಯಕ್ತಪಡಿಸುವುದು.
ಡಿ) ಜನಸಂಖ್ಯೆಯಲ್ಲಿ ಹೆಚ್ಚಳ.
ಇ) ಆರ್ಥಿಕ ಪ್ರಗತಿ.
2) ವೆಚ್ಚ ಪ್ರೇರಿತ ಹಣದುಬ್ಬರ (Cost Push Inflation) : ಒಂದು ವಸ್ತು ಹಾಗೂ ಸೇವೆಗಳ ತಯಾರಿಕೆಯಲ್ಲಿ ಬಳಸುವ ಕಚ್ಚಾ ವಸ್ತುಗಳ ಅಭಾವ ಅಥವಾ ಅವುಗಳ ಬೆಲೆಯಲ್ಲಿ ಹೆಚ್ಚಳವಾದಾಗ ಸಂದರ್ಭದಲ್ಲಿ ಸಹಜವಾಗಿ ಆ ವಸ್ತು ಅಥವಾ ಸೇವೆಗಳ ಬೆಲೆಯಲ್ಲಿಯೂ ಕೂಡ ಏರಿಕೆ ಉಂಟಾಗುತ್ತದೆ. ಇದನ್ನೇ ನಾವು ವೆಚ್ಚ ಪ್ರೇರಿತ ಹಣದುಬ್ಬರ ಎಂದು ಕರೆಯುತ್ತೇವೆ.
ವೆಚ್ಚ ಪ್ರೇರಿತ ಹಣದುಬ್ಬರ ಈ ಕೆಳಗಿನ ಸಂದರ್ಭಗಳಲ್ಲಿ ಸಂಭವಿಸುತ್ತವೆ.
ಎ) ಕಚ್ಚಾ ತೈಲದ ಬೆಲೆಗಳಲ್ಲಿ ಹೆಚ್ಚಳವಾದಾಗ.
ಬಿ) ಕಚ್ಚಾ ವಸ್ತುವಿನ ಬೆಲೆಗಳಲ್ಲಿ ಹೆಚ್ಚಳವಾದಾಗ.
ಸಿ) ಬರ ಹಾಗೂ ಪ್ರವಾಹ.
ಡಿ) ವೇತನದಲ್ಲಿ ಹೆಚ್ಚಳ.
3) ರಚನಾತ್ಮಕ ಹಣದುಬ್ಬರ (Structural Inflation) : ಯಾವುದೇ ವಸ್ತು ಅಥವಾ ಸೇವೆಗಳ ಉತ್ಪಾದನಾ ಕ್ರಮದಿಂದ ಆಗುವ ಬೆಲೆ ಏರಿಕೆಯನ್ನು ರಚನಾತ್ಮಕ ಹಣದುಬ್ಬರ ಎಂದು ಕರೆಯುತ್ತೇವೆ.
ಉದಾ :
ಎ) ಅಕ್ರಮ ದಾಸ್ತಾನು
ಬಿ) ಮಧ್ಯವರ್ತಿಗಳ ಹಾವಳಿ
ಸಿ) ದಾಸ್ತಾನು ಸವಲತ್ತುಗಳ ಕೊರತೆ
ಡಿ) ಸಾರಿಗೆ ವ್ಯವಸ್ಥೆಯಲ್ಲಿ ವ್ಯತ್ಯಯ.

ಹಣದುಬ್ಬರದ ಪರಿಣಾಮಗಳು


1. ಉಳಿತಾಯದಲ್ಲಿ ಇಳಿಕೆ
2. ಬಂಡವಾಳ ಹೂಡಿಕೆಯಲ್ಲಿ ಇಳಿಕೆ.
3. ರೂಪಾಯಿ ಅಪಮೌಲ್ಯಿಕರಣ
4. ಆಮದುವಿನಲ್ಲಿ ಹೆಚ್ಚಳ.
5. ಬಡವರು ಹಾಗೂ ಮಧ್ಯಮ ವರ್ಗದವರಿಗೆ ತೊಂದರೆಯುಂಟಾಗುತ್ತದೆ.
6. ಉತ್ಪಾದನಾ ವೆಚ್ಚದಲ್ಲಿ ಹೆಚ್ಚಳ.
7. ಆರ್ಥಿಕ ಅಭಿವೃದ್ದಿ ಹೊಡೆತ.

ಹಣದುಬ್ಬರದ ನಿಯಂತ್ರಣ


1. ಹಣಕಾಸಿನ ನಿಯಂತ್ರಣ
ಎ. ಪತ್ತು ನಿಯಂತ್ರಣ
ಬಿ. ಅನಾಣ್ಯೀಕರಣ
ಸಿ. ಹೊಸ ನೋಟುಗಳ ಚಲಾವಣೆ
2. ರಾಜ್ಯಕೋಶ ಕ್ರಮಗಳು
ಎ. ಅನವಶ್ಯಕ ವೆಚ್ಚದ ಕಡಿತ
ಬಿ. ತೆರಿಗೆ ಹೆಚ್ಚಳ.
ಸಿ. ಸಾರ್ವಜನಿಕ ಸಾಲ
ಡಿ. ಉಳಿತಾಯದಲ್ಲಿ ಹೆಚ್ಚಳ
ಇ. ಹೆಚ್ಚುವರಿ ಮುಂಗಡ ಪತ್ರ
3. ಇತರೇ ಕ್ರಮಗಳು
ಎ. ಉತ್ಪಾದನೆಯನ್ನು ಹೆಚ್ಚಿಸುವುದು
ಬಿ. ಬೆಲೆ ನಿಯಂತ್ರಣ
ಸಿ. ಪಡಿತರ ನಿಯಂತ್ರಣ
ಡಿ. ಸರಿಯಾದ ಕೂಲಿ ನೀತಿ
ಇ. ಸಟ್ಟಾ ವ್ಯಾಪಾರ ಮತ್ತು ಕಾಳಸಂತೆ ನಿಯಂತ್ರಣ