ಕೃಷಿವಲಯ(Agricultural zone)

 

ಮಹತ್ವ


• ಕೃಷಿಯು ದೇಶದ ಸಮಸ್ತ ಜನರಿಗೆ ಆಹಾರವನ್ನು ಒದಗಿಸುತ್ತದೆ.
• ದೇಶದ ಸೂಮಾರು ಶೇ ೫೭%ರಷ್ಟು ಜನಕ್ಕೆ ಉದ್ಯೋಗಗಳನ್ನು ಒದಗಿಸಿದೆ.
• ಆರ್ಥಿಕ ವ್ಯವಸ್ಥೆಯಲ್ಲಿ ಸರಕು ಸೇವೆಗಳ ಬೆಲೆ ಸ್ಥಿರತೆಯಲ್ಲಿ ಮಹತ್ತರ ಪಾತ್ರ ವಹಿಸುತ್ತದೆ.
• ಸರ್ಕಾರಕ್ಕೆ ಸಾಕಷ್ಟು ವರಮಾನವನ್ನು ತಂದು ಕೊಡುತ್ತದೆ.

ಭೂ ಬಳಕೆ


ಭಾರತದ ಒಟ್ಟು ಭೂ ಪ್ರದೇಶ - 329 ದಶ ಲಕ್ಷ ಹೆಕ್ಟರ್
ಸಮೀಕ್ಷೆಯಾದ ಭೂ ಪ್ರದೇಶ - 304.9 ದಶ ಲಕ್ಷ ಹೆಕ್ಟರ್
ಸಾಗುವಳಿಗೆ ಲಾಭ್ತ್ಯವಿರುವ ಭೂಮಿ - 139.5 ದಶ ಲಕ್ಷ ಹೆಕ್ಟರ್
ಅರಣ್ಯ ಪ್ರದೇಶ - 67.8 ದಶ ಲಕ್ಷ ಹೆಕ್ಟರ್
ಸಾಗುವಳಿಗೆ ಲಭ್ಯವಿರದ ಭೂಮಿ - 41.6 ದಶ ಲಕ್ಷ ಹೆಕ್ಟರ್
ಬಂಜರು ಭೂಮಿ - 26.3 ದಶ ಲಕ್ಷ ಹೆಕ್ಟರ್
ಇತರೆ ಸಾಗುವಳಿಯಾಗದ ಭೂಮಿ - 30.2 ದಶ ಲಕ್ಷ ಹೆಕ್ಟರ್
ಒಂದಕ್ಕಿಂತ ಹೆಚ್ಚು ಬೆಳೆ ಬೆಳೆಯುವ ಭೂಮಿ - 49.00 ದಶ ಲಕ್ಷ ಹೆಕ್ಟರ್
ಒಟ್ಟು ಬೆಳೆ ತೆಗೆದ ಪ್ರದೇಶ - 188.5 ದಶ ಲಕ್ಷ ಹೆಕ್ಟರ್

ನೀರಾವರಿ


ಕೃತಕ ವಿಧಾನಗಳಿಂದ ಕೃಷಿ ಬೆಳೆಗೆ ನೀರನ್ನು ಒದಗಿಸುವುದಕ್ಕೆ ನೀರಾವರಿ ಎನ್ನುತ್ತೇವೆ.
ನೀರಾವರಿ ಮೂಲಗಳು
೧.ಬಾವಿಗಳು:ಪ್ರಾಚೀನ ಕಾಲದಿಂದಲೂ ಪ್ರಮುಖ ನೀರಾವರಿ ಮೂಲಗಳಾಗಿದ್ದು ಪಂಜಾಬ್,ಗುಜರಾತ್,ಮಹಾರಾಷ್ಟ್ರ,ಕರ್ನಾಟಕ,ಉತ್ತರ ಪ್ರದೇಶ,ಮಧ್ಯ ಪ್ರದೇಶ, ಮೊದಲಾದ ರಾಜ್ಯಗಳಲ್ಲಿ ವ್ಯಾಪಕವಾಗಿ ಬಳಕೆಯಲ್ಲಿವೆ.
೨.ಕೊಳವೆ ಬಾವಿಗಳು:ಬಿಹಾರ,ಪಂಜಾಬ್,ಹರಿಯಾಣ,ತಮಿಳುನಾಡು,ಆಂಧ್ರ ಪ್ರದೇಶ ಮೊದಲಾದ ರಾಜ್ಯಗಳಲ್ಲಿ ಕೊಳವೆ ಭಾವಿಗಳು ವ್ಯಾಪಕವಾಗಿ ಕಂಡು ಬರುತ್ತವೆ.
೩.ಕೆರೆಗಳು:೨೦೦-೦೧ರಲ್ಲಿ ಸೂಮಾರು ೨.೭ ದ.ಲ.ಹೇ.ಭೂಮಿಗೆ ನೀರನ್ನು ಒದಗಿಸಿವೆ.
೪.ಕಾಲುವೆಗಳು:ಕಾಲುವೆಗಳು ನದಿ ನೀರನ್ನು ಅವಲಂಬಿಸಿದ್ದು ಭಾರತದಲ್ಲಿರುವ ನೀರಾವರಿ ಕಾಲುವೆಗಳು ಜಗತ್ತಿನಲ್ಲಿ ಅತ್ಯಂತ ದೊಡ್ಡ ಕಾಲುವೆ ವ್ಯವತೆಯನ್ನು ಸೃಷ್ಟಿಸಿವೆ.

ಬೃಹತ್ ನೀರಾವರಿ ಯೋಜನೆಗಳು


1. ಭಾಕ್ರಾನಂಗಲ್-ಪಂಜಾಬ್,ಹರಿಯಾಣ,ರಾಜಸ್ತಾನ
2. ದಾಮೋದರ-ಬಿಹಾರ ಮತ್ತು ಪಶ್ಚಿಮ ಬಂಗಾಳ
3. ಹಿರಾಕುಡ್-ಒರಿಸ್ಸಾ
4. ಕೋಸಿ ನದಿ-ಬಿಹಾರ ಮತ್ತು ನೇಪಾಳದ ಕೆಲವು ಪ್ರದೇಶಗಳು
5. ಚಂಬಲ್-ರಾಜಸ್ತಾನ್,ಮಧ್ಯ ಪ್ರದೇಶ
6. ತುಂಗಭದ್ರಾ-ಕರ್ನಾಟಕ ಮತ್ತು ಆಂಧ್ರ ಪ್ರದೇಶ
7. ನಾಗಾರ್ಜುನ ಸಾಗರ-ಆಂಧ್ರ ಪ್ರದೇಶ
8. ಬಿಯಾಸ್-ಪಂಜಾಬ್,ಹರಿಯಾಣ,ರಾಜಸ್ತಾನ

ರಾಷ್ಟ್ರೀಯ ಜಲ ನೀತಿ-2002


• ಅಣೆಕಟ್ಟುಗಳ ಸುರಕ್ಷತೆಯ ಬಗ್ಗೆ ಕಾನೂನು.
• ಅಂತರ ರಾಜ್ಯ ನದಿ ಕಣಿವೆಗಳ ಅಭಿವೃದ್ಧಿ-ನಿರ್ವಹಣೆ
• ನೀರಾವರಿ ಯೋಜನೆಗಳಿಂದ ಸಂತ್ರಸ್ತರಾದವರಿಗೆ ಸೂಕ್ತ ಭದ್ರತೆ ಮತ್ತು ಪರಿಹಾರ ಒದಗಿಸುವುದು.
• ನೀರಾವರಿ ಯೋಜನೆಗಳಿಗೆ ಹೆಚ್ಚಿನ ನೆರವು ನೀಡುವುದು.

ಹಸಿರು ಕ್ರಾಂತಿ


1967 -69 ರ ಅವಧಿಯಲ್ಲಿ ಕೃಷಿ ಕ್ಷೇತ್ರದಲ್ಲಾದ ಪ್ರಗತಿಯನ್ನು ಹಸಿರು ಕ್ರಾಂತಿ ಎನ್ನುವರು

ಕೃಷಿ ಕ್ರಾಂತಿಗಳು


ಹಸಿರು ಕ್ರಾಂತಿ -ಆಹಾರ ಧಾನ್ಯ
ಶ್ವೆತ .ಕ್ಷೀರ ಕ್ರಾಂತಿ -ಹಾಲಿನ ಉತ್ಪಾದನೆ
ನಿಲಿಕ್ರಾಂತಿ—ಮೀನು ಉತ್ಪಾದನೆ
ಸ್ವರ್ಣಕ್ರಾಂತಿ--ನುಲುಕ್ರಾಂತಿ..ಸೆಣಬು ಉತ್ಪಾದನೆ
ಕಪ್ಪುಕ್ರಾಂತಿ--ಪೆಟ್ರೋಲಿಯಂ ಉತ್ಪಾದನೆ
ಬುದುಬಣ್ಣದಕ್ರಾಂತಿ—ರಸಗೊಬ್ಬರ ಉತ್ಪಾದನೆ
ಕೆಂಪುಕ್ರಾಂತಿ—ಮಾಂಸ, ಟೊಮೇಟೊ ಉತ್ಪಾದನೆ
ವೃತ್ತಕ್ರಾಂತಿ--ಬಟಾಟೆ ಉತ್ಪಾದನೆ
ರಜತನಾರು ಕ್ರಾಂತಿ --ಹತ್ತಿ ಉತ್ಪಾದನೆ
ಕಂದುಕ್ರಾಂತಿ—ಮಸಾಲೆ ಉತ್ಪಾದನೆ
ರಜತಕ್ರಾಂತಿ—ಮೊಟ್ಟೆ ಉತ್ಪಾದನೆ
ಹಳದಿ ಕ್ರಾಂತಿ --ಎಣ್ಣೆ ಕಾಳು ಉತ್ಪಾದನೆ