ನಿರುದ್ಯೋಗ(The unemployment in india)

 

ಕೆಲಸ ಮಾಡುವ ಮನಸ್ಸು ಸಾಮಥ್ರ್ಯ ಎರಡೂ ಇದ್ದ ಜನರು ಯಾವುದೇ ಉತ್ಪಾದಕ ಚಟುವಟಿಕೆಗಳಲ್ಲಿ ಲಾಭದಾಯಕವಾಗಿ ಭಾಗಿಯಾಗದಿರುವ ಸನ್ನಿವೇಶವು ನಿರುದ್ಯೋಗವಾಗಿದೆ. ಅಂದರೆ ನಿರುದ್ಯೋಗ ಎಂಬುದು ಉತ್ಪಾದಕ ಚಟುವಟಿಕೆಗಳಲ್ಲಿ ಲಾಭದಾಯಕವಾಗಿ ಭಾಗಿಯಾಗಲು ಅವಕಾಶಗಳಿಲ್ಲದ ಪರಿಸ್ತಿತಿ ನಿರ್ಮಾಣವಾಗಿದೆ.

ನಿರುದ್ಯೋಗದ ಪ್ರಕಾರಗಳು


1. ತೆರೆದ ಅಥವಾ ಮುಕ್ತ ನಿರುದ್ಯೋಗ


ಭಾರತದಲ್ಲಿರುವ ನಿರುದ್ಯೋಗವನ್ನು ಬಹು ದೊಡ್ಡ ಸಂಖ್ಯೆಯ ಶ್ರಮಬಲವು ನಿರಂತರ ಆದಾಯವನ್ನು ತಂದುಕೊಡುವ ಯಾವುದೇ ಕೆಲಸದ ಅವಕಾಶಗಳನ್ನು ಪಡೆಯದ ಒಂದು ಸನ್ನಿವೇಶ ಎಂದು ವ್ಯಾಖ್ಯಾನಿಸಬಹುದು. ಅಂದರೆ, ತೆರೆದ ನಿರುದ್ಯೋಗದ ಸ್ಥಿತಿಯಲ್ಲಿ ಯಾವುದೇ ಉದ್ಯೋಗ ಅವಕಾಶಗಳನ್ನು ಪಡೆಯದ ಒಂದು ದೊಡ್ಡ ನಿರುದ್ಯೋಗ ಪಡೆಯು ಅಸ್ತಿತ್ವದಲ್ಲಿರುತ್ತದೆ. ಈ ರೀತಿಯ ನಿರುದ್ಯೋಗವನ್ನು ಸಂರಚನಾತ್ಮಕ ನಿರುದ್ಯೋಗ ಎಂದು ಗುರುತಿಸಬಹುದು. ಇಂತ ನ ನಿರುದ್ಯೋಗವು ಬಂಡವಾಳದಂತಹ ಪೂರಕ ಸಂಪನ್ಮೂಲಗಳ ಅಭಾವದಿಂದಾಗಿ ತಲೆದೋರುತ್ತದೆ. ಏಕೆಂಧರೆ ಬಂಡವಾಳ ಸಂಚಯನ ದರವು ಜನಸಂಖ್ಯೆಯ ಬೆಳವಣಿಗೆ ದರಕ್ಕಿಂತ ಕಡಿಮೆ ಇದ್ದಾಗ ತೆರೆದ ನಿರುದ್ಯೋಗ ಸಂಭವಿಸುತ್ತದೆ.

2. ಪ್ರಚ್ಛನ್ನ ನಿರುದ್ಯೋಗ


ಪ್ರಚ್ಛನ್ನ ನಿರುದ್ಯೋಗವು ಮರೆಮಾಚಿದ ಅಥವಾ ವೇಶ ಮರೆಸಿಕೊಂಡಿರುವ ರೂಪದಲ್ಲಿರುತ್ತದೆ. ಆದ್ದರಿಂದ ಅದನ್ನು ಮರೆಮಾಚಿದ ನಿರುದ್ಯೋಗ ಅಥವಾ ವೇಶ ಮರೆಸಿಕೊಂಡ ನಿರುದ್ಯೋಗ ಎಂದು ಕರೆಯಲಾಗುತ್ತದೆ. ಪ್ರಚನ್ನ ನಿರುದ್ಯೋಗವನ್ನು ನೋಡಲು ಅಥವಾನ ತಿಳಿಯಲು ಸಾಧ್ಯವಿರದ ನಿರುದ್ಯೋಗ ಎಂದು ಅರ್ಥೈಸಬಹುದು. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ಪ್ರಚ್ಛನ್ನ ನಿರುದ್ಯೋಗ ಎಂದರೆ ಸೀಮಾಂತ ಉತ್ಪಾದಕತೆ ಅಥವಾ ಕೊಡುಗೆಯುನ ಶೂನ್ಯಕ್ಕೆ ಸಮೀಪವಿರುವ ಸನ್ನಿವೇಶವಾಗಿದೆ. ಪ್ರಚ್ಛನ್ನ ನಿರುದ್ಯೋಗವು ಅವಿತು ಕುಳಿತುಕೊಂಡ ರೂಪದಲ್ಲಿರುತ್ತದೆ. ಏಕೆಂದರೆ ಪುರುಷರು ಅಥವಾ ಮಹಿಳೆಯರು ದಿನವೆಲ್ಲಾ ಕಾರ್ಯನಿರತರಾಗಿರುತ್ತಾರೆ. ಆದರೆ, ಅವರ ಒಟ್ಟು ಉತ್ಪನ್ನಕ್ಕೆ ಯಾವುದೇ ಕೊಡುಗೆ ಸಲ್ಲಿಸಲು ವಿಫಲವಾಗಿರುತ್ತಾರೆ.
ವಿಶ್ವ ಸಂಸ್ಥೆಯ ತಜ್ಞರ ಸಮಿತಿಯು “ಪ್ರಚ್ಛನ್ನ ಅಥವಾ ಮರೆ ಮಾಚಿದ ನಿರುದ್ಯೋಗಗಿಗಳು ಎಂದರೆ ತಾವು ಕೆಲಸ ಮಾಡುವ ಸಂಪನ್ಮೂಲಗಳಿಗೆ ಸಂಬಂಧಿಸಿದಂತೆ ಸಂಖ್ಯೆಯ್ಲಲಿ ಅಧಿಕವಿರುವ ಮತ್ತು ತಮ್ಮಿಷ್ಟಕ್ಕೆ ತಾವೇ ಕೆಲಸ ಮಾಡುವ ವ್ಯಕ್ತಿಗಳು ಒಂದು ವೇಳೆಯಲ್ಲಿ ಅವರಲ್ಲಿ ಕೆಲವರನ್ನು ಆರ್ಥಿಕತೆಯ ಇತರ ವಲಯಗಳಲ್ಲಿ ಕಾರ್ಯನಿರ್ವಹಿಸಲು ಹಿಂದಕ್ಕೆ ಪಡೆದರೂ ಅವರನ್ನು ಹಿಂಪಡೆದ ಕ್ಷೇತ್ರದಲ್ಲಿನ ಒಟ್ಟು ಉತ್ಪನ್ನ ಕಡಿಮೆಯಾಗದಿರುವ ಸನ್ನಿವೇಶ ಎಂದು ಹೇಳಿದೆ.

3. ವಾಡಿಕೆ ಸ್ಥಿತಿಯ ನಿರುದ್ಯೋಗ


ಯೋಜನಾ ಆಯೋಗವು ನೇಮಿಸಿದ ನಿರುದ್ಯೋಗ ಅಂದಾಜು ಸಮಿತಿಯ ಪರಿಣಿತರ ಶಿಫಾರಸ್ಸಿನ ಮೇರೆಗೆ ರಾಷ್ಟ್ರೀಯ ಮಾದರಿ ಸಮೀಕ್ಷಾ ಸಂಘಟನೆ (ಎನ್ಎಸ್ಎಸ್ಓ) ಯು ತನ್ನ 27ನೇ ಸುತ್ತಿನಲ್ಲಿ (1972-73) ಮೂರು ರೀತಿಯ ನಿರುದ್ಯೋಗವನ್ನು ಅಂದಾಜು ಮಾಡಲಾಯಿತು. ಅವುಗಳೆಂಧರೆ ವಾಡಿಕೆ ಸ್ಥಿತಿ, ವಾರದ ಸ್ಥಿತಿ ಮತ್ತು ದಿನವಹಿ ಸ್ಥಿತಿ ನಿರುದ್ಯೋಗಗಳು.

ವಾಡಿಕೆ ಸ್ಥಿತಿ ನಿರುದ್ಯೋಗವನ್ನು ವರ್ಷದ ಬಹುಭಾಗ ನಿರುದ್ಯೋಗ ಅನುಭವಿಸುತ್ತಿರುವ ವ್ಯಕ್ತಿಗಳ ಸಂಖ್ಯೆಯ ಮೂಲಕ ಅಂದಾಜು ಮಾಡಲಾಗುತ್ತದೆ. ಇದು ಸಾಂದರ್ಭಿಕ ಕೆಲಸವನ್ನು ಒಪ್ಪಿಕೊಳ್ಳದೆ ವ್ಯವಸ್ಥಿತವಾದ ಉದ್ಯೋಗವನ್ನು ಹುಡುಕುತ್ತಿರುವ ಸುಶಿಕ್ಷಿತ ಮತ್ತು ನೈಪುಣ್ಯತೆ ಪಡೆದ ವ್ಯಕ್ತಿಗಳ ನಿರುದ್ಯೋಗವನ್ನು ಅಂದಾಜು ಮಾಡಲು ಉಪಯುಕ್ತಕಾರಿಯಾಗಿದೆ. ವಾಡಿಕೆ ಸ್ಥಿತಿಯ ನಿರುದ್ಯೋಗವನ್ನು ತೆರೆದ ನಿರುದ್ಯೋಗ ಎಂದು ಕರೆಯಲಾಗುತ್ತದೆ.

4.ವಾರದ ಸ್ಥಿತಿ ನಿರುದ್ಯೋಗ


ವಾರದ ಸ್ಥಿತಿ ನಿರುದ್ಯೋಗ ಸಮೀಕ್ಷಾ ವಾರದಲ್ಲಿ ಒಂದೇ ಒಂದು ಗಂಟೆ ಕಾಲ ಸಹ ಉದ್ಯೋಗ ಪಡೆಯದ ವ್ಯಕ್ತಿಗಳ ಸಂಖ್ಯೆಯ ಮೂಲಕ ಅಂದಾಜು ಮಾಡಲಾಗುತ್ತದೆ.

5.ದಿನವಹಿ ಸ್ಥಿತಿ ನಿರುದ್ಯೋಗ


ದಿನವಹಿ ಸ್ಥಿತಿ ನಿರುದ್ಯೋಗವನ್ನು ಸಮೀಕ್ಷಾ ವಾರದ ಒಂದು ದಿನ ಅಥವಾ ಕೆಲವು ದಿನಗಳಲ್ಲಿ ಉದ್ಯೋಗ ಪಡೆಯದ ವ್ಯಕ್ತಿಗಳ ದಿನಗಳ ಸಂಖ್ಯೆಯ ಮೂಲಕ ಅಂದಾಜು ಮಾಡಲಾಗುತ್ತದೆ.

ನಿರುದ್ಯೋಗ ಪ್ರಮಾಣ


2013-14ರ ಆರ್ಥಿಕ ಸಮೀಕ್ಷೆ ಪ್ರಕಾರ 2011-12ರಲ್ಲಿ ಪ್ರಸ್ತುತ ದಿನವಹಿ ಸ್ಥಿತಿ ಆಧಾರದಲ್ಲಿ 24.7 ದಶಲಕ್ಷ ಜನರು ನಿರುದ್ಯೋಗಿಗಳಾಗಿದ್ದರೆ.