ವಿಶ್ವ ಬ್ಯಾಂಕ್ (World Bank ) ಮತ್ತು ಅಂಗ ಸಂಸ್ಥೆಗಳು

 

ಅಂತರರಾಷ್ಟ್ರೀಯ ಪುನರ್ ನಿರ್ಮಾಣ ಮತ್ತು ಅಭಿವೃದ್ಧಿ ಬ್ಯಾಂಕ್ (International Bank for Reconstruction & Development IBRD)


1944ರ ಬ್ರಿಟನ್ ವುಡ್ಸ್ ಸಮಾವೇಶದ ನಿರ್ಣಾಯಕದ ಫಲವಾಗಿ ಸ್ಥಾಪನೆಗೊಂಡ ಮತ್ತೊಂದು ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ ಎಂದರೆ, “ಅಂತರರಾಷ್ಟ್ರೀಯ ಪುನರ್ ನಿರ್ಮಾಣ ಮತ್ತು ಅಭಿವೃದ್ದಿಯ ಬ್ಯಾಂಕ್ (ಐಬಿಆರ್ಡಿ) ಆಗಿದೆ. ಅಂತರರಾಷ್ಟ್ರೀಯ ಪುನರ್ ನಿರ್ಮಾಣ ಮತ್ತು ಅಭಿವೃದ್ದಿಯ ಬ್ಯಾಂಕ್ ಬ್ರಿಟನ್ ವುಡ್ಸ್ ಸಮ್ಮೇಳನದ ಅವಳಿ ಶಿಶು. ಇದು 1945ರ ಡಿಸೆಂಬರ್ನಲ್ಲಿ ಅಸ್ತಿತ್ವಕ್ಕೆ ಬಂದು, 1946ರ ಜೂನ್ನಿಂದ ಕಾರ್ಯಾರಂಭ ಮಾಡುತ್ತಿದೆ. ಇದರ ಸದಸ್ಯ ದೇಶಗಳ ಸಂಖ್ಯೆ 189.

ವಿಶ್ವಬ್ಯಾಂಕಿನ ಧ್ಯೇಯೋದ್ದೇಶಗಳು


ಅಂತರರಾಷ್ಟ್ರೀಯ ಪುನರ್ ನಿರ್ಮಾಣ ಮತ್ತು ಅಭಿವೃದ್ದಿ ಬ್ಯಾಂಕ್ ಈ ಕೆಳಗಿನ ಕೆಲವು ಧ್ಯೇಯೋದ್ದೇಶಗಳನ್ನು ಈಡೇರಿಸುವ ಸಲುವಾಗಿ ಅಸ್ತಿತ್ವಕ್ಕೆ ಬಂದಿತು.

