ನಿರ್ನಾಳ ಗ್ರಂಥಿಗಳ ವ್ಯೂಹ (Endocrine System)

 

ಪ್ರಾಣಿಗಳಲ್ಲಿ ರಾಸಾಯನಿಕ ಹೊಂದಾಣಿಕೆಯು ನಿರ್ನಾಳ ಗ್ರಂಥಿಗಳು ಉಂಟುಮಾಡುವ ರಾಸಾಯನಿಕಗಳು ಅಂದರೆ ಹಾರ್ಮೋನುಗಳಿಂದ ಉಂಟಾಗುತ್ತದೆ. ಹಾರ್ಮೋನುಗಳು ನಿರ್ನಾಳ ಗ್ರಂಥಿಗಳು ಸ್ರವಿಸುವ ವಿಶೇಷ ರಾಸಾಯನಿಕ ವಸ್ತುಗಳಾಗಿದ್ದು, ರಕ್ತದ ಮೂಲಕ ಅಂಗಗಳಿಗೆ ತಲುಪಿ ಅವುಗಳ ಕಾರ್ಯ ಚಟುವಟಿಕೆಗಳನ್ನು ನಿಯಂತ್ರಿಸುತ್ತವೆ.

1. ಪಿಟ್ಯೂಟರಿ ಗ್ರಂಥಿ


• ಪಿಟ್ಯೂಟರಿ ಗ್ರಂಥಿಯು ಮಿದುಳಿನ ತಳಭಾಗದಲ್ಲಿದೆ.
• ಪಿಟ್ಯೂಟರಿ ಗ್ರಂಥಿಯಲ್ಲಿ ಮುಂಭಾಗದ ಹಾಲೆ ಮತ್ತು ಹಿಂಭಾಗದ ಹಾಲೆ ಎಂಬ ಎರಡು ಭಾಗಗಳಿವೆ.
• ಪಿಟ್ಯೂಟರಿ ಗ್ರಂಥಿಯ ಹಾರ್ಮೋನುಗಳು :-
• ಬೆಳವಣಿಗೆಯ ಹಾರ್ಮೋನು : ಇದು ಭೌತಿಕ ಮತ್ತು ಮಾನಸಿಕ ಬೆಳವಣಿಗೆಯನ್ನು ನಿಯಂತ್ರಿಸುತ್ತದೆ.
• ಥೈರಾಯಿಡ್ ಹಾರ್ಮೋನು: ಇದು ಥೈರಾಯಿಡ್ ಗ್ರಂಥಿಯು ಹಾರ್ಮೋನನ್ನು ಸ್ರವಿಸುತ್ತದೆ.
• ಅಡ್ರಿನೋ ಕಾರ್ಟಿಕೋ ಟ್ರೋಪಿಕ್ ಹಾರ್ಮೋನು ಇದು ಆಡ್ರಿನಲ್ ಗ್ರಂಥಿಗಳ ಹಾರ್ಮೋನುಗಳ ಸ್ರವಿಕೆಯನ್ನು ನಿಯಂತ್ರಿಸುತ್ತದೆ.
• ಮೆಲನೋಸೈಟ್ ಹಾರ್ಮೋನು: ಇದು ಚರ್ಮದಲ್ಲಿ ಮೆಲನಿನ್ ಸಂಶ್ಲೇಷಣೆಯಾಗುವುದನ್ನು ಹತೋಟಿಯಲ್ಲಿಡುತ್ತದೆ.
• ಪಿಟ್ಯುಟರಿ ಗ್ರಂಥಿಯು ಕಡಿಮೆ ಪ್ರಮಾಣದಲ್ಲಿ ಆ್ಯಂಟಿ ಡೈ ಯುರೆಟಿಕ್ ಹಾರ್ಮೋನನ್ನು ಉತ್ಪತ್ತಿ ಮಾಡಿದರೆ "ಡಯಾಬಿಟಿಸ್ ಇನ್ ಸಿಪಿಡಿಸ್"ಎಂಬ ರೋಗ ಉಂಟಾಗುತ್ತದೆ.
• ಪಿಟ್ಯುಟರಿ ಗ್ರಂಥಿಯನ್ನು " ಅಂತಃಸ್ರಾವಕ ವಾದ್ಯಮೇಳದ ನಿರ್ವಾಹಕ " ಎಂದು ಕರೆಯುತ್ತಾರೆ.

2. ಥೈರಾಯಿಡ್ ಗ್ರಂಥಿ


• ಕುತ್ತಿಗೆಯ ಭಾಗದಲ್ಲಿ ಗಂಟಲಿನ ಕೆಳಗೆ ಶ್ವಾಸನಾಳದ ಮುಂದೆ ಕೆಂಪು ಮಿಶ್ರಿತ ಕಂದು ಬಣ್ಣದ ಒಂದು ಗ್ರಂಥಿ ಇದೆ, ಅದು ಥೈರಾಯಿಡ್ ಗ್ರಂಥಿ.
• ಥೈರಾಯಿಡ್ ಥೈರಾಕ್ಸಿನ್ ಎಂಬ ಹಾರ್ಮೋನನ್ನು ಸ್ರವಿಸುತ್ತದೆ.
• ಆಹಾರದಲ್ಲಿ ಅಯೋಡಿನ್ ನ ಕೊರತೆಯಿಂದ ಸರಳ ಗಾಯಿಟರ್ ರೋಗ ಉಂಟಾಗುತ್ತದೆ.
• ಪ್ರೌಢರಲ್ಲಿ ಥೈರಾಯಿಡ್ ಗ್ರಂಥಿಯ ಚಟುವಟಿಕೆ ಕ್ಷೀಣವಾಗುವುದರಿಂದ ಉಪಾಪಚಯ ಕ್ರಿಯೆಯ ವೇಗವು ಕೆಳಮಟ್ಟಕ್ಕೆ ಬರುತ್ತದೆ, ದೈಹಿಕ ಮತ್ತು ಮಾನಸಿಕ ಶಕ್ತಿ ಕಡಿಮೆಯಾಗುತ್ತದೆ, ದೇಹದ ತೂಕ ಹೆಚ್ಚುತ್ತದೆ ಮತ್ತು ಹೃದಯ ಬಡಿತವು ನಿಧಾನವಾಗುತ್ತದೆ ಈ ಸ್ಥಿತಿಯನ್ನು "ಮಿಕ್ಸೆಡಿಮಾ" ಎಂದು ಕರೆಯುತ್ತಾರೆ.

3. ಪ್ಯಾರಾಥೈರಾಯಿಡ್ ಗ್ರಂಥಿಗಳು


• ಪ್ಯಾರಾಥಾರ್ಮೋನಿನ ಕಾರ್ಯ, ರಕ್ತ ಮತ್ತು ಮೂಳೆಗಳಲ್ಲಿ ಕ್ಯಾಲ್ಸಿಯಂನ ಪ್ರಮಾಣವನ್ನು ನಿಯಂತ್ರಿಸುವುದು.
• ಈ ಹಾರ್ಮೋನಿನ ಕೊರತೆಯಿಂದ ನೋವಿನಿಂದ ಕೂಡಿದ ಸ್ನಾಯು ಸೆಡೆತ ಕಂಡು ಬರುತ್ತದೆ. ಪ್ಯಾರಾಥಾರ್ಮೋನ್ ಹೆಚ್ಚಿನ ಪ್ರಮಾಣದಲ್ಲಿ ಉತ್ಪತ್ತಿಯಾದರೆ ಮೂಳೆಗಳಲ್ಲಿ ಕ್ಯಾಲ್ಸಿಯಂ ಕಡಿಮೆಯಾಗಿ ಅವು ಮೃದುವಾಗುತ್ತವೆ.

4. ಲ್ಯಾಂಗರ್ ಹಾನ್ಸ್‌ನ ಕಿರು ದ್ವೀಪಗಳು


• ಈ ಗ್ರಂಥಿಗಳು ಚಿಕ್ಕದಾಗಿದ್ದು ಮೇದೋಜೀರಕದಲ್ಲಿ ಅಡಕವಾಗಿದೆ.
• ಇವು ಇನ್ಸುಲಿನ್ ಮತ್ತು ಗ್ಲುಕಗಾನ್ ಎಂಬ ಎರಡು ಹಾರ್ಮೋನುಗಳನ್ನು ಸ್ರವಿಸುತ್ತದೆ.
• ಲ್ಯಾಂಗರ್ ಹಾನ್ಸ್ನ ಕಿರುದ್ವೀಪಗಳು ಉತ್ಪತ್ತಿಮಾಡುವ ಹಾರ್ಮೋನ್ ಗಳ ಕೊರತೆಯಿಂದ ಡಯಾಬಿಟಿಸ್ ರೋಗ ಉಂಟಾಗುತ್ತದೆ.
• ಇನ್ಸುಲಿನ್ ಗ್ಲೂಕೋಸ್ ಅನ್ನು ಗ್ಲೈಕೊಜನ್ ಆಗಿ ಪರಿವರ್ತಿಸಲು ಸಹಾಯ ಮಾಡುತ್ತದೆ. ಗ್ಲೈಕೊಜನ್ ಯಕೃತ್ ಮತ್ತು ಸ್ನಾಯುಗಳಲ್ಲಿಸಂಗ್ರಹವಾಗಿರುತ್ತದೆ. ರಕ್ತದಲ್ಲಿ ಗ್ಲೂಕೋಸ್ನ ಪ್ರಮಾಣ ಹೆಚ್ಚಾದಾಗ ಇನ್ಸುಲಿನ್ ಹೆಚ್ಚಿನ ಪ್ರಮಾಣದಲ್ಲಿ ಉತ್ಪತ್ತಿಯಾಗುತ್ತದೆ.
• ಸಾಕಷ್ಟು ಇನ್ಸುಲಿನ್ ಉತ್ಪತ್ತಿಯಾಗದಿದ್ದರೆ ರಕ್ತದಲ್ಲಿ ಗ್ಲೂಕೋಸ್ ಪ್ರಮಾಣ ಹೆಚ್ಚಿ ಮೂತ್ರದ ಮೂಲಕ ವಿಸರ್ಜನೆಗೊಳ್ಳುತ್ತದೆ. ಸ್ಥಿತಿಯನ್ನು ಡಯಾಬಿಟಿಸ್ ಮೆಲ್ಲಿಟಸ್ ಎನ್ನುವರು.
• ಇನ್ಸುಲಿನ್ ಚುಚ್ಚುಮದ್ದಿನಿಂದ ಈ ರೋಗವನ್ನು ನಿವಾರಿಸಬಹುದು.

5. ಅಡ್ರಿನಲ್ ಗ್ರಂಥಿಗಳು


• ಪ್ರತಿ ಮೂತ್ರಜನಕಾಂಗದ ಮೇಲೆ ತ್ರಿಕೋನಾಕಾರದ ಟೋಪಿಯಂತೆ ಒಂದೊಂದು ಆಡ್ರಿನಲ್ ಗ್ರಂಥಿ ಇದೆ.
• ಕಾರ್ಟೆಕ್ಸ್ ಎಂಬ ಹೊರಭಾಗ ಹಾಗೂ ಮೆಡುಲ್ಲಾ ಎಂಬ ಒಳಭಾಗ ಇದೆ.
• ಕಾರ್ಟೆಕ್ಸ್ ಸ್ರವಿಸುವ ಅನೇಕ ಹಾರ್ಮೋನುಗಳಲ್ಲಿ ಕಾರ್ಟಿಸೋನ್ ಒಂದು.
• ಅಡ್ರಿನಲ್ " ಮೆಡುಲ್ಲಾ ಆಡ್ರಿನಲಿನ್, ಭಾರತ ಅಡ್ರಿನಲಿನ್ ಮತ್ತು ಡೊಪಮಿನ್ ಎಂಬ ಮೂರು ಹಾರ್ಮೋನುಗಳನ್ನು ಸ್ರವಿಸುತ್ತದೆ.

6.ಜನನ ಗ್ರಂಥಿಗಳು


• ಪುರುಷ ಸಂಬಂಧಿ ಹಾರ್ಮೋನುಗಳಿಗೆ ಆಂಡ್ರೋಜನ್ಗಳು ಎಂದು ಕರೆಯಲಾಗುತ್ತದೆ ಹಾಗು ಇವುಗಳನ್ನು ವೃಷಣಗಳು ಉತ್ಪತ್ತಿ ಮಾಡುತ್ತವೆ. ಇವುಗಳಲ್ಲಿ ಟೆಸ್ಟೋಸ್ಟೀರಾನ್ ಎಂಬ ಹಾರ್ಮೋನು ಗಂಡಸರ ಲಕ್ಷಣಗಳಿಗೆ ಕಾರಣವಾಗಿವೆ.
• ಮಹಿಳೆ ಸಂಬಂಧಿ ಹಾರ್ಮೋನುಗಳಿಗೆ ಈಸ್ಟ್ರೋಜನ್ ಎಂದು ಕರೆಯಲಾಗುತ್ತದೆ ಹಾಗು ಇವುಗಳನ್ನು ಅಂಡಾಶಯಗಳು ಉತ್ಪತ್ತಿ ಮಾಡುತ್ತವೆ. ಇವುಗಳು ಪ್ರೊಜೆಸ್ಟಿರಾನ್ ಎಂಬ ಹಾರ್ಮೋನ ಸ್ರವಿಸುತ್ತವೆ.