ಹಣಕಾಸು ಆಯೋಗ(Finance Commission)

 

• ಸಂವಿಧಾನದ 280ನೇ ವಿಧಿಯ ಪ್ರಕಾರ ರಾಷ್ಟ್ರಾಧ್ಯಕ್ಷರು ಪ್ರತಿ ಐದು ವರ್ಷಗಳಿಗೊಮ್ಮೆ ಕೇಂದ್ರ ಹಣಕಾಸು ಆಯೋಗವನ್ನು ರಚಿಸುತ್ತಾರೆ.
* ಸಂವಿಧಾನದ 243 (I)ನೇ ವಿಧಿಯ ಪ್ರಕಾರ ರಾಜ್ಯಪಾಲರು ಪ್ರತಿ ಐದು ವರ್ಷಗಳಿಗೊಮ್ಮೆರಾಜ್ಯ ಹಣಕಾಸು ಆಯೋಗವನ್ನು ರಚಿಸುತ್ತಾರೆ.

ರಚನೆ


• ಒಬ್ಬ ಅಧ್ಯಕ್ಷ ಹಾಗೂ ನಾಲ್ಕು ಮಂದಿ ಸದಸ್ಯರನ್ನು ಒಳಗೊಂಡಿರುತ್ತದೆ. ಇವರನ್ನು ರಾಷ್ಟ್ರಾಧ್ಯಕ್ಷರು ಐದು ವರ್ಷಗಳ ಕಾಲ ನೇಮಕ ಮಾಡಿರುತ್ತಾರೆ.
• ಅಧ್ಯಕ್ಷರ ಮತ್ತು ಸದಸ್ಯರ ನೇಮಕಾತಿಯನ್ನು ಸಂಸತ್ತು ಸಲಹೆಯ ಮೇರೆಗೆ ನೇಮಕಾತಿ ಮಾಡಲಾಗುತ್ತದೆ.
• ಸಾರ