• ಎರಡನೇ ಮಹಾಯುದ್ಧದಿಂದ ಜರ್ಝರಿತವಾದ ಮತ್ತು ಹಾನಿಗೊಳಗಾದ ರಾಷ್ಟ್ರಗಳ ಆರ್ಥಿಕ ವ್ಯವಸ್ಥೆಯನ್ನು ಪುನರ್ ರಚಿಸಲು ಹಾಗೂ ಸದಸ್ಯ ದೇಶಗಳ ದೀರ್ಘಾವಧಿಯ ಪ್ರಗತಿಗೆ ನೆರವನ್ನು ಒದಗಿಸುವುದು.
• ಖಾಸಗಿ ಹೂಡಿಕೆದಾರರಿಗೆ ಎಲ್ಲಾ ಉತ್ತೇಜನಗಳನ್ನು ನೀಡುವುದು. ಅವರಿಗೆ ಸಾಲ ಸೌಲಭ್ಯ ದೊರಕಿಸಿಕೊಡಲು ಜಾಮೀನು ಒದಗಿಸುವುದು ಹಾಗೂ ಬಂಡವಾಳದ ಸಹಭಾಗಿತ್ವದ ಮೂಲಕ ವಿಶ್ವದಾದ್ಯಂತ ವಿದೇಶಿ ಖಾಸಗಿ ಹೂಡಿಕೆಯನ್ನು ಹೆಚ್ಚಿಸುವುದು.
• ಅಂತರರಾಷ್ಟ್ರೀಯ ವ್ಯಾಪಾರದಲ್ಲಿ ದೀರ್ಘಕಾಲೀನ ಸಮತೂಕದ ಪ್ರಗತಿಯನ್ನು ಸಾಧಿಸುವುದು ಮತ್ತು ಸದಸ್ಯ ದೇಶಗಳ ಪಾವತಿ ಶಿಲ್ಕಿನಲ್ಲಿ ಸಮತೋಲನವನ್ನು ಕಾಪಾಡುವುದು. ಈ ಉದ್ದೇಶ ಈಡೇರಿಕೆಗೋಸ್ಕರ ಸದಸ್ಯ ದೇಶಗಳ ಉತ್ಪಾದಕ ಸಂಪನ್ಮೂಲಗಳನ್ನು ಅಭಿವೃದ್ಧಿ ಪಡಿಸಲು ಅಂತಾರಾಷ್ಟ್ರೀಯ ಹೂಡಿಕೆಗೆ ಪ್ರೋತ್ಸಾಹ ನೀಡುವುದು ಮತ್ತು ಆ ಮೂಲಕ ಸದಸ್ಯ ದೇಶಗಳು ಉತ್ಪಾದಕತೆ ಹಾಗೂ ಜೀವನ ಮಟ್ಟವನ್ನು ಸುಧಾರಿಸುವುದು.
• ತನ್ನ ಸ್ವಂತ ಬಂಡವಾಳದ ಪೂರೈಕೆಯ ಜೊತೆಗೆ ಅಂತಾರಾಷ್ಟ್ರೀಯವಾಗಿ ಬೇರೆ ಮೂಲಗಳಿಂದ ಸದಸ್ಯ ದೇಶಗಳಿಗೆ ಆರ್ಥಿಕ ಸಾಲ ಸೌಲಭ್ಯ ಲಭ್ಯವಾಗುವಂತೆ ಮಾಡುವುದು ಮತ್ತು ಅವುಗಳ ಸಣ್ಣ ಮತ್ತು ದೊಡ್ಡ ಯೋಜನೆಗಳನ್ನು ಜರೂರು ಕಾರ್ಯಗತಕ್ಕೆ ತರಲು ಪ್ರಯತ್ನಿಸುವುದು.

ಸದಸ್ಯತ್ವ


• ಅಂತಾರಾಷ್ಟ್ರೀಯ ಹಣಕಾಸು ನಿಧಿಯ ನಿಯಮಾವಳಿಗಳನ್ನು ಒಪ್ಪಿ ಸದಸ್ಯರಾಗಿರುವ ಯಾವುದೇ ರಾಷ್ಟ್ರ ವಿಶ್ವ ಬ್ಯಾಂಕಿನ ಸದಸ್ಯರಾಗಬಹುದು. ಐಎಂಎಫ್ನ ಸದಸ್ಯರಾಗದೆ, ವಿಶ್ವಬ್ಯಾಂಕ್ನ ಸದಸ್ಯರಾಗಲು ಅವಕಾಶಗಳಿಲ್ಲ. ಇತ್ತೀಚಿನ ಅಂಕಿ ಅಂಶಗಳ ಪ್ರಕಾರ ವಿಶ್ವಬ್ಯಾಂಕ್ನಲ್ಲಿ 182 ಸದಸ್ಯನ ರಾಷ್ಟ್ರಗಳಿಗೆ. ಯಾವುದೇ ಸದಸ್ಯ ರಾಷ್ಟ್ರವು ತನ್ನ ಸದಸ್ಯತ್ವದ ಹಣ ನೀಡಲು ಅಸಮರ್ಥವಾದಲ್ಲಿ ಆ ದೇಶವನ್ನು ಸದಸ್ಯತ್ವದಿಂದ ವಜಾ ಮಾಡಬಹುದು. ಯಾವುದೇ ಸಂದರ್ಭದಲ್ಲಿ ಒಂದು ಸದಸ್ಯ ರಾಷ್ಟ್ರವು ಬ್ಯಾಂಕಿಗೆ ರಾಜೀನಾಮೆ ನೀಡಲು ಬಯಸಿದರೆ ಅದು ಬ್ಯಾಂಕಿಗೆ ಕೊಡಬೇಕಾಗಿರುವ ಎಲ್ಲ ಸಾಲ ಮತ್ತು ಬಡ್ಡಿಯನ್ನು ಪಾವತಿ ಮಾಡಬೇಕಾಗುತ್ತದೆ.

ಸಂಘಟನೆ


ವಿಶ್ವಬ್ಯಾಂಕ್ನ ಸಂಘಟನೆಯು ಅಂತಾರಾಷ್ಟ್ರೀಯ ಹಣಕಾಸು ನಿಧಿಯ ಸಂಘಟನೆಯ ಮಾದರಿಯಲ್ಲಿಯೇ ಮೂರು ಹಂತದ ಆಡಳಿತವನ್ನು ಹೊಂದಿದೆ. ಅದರಲ್ಲಿ ಒಬ್ಬರು ಅಧ್ಯಕ್ಷರು ಮತ್ತು ಗೌವರ್ನರ್ ಮಂಡಳಿ ಹಾಗೂ ಕಾರ್ಯನಿರ್ವಾಹಕ ನಿರ್ದೇಶಕರ ಮಂಡಳಿ ಆಡಳಿತ ನಿರ್ವಹಿಸುತ್ತದೆ.
• ಗವರ್ನರ್ರ ಮಂಡಳಿಯಲ್ಲಿ ಪ್ರತಿಯೊಂದು ಸದಸ್ಯ ದೇಶದ ಒಬ್ಬೊಬ್ಬ ಪ್ರತಿನಿಧಿಯಿರುತ್ತಾರೆ ಹಾಗೂ ಈ ಮಂಡಳಿ ವರ್ಷಕ್ಕೊಮ್ಮೆ ಸಭೆ ಸೇರುತ್ತದೆ. ಇದು ಬ್ಯಾಂಕಿನ ಆಡಳಿತದ ಉನ್ನತ ಅಂಗವಾಗಿದೆ.
• ಕಾರ್ಯನಿರ್ವಾಹಕ ನಿರ್ದೇಶಕರ ಮಂಡಳಿಯಲ್ಲಿ 22 ಜನ ನಿರ್ದೇಶಕರಿದ್ದು, ಅದರಲ್ಲಿ ಐದು ಮಂದಿ ಖಾಯಂ ನಿರ್ದೇಶಕರು ಇರುತ್ತಾರೆ. ಖಾಯಂ ನಿರ್ದೇಶಕರನ್ನು ಹೊಂದಿರುವ ಸದಸ್ಯ ರಾಷ್ಟ್ರಗಳೆಂದರೆ ಅಮೆರಿಕ, ಇಂಗ್ಲೇಂಡ್, ಜರ್ಮನ್, ಫ್ರಾನ್ಸ, ಜಪಾನ್ ಉಳಿದ 17 ಜನ ನಿರ್ದೇಶಕರನ್ನು ಇತರ ಎಲ್ಲಾ ಸದಸ್ಯ ರಾಷ್ಟ್ರಗಳು ಎರಡು ವರ್ಷಗಳ ಅವಧಿಗೆ ಚುನಾಯಿಸುತ್ತಾರೆ. ನಿರ್ದೇಶಕ ಮಂಡಳಿಯು ತಿಂಗಳಿಗೊಮ್ಮೆ ಮಾಸಿಕ ಸಭೆ ಸೇರುತ್ತದೆ.
• 22 ನಿರ್ದೇಶಕರನ್ನು ಒಳಗೊಂಡ ಕಾರ್ಯಪಾಲಕ ನಿರ್ದೇಶಕರ ಮಂಡಳಿಯು ಒಬ್ಬ ಅಧ್ಯಕ್ಷನನ್ನು ಚುನಾಯಿಸುತ್ತದೆ. ಅಧ್ಯಕ್ಷರು ಇತರೆ ಸಿಬ್ಬಂದಿ ವರ್ಗದ ಸಹಾಯದಿಂದ ಬ್ಯಾಂಕಿನ ದೈನಂದಿನ ಚಟುವಟಿಕೆಗಳನ್ನು ನಿರ್ವಹಿಸುತ್ತಾರೆ. ಅಧ್ಯಕ್ಷರಿಗೆ ನೆರವಾಗಲು ಅನೇಕ ಹಿರಿಯ ಉಪಾಧ್ಯಕ್ಷರುಗಳು, ವಿವಿಧ ಸಮಿತಿಗಳು ಇರುತ್ತವೆ. ಪ್ರಸ್ತುತ ಬ್ಯಾಂಕಿನ ಅಧ್ಯಕ್ಷರೆಂದರೆ ಜಿಮ್ ಯೊಂಗ್ ಕಿಮ್.

ಅಂತಾರಾಷ್ಟ್ರೀಯ ಹಣಕಾಸು ನಿಗಮ (IFC- International Finance Corporation)


ವಿಶ್ವಬ್ಯಾಂಕಿನ ಅಂಗ ಸಂಸ್ಥೆಯಾಗಿ ಅಂತರರಾಷ್ಟ್ರೀಯ ಹಣಕಾಸು ನಿಗಮವು 1956ರ ಜುಲೈ 20 ರಂದು ಸ್ಥಾಪನೆಗೊಂಡಿತು. ಪ್ರಸ್ತುತ ಇದರಲ್ಲಿ 184 ಸದಸ್ಯ ರಾಷ್ಟ್ರಗಳಿವೆ.

ಉದ್ದೇಶಗಳು


ಸದಸ್ಯ ರಾಷ್ಟ್ರಗಳಲ್ಲಿ ಅದರಲ್ಲೂ ಪ್ರಮುಖವಾಗಿ ಹಿಂದುಳಿದ ದೇಶಗಳಲ್ಲಿ ಖಾಸಗಿ ಕ್ಷೇತ್ರದಲ್ಲಿ ಉತ್ಪಾದಕ ಉದ್ಯಮಗಳನ್ನು ಬೆಳೆಸುವ ಮೂಲಕ ಆರ್ಥಿಕಾಭಿವೃದ್ದಿಯನ್ನು ಸಾಧಿಸುವುದು ನಿಗಮದ ಪ್ರಮುಖ ಉದ್ದೇಶವಾಗಿದೆ. ಅಂದರೆ ಇದು ವಿಶ್ವಬ್ಯಾಂಕಿನ ಧ್ಯೇಯೋದ್ದೇಶಗಳ ಈಡೇರಿಕೆಗೆ ಪೂರಕವಾಗಿ ಕಾರ್ಯನಿರ್ವಹಿಸುತ್ತದೆ. ಈ ಉದ್ದೇಶಗಳ ಈಡೇರಿಕಗಾಗಿ ನಿಗಮವು ಮೂರು ವಿಧಾನಗಳನ್ನು ಅನುಸರಿಸುತ್ತದೆ.
1. ಸದಸ್ಯ ದೇಶದ ಸರ್ಕಾರದ ಜಾಮೀನಿಲ್ಲದೆ ಖಾಸಗಿ ಕ್ಷೇತ್ರದ ಸಹ ಭಾಗಿತ್ವ ಜೊತೆಯಲ್ಲಿ ಖಾಸಿಗೀ ಉದ್ಯಮಗಳಲ್ಲಿ ಬಂಡವಾಳ ಹೂಡಿಕೆ ಮಾಡಿ ಆರ್ಥಿಕಾಭಿವೃದ್ದಿಯನ್ನು ಸಾಧಿಸಲು ಪ್ರಯತ್ನಿಸುವುದು.
2. ಹೂಡಿಕೆಯ ಅವಕಾಶಗಳು ವಿದೇಶಿ ಮತ್ತು ಖಾಸಗಿ ಬಂಡವಾಳ ಹಾಗೂ ನುರಿತ ನಿರ್ವಹಣೆಯ ಅಂಶಗಳನ್ನು ಒಟ್ಟುಗೂಡಿಸಲು ಪ್ರಯತ್ನಿ ಸುವುದು.
3. ಖಾಸಗಿ ಮತ್ತು ವಿದೇಶಿ ಬಂಡವಾಳಗಳು ಸದಸ್ಯ ರಾಷ್ಟ್ರಗಳ ಉತ್ಪಾದಕ ಚಟುವಟಿಕೆಗಳಿಗೆ ಹರಿದು ಬರುವಂತೆ ಮಾಡಲು ಸೂಕ್ತ ವಾತಾವರಣ ವನ್ನು ನಿರ್ಮಿಸುವುದು.

ಸದಸ್ಯತ್ವ ಮತ್ತು ಸಂಘಟನೆ


ವಿಶ್ವಬ್ಯಾಂಕ್ನ ಸದಸ್ಯ ರಾಷ್ಟ್ರಗಳೆಲ್ಲವೂ ನಿಗಮದ ಸದಸ್ಯ ರಾಷ್ಟ್ರಗಳಾಗಲು ಅವಕಾಶವಿದೆ. ನಿಗಮವು ವಿಶ್ವಬ್ಯಾಂಕಿನ ಒಂದು ಸಹ ಸಂಸ್ಥೆಯಾಗಿದ್ದು, ಅದು ತನ್ನದೇ ಆದ ಆಡಳಿತಾಂಗ ಮತ್ತು ಸಿಬ್ಬಂದಿಯನ್ನು ಹೊಂದಿದ್ದರೂ ಆಡಳಿತ ಸೇವೆಗಳಿಗೆ ವಿಶ್ವಬ್ಯಾಂಕ್ನ್ನು ಅವಲಂಬಿಸಿದೆ. ವಿಶ್ವಬ್ಯಾಂಕಿನ ಮಾದರಿಯಲ್ಲಿಯೇ ನಿಗಮವು ತನ್ನ ಸಂಘಟನೆಯನ್ನು ಹೊಂದಿದೆ. ನಿಗಮದ ಪೂರ್ಣ ಅಧಿಕಾರವು ಗೌರ್ನರ್ ಮಂಡಳಿಯಲ್ಲಿ ಕೇಂದ್ರೀಕೃತವಾಗಿದ್ದು ಅದು ವರ್ಷಕ್ಕೊಮ್ಮೆ ಸಭೆ ನಡೆಸುತ್ತದೆ. ದೈನಂದಿನ ಚಟುವಟಿಕೆಗಳನ್ನು ಕಾರ್ಯಕಾರಿ ನಿರ್ದೇಶಕರ ಮಂಡಳಿ ನೋಡಿಕೊಳ್ಳುತ್ತದೆ. ನಿಗಮದಲ್ಲಿ ಒಬ್ಬ ಉಪಾಧ್ಯಕ್ಷರಿದ್ದು ಅವರೇ ಪೂರ್ಣ ಅಧಿಕಾರವನ್ನು ಹೊಂದಿರುತ್ತಾರೆ. ನಿಗಮವು ಪ್ರಮುಖವಾಗಿ 8 ವಿಭಾಗಗಳನ್ನು ಹೊಂದಿದೆ. ನಿಗಮವು ಪ್ರಾರಂಭದಲ್ಲಿ 650 ಮಿಲಿಯನ್ ಡಾಲರ್ಗಳ ಬಂಡವಾಳದಿಂದ ಕಾರ್ಯಾರಂಭ ಮಾಡಿತ್ತು. ಸದಸ್ಯ ರಾಷ್ಟ್ರಗಳಿಗೆ ಸಾಲ ನೀಡಲು ವಿಶ್ವ ಬ್ಯಾಂಕ್ನಿಂದ ಅಥವಾ ಖಾಸಗೀ ಮಾರುಕಟ್ಟೆಯಲ್ಲಿ ಸಾಲದ ರೂಪದಲ್ಲಿ ಎತ್ತಿದ ಬಂಡವಾಳ ಅಥವಾ ಸದಸ್ಯ ದೇಶಗಳ ಸರ್ಕಾರದಿಂದ ಪಡೆದ ಬಂಡವಾಳವನ್ನು ಉಪಯೋಗಿಸುತ್ತದೆ.

ಅಂತಾರಾಷ್ಟ್ರೀಯ ಅಭಿವೃದ್ದಿ ಸಂಘ (International Development Association)


ಅಂತಾರಾಷ್ಟ್ರೀಯ ಹಣಕಾಸಿನ ಕ್ಷೇತ್ರದಲ್ಲಾದ ಮಹತ್ವದ ಬೆಳವಣಿಗೆಯೆಂದರೆ, ಅಂತಾರಾಷ್ಟ್ರೀಯ ಅಭಿವೃದ್ದಿ ಸಂಘದ ಸ್ಥಾಪನೆ. ಜಗತ್ತಿನ ಹಿಂದುಳಿದ ದೇಶಗಳಿಗೆ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ದೀರ್ಘ ಮರುಪಾವತಿ ಅವಧಿಯನ್ನು ಹೊಂದಿರುವ “ ಮೃದು ಸಾಲಗಳನ್ನು” ನೀಡಲು ಅಂತಾರಾಷ್ಟ್ರೀಯ ಅಭಿವೃದ್ದಿ ಸಂಘವನ್ನು ಸ್ಥಾಪಿಸಲು 1959ರ ಅಕ್ಟೋಬರ್ನಲ್ಲಿ ನಿರ್ಧಾರಕೈಗೊಳ್ಳಲಾಯಿತು. 1960ರ ಸೆಪ್ಟೆಂಬರ್ 24ರಲ್ಲಿ ಅಂತರರಾಷ್ಟ್ರೀಯ ಅಭಿವೃದ್ದಿ ಸಂಘವು ಅಸ್ತಿತ್ವಕ್ಕೆ ಬಂದಿತು. ಇದು ವಿಶ್ವ ಬ್ಯಾಂಕ್ನ ಸಹ ಸಂಸ್ಥೆಯಾಗಿದ್ದು ಇದನ್ನು ಮೃದು ಸಾಲದ ಕಿಂಡಿ ಅಥವಾ ಮೂರನೇ ಕಿಂಡಿ ಅಥವಾಮೃದು ಸಾಲದ ಗವಾಕ್ಷಿ ಎಂದು ಕರೆಯಲಾಗುತ್ತದೆ.

ಉದ್ದೇಶಗಳು


·  ಆರ್ಥಿಕವಾಗಿ ಮುಖ್ಯವಾಗಿರುವ ಮತ್ತು ಉಪಯುಕ್ತವಾಗಿರುವ ಎಲ್ಲಾ ಯೋಜನೆಗಳಿಗೆ ವಿಶ್ವಬ್ಯಾಂಕ್ ನೆರವು ನೀಡುವುದಿಲ್ಲ. ಅದೂ ಅಲ್ಲದೆ ಸರ್ಕಾರದ ಜಾಮೀನಿಲ್ಲದೆ ವಿಶ್ವಬ್ಯಾಂಕ್‍ನ ನಿಯಮದ ಪ್ರಕಾರ ಸಾಲ ನೀಡುವುದು ಸಾಧ್ಯವಾಗುವುದಿಲ್ಲ. ಇಂತಹ ಯಾವುದೇ ನಿಬಂಧನೆಗಳಿಲ್ಲದೆ ಉದಾರ ಮನೋಭಾವದಿಂದ ಸುಲಭವಾಗಿ ಸದಸ್ಯ ರಾಷ್ಟ್ರಗಳಿಗೆ ನೆರವು ನೀಡುವ ಉದ್ದೇಶವನ್ನು ಅಭಿವೃದ್ದಿ ಸಂಘವು ಹೊಂದಿದೆ. ತಕ್ಷಣ ಫಲ ನೀಡದ ಸಾಮಾಜಿಕ ಮೌಲ್ಯೋತ್ಪಾದಕ ಯೋಜನೆಗಳಾದ ಕುಡಿಯುವ ನೀರು ಪೂರೈಕೆ, ನಗರಾಭಿವೃದ್ದಿ, ರಸ್ತೆಗಳು ಮತ್ತು ಅಣೆಕಟ್ಟುಗಳ ನಿರ್ಮಾಣ, ಶಿಕ್ಷಣ, ಕೊಳೆಗೇರಿ ನಿರ್ಮೂಲನೆ, ಸ್ವಚ್ಛತೆ ಮತ್ತು ನೈರ್ಮಲ್ಯ, ಆರೋಗ್ಯ, ತರಬೇತಿ ಹಾಗೂ ಇನ್ನೂ ಮುಂತಾದ ಕಾರ್ಯಕ್ರಮಗಳಿಗೆ ಸಂಘವು ನೆರವು ನೀಡುತ್ತದೆ.

· ಸದಸ್ಯ ದೇಶಗಳಿಗೆ ಅತ್ಯಂತ ಕಡಿಮೆ ಬಡ್ಡಿ ದರದ ಹಾಗೂ ಅತ್ಯಂತ ಕಡಿಮೆ ಬಡ್ಡಿ ದರದ ಹಾಗೂ ಅತ್ಯಂತ ದೀರ್ಘಕಾಲದ ಮರು ಪಾವತಿಯನ್ನು ಹೊಂದಿರುವ ಮೃದು ಸಾಲಗಳನ್ನು ಅಬಿವೃದ್ದಿ ಸಂಘವು ಒದಗಿಸುತ್ತದೆ. ಆದ್ದರಿಂದಲೇ ಸಂಘ ಸಾಲಗಳನ್ನು ಮೃದು ಸಾಲಗಳೆಂದೇ ಕರೆಯಲಾಗುತ್ತದೆ. ಜಗತ್ತಿನ ಅತ್ಯಂತ ಹಿಂದುಳಿದ ಬಡ ರಾಷ್ಟ್ರಗಳಲ್ಲಿ ಬಡತನ ನಿವಾರಣೆಯಂತಹ ಕಾರ್ಯಕ್ರಮಗಳಿಗೆ ಅಭಿವೃದ್ಧಿ ಸಂಘವು ನೆರವು ನೀಡುತ್ತದೆ. 1999ರಲ್ಲಿ ಕಡಿಮೆ ತಲಾದಾಯ ಹೊಂದಿರುವ ದೇಶಗಳು ಅಂದರೆ 885 ಡಾಲರ್‍ಗಳಿಗಿಂತಲೂ ಕಡಿಮೆ ಇರುವ ದೇಶಗಳು ಮಾತ್ರ ಅಭಿವೃದ್ದಿ ಸಂಘದ ಹಣಕಾಸಿನ ನೆರವು ಪಡೆಯಬಹುದು ಎಂದಿತ್ತು. ಪ್ರಸ್ತುತ 78 ದೇಶಗಳು ಅಂತರಾಷ್ಟ್ರೀಯ ಅಭಿವೃದ್ದಿ ಸಂಘದಿಂದ ಸಾಲ ಪಡೆಯಲು ಅರ್ಹತೆ ಹೊಂದಿವೆ.

ಸದಸ್ಯತ್ವ ಮತ್ತು ಸಂಘಟನೆ


ವಿಶ್ವಬ್ಯಾಂಕ್‍ನ ಎಲ್ಲಾ ಸದಸ್ಯ ದೇಶಗಳು ಅಂತಾರಾಷ್ಟ್ರೀಯ ಅಭಿವೃದ್ಧಿ ಸಂಘದ ಸದಸ್ಯರಾಗಲು ಅರ್ಹ ರಾಷ್ಟ್ರಗಳಾಗಿವೆ. 1996ರ ವೇಳೆಗೆ ಅಭಿವೃದ್ಧಿ ಸಂಘದಲ್ಲಿ 169 ಸದಸ್ಯ ದೇಶಗಳಿದ್ದವು. ಸಂಘದ ಆಡಳಿತವನ್ನು ನೋಡಿಕೊಳ್ಳಲು ಗೌವರ್ನರ್ ಮಂಡಳಿ, ಒಂದು ಕಾರ್ಯನಿರ್ವಾಹಕ ನಿರ್ದೇಶಕರ ಮಂಡಳಿ ಮತ್ತು ಒಬ್ಬ ಅಧ್ಯಕ್ಷರು ಇರುತ್ತಾರೆ. ವಿಶ್ವಬ್ಯಾಂಕಿನ ಅದ್ಯಕ್ಷರೇ ಇದರ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಾರೆ. ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ಅಭಿವೃದ್ಧಿ ಸಂಘಕ್ಕೆ ಪ್ರತ್ಯೇಕ ಅಸ್ತಿತ್ವವಿದೆ. ಆದರೆ ವಿಶ್ವಬ್ಯಾಂಕ್‍ನ ಸಿಬ್ಬಂದಿಯೇ ಅಭಿವೃದ್ದಿ ಸಂಘದ ಆಡಳಿತ ನಡೆಸಿಕೊಂಡು ಹೋಗುತ್ತದೆ.ಈಗ 184 ಸದಸ್ಯ ರಾಷ್ಟ್ರಗಳಿವೆ.