ಕಾರ್ಮಿಕ ವಲಯ(Labour Zone)

 

ಕೃಷಿ ಕಾರ್ಮಿಕರು


ಕೂಲಿಗಾಗಿ ಬೇರೆಯವರ ಜಮೀನುಗಳಲ್ಲಿ ದುಡಿಯುವರನ್ನು ಕೃಷಿ ಕಾರ್ಮಿಕರೆಂದು ಕರೆಯುತ್ತೇವೆ.
ಆರ್ಥಿಕ ಸ್ಥಿತಿಗತಿಗಳು
• ಕೃಷಿ ಕಾರ್ಮಿಕರು ವರ್ಷವೀಡಿ ಕೆಲಸ ದೊರೆಯದೆ ಕೇವಲ ಋತುಮಾನ ಆಧಾರವಾಗಿರುತ್ತದೆ.ಅಂದರೆ ಮಳೆಗಾಲದಲ್ಲಿ ಮತ್ತು ಸುಗ್ಗಿ ಕಾಲದಲ್ಲಿ ಮಾತ್ರ ಕೆಲಸ ದೊರೆಯುತ್ತದೆ.
• ಕೃಷಿ ಕಾರ್ಮಿಕರು ಅಸಂಘಟಿತ ವಲಯದವರಾಗಿರುವುದರಿಂದ ಇವರ ಕೂಲಿ ದರಗಳು ಅತ್ಯಂತ ಕಡಿಮೆ ಇರುತ್ತವೆ.
• ಭಾರತದಲ್ಲಿ 1976 ರ ಜೀತ ಪದ್ಧತಿ ನೀರ್ಮೂಲನ ಕಾಯಿದೆಯನ್ನು ಜಾರಿಗ್ರ್ ತಂದಿದ್ದು, ಜೀತ ಕಾರ್ಮಿಕರಿಗೆ ಪುನರ್ವಸತಿ ಸೌಲಭ್ಯಗಳನ್ನು ಕಲ್ಪಿಸಿದರೂ ಸಹ ಗ್ರಾಮೀಣ ಪ್ರದೇಶದಲ್ಲಿ ಇಂದಿಗೂ ಜೀತ ಪದ್ಧತಿ ವ್ಯಾಪಕವಾಗಿ ಆಚರಣೆಯಲ್ಲಿದೆ.
• ಕೃಷಿ ಕಾರ್ಮಿಕರ ನಿಪುಣತೆಯ ಅಭಾವ,ಕಡಿಮೆ ವೇತನ,ಆದಾಯಗಳು,ಗ್ರಾಮೀಣ ಋಣಭಾರ ಮೊದಲಾದ ಕಾರಣಗಳಿಂದಾಗಿ ಕೃಷಿ ಕಾರ್ಮಿಕರ ಜೀವನಸ್ಥಿತಿಗಳು ಶೋಚನೀಯವಾಗಿವೆ.

ಕೈಗಾರಿಕಾ ಕಾರ್ಮಿಕರು


ಸಂಘಟಿತ ವಲಯದ ಕಾರ್ಮಿಕರು


• ಕಾರ್ಮಿಕ ಕಾನೂನುಗಳು ಅನ್ವಯವಾಗುತ್ತದೆ.
• ಸೇವಾ ಭದ್ರತೆ ಇರುತ್ತದೆ.
• ನ್ಯಾಯೋಜಿತ ಸಂಬಳ.
• ಉತ್ತಮ ಜೀವನ ಗುಣಮಟ್ಟ.
• ಬಡತನ,ನಿರುದ್ಯೋಗದ ಸಮಸ್ಯೆ ಇರುವುದಿಲ್ಲ.
• ಗೈರು ಹಾಜರಿ,ವಲಸೆ ಪ್ರವೃತ್ತಿಗಿರುವುದಿಲ್ಲ.
• ಕಾನೂನಿನ ಬಗ್ಗೆ ಪರೀಪೂರ್ಣ ಜ್ಞಾನವಿರುತ್ತದೆ.

ಅಸಂಘಟಿತ ವಲಯದ ಕಾರ್ಮಿಕರು


• ಕಾರ್ಮಿಕ ಕಾನೂನುಗಳು ಅನ್ವಯವಾಗುವುದಿಲ್ಲ.
• ಸೇವಾ ಭದ್ರತೆ ಇರುವುದಿಲ್ಲ.
• ತಾರತಮ್ಯ ಸಂಬಳ.
• ಕಳಪೆ ಜೀವನ ಗುಣಮಟ್ಟ.
• ಬಡತನ,ನಿರುದ್ಯೋಗದ ಸಮಸ್ಯೆ ನಿರಂತರವಾಗಿ ಇರುತ್ತದೆ.
• ಗೈರು ಹಾಜರಿ,ವಲಸೆ ಇರುತ್ತವೆ.
• ಕಾನೂನಿನ ಬಗ್ಗೆ ಅಜ್ಞಾನ ದುರಾಭ್ಯಾಸಗಳು ಇರುತ್ತವೆ.

ಕಾರ್ಮಿಕ ಸಂಘಗಳು


ಕಾರ್ಮಿಕರು ತಮ್ಮ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳಲು ಸ್ವಯಂ ಪ್ರೇರಣೆಯಿಂದ ರಚಿಸಿಕೊಂಡ ಸಂಘಗಳನ್ನು ಕಾರ್ಮಿಕ ಸಂಘಗಳು ಎಂದು ಕರೆಯುತ್ತವೆ.

ರಾಷ್ಟ್ರಮಟ್ಟದ ಕಾರ್ಮಿಕ ಸಂಘಟನೆಗಳು


1. ಇಂಡಿಯನ್ ನ್ಯಾಷನಲ್ ಟ್ರೇಡ್ ಯೂನಿಯನ್ ಕಾಂಗ್ರೆಸ್(INTUC):ಈ ಸಂಘಟನೆಯು 1947 ರಲ್ಲಿ ಸ್ಥಾಪನೆಯಾಗಿದ್ದು, ಇದು ಭಾರತದ ಕಾಂಗ್ರೆಸ್ ಪಕ್ಷದ ನಿಯಂತ್ರಣದಲ್ಲಿ ಕಾರ್ಯ ನಿರ್ವಹಿಸುತ್ತದ್ದೆ.
2. ಅಲ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್(AITUC) :ಈ ಸಂಘಟನೆಯು 1920 ರಲ್ಲಿ ಸ್ಥಾಪನೆಯಾಗಿದ್ದು, ಇದು ಭಾರತದ ಕಮ್ಯುನಿಸ್ಟ್ ಪಕ್ಷದ ನಿಯಂತ್ರಣದಲ್ಲಿ ಕಾರ್ಯ ನಿರ್ವಹಿಸುತ್ತದ್ದೆ.
3. ಭಾರತೀಯ ಮಜದೂರ್ ಸಂಘ(BMS) :ಈ ಸಂಘಟನೆಯು 1954 ರಲ್ಲಿ ಸ್ಥಾಪನೆಯಾಗಿದ್ದು, ಇದು ಪ್ರಸ್ತುತ ಭಾರತೀಯ ಜನತಾ ಪಕ್ಷ ನಿಯಂತ್ರಣದಲ್ಲಿ ಕಾರ್ಯ ನಿರ್ವಹಿಸುತ್ತದ್ದೆ.ಇದು ಭಾರತದ ಅತ್ಯಂತ ದೊಡ್ಡ ಕಾರ್ಮಿಕ ಸಂಘವಾಗಿದೆ.
4. ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಇಂಡಿಯನ್ ಯೂನಿಯನ್(CITU) :ಈ ಸಂಘಟನೆಯು 1970 ರಲ್ಲಿ ಸ್ಥಾಪನೆಯಾಗಿದ್ದು, ಇದು ಭಾರತದ CPI (M) ಪಕ್ಷದ ನಿಯಂತ್ರಣದಲ್ಲಿ ಕಾರ್ಯ ನಿರ್ವಹಿಸುತ್ತದ್ದೆ.
5. ಹಿಂದ್ ಮಜದೂರ್ ಸಭಾ(HMS) :ಈ ಸಂಘಟನೆಯು 1948 ರಲ್ಲಿ ಸ್ಥಾಪನೆಯಾಗಿದ್ದು, ಇದು ಪ್ರಜಾ ಸೋಷಿಯಲಿಸ್ಟ್ ಪಕ್ಷದ ನಿಯಂತ್ರಣದಲ್ಲಿ ಕಾರ್ಯ ನಿರ್ವಹಿಸುತ್ತದ್ದೆ.
6. ಯುನೈಟೆಡ್ ಟ್ರೇಡ್ ಯೂನಿಯನ್ ಕಾಂಗ್ರೆಸ್(UTUC):ಈ ಸಂಘಟನೆಯು 1949 ರಲ್ಲಿ ಸ್ಥಾಪನೆಯಾಗಿದ್ದು, ಇದು ಸಮಾಜವಾದಿ ಪಕ್ಷದ ನಿಯಂತ್ರಣದಲ್ಲಿ ಕಾರ್ಯ ನಿರ್ವಹಿಸುತ್ತದ್ದೆ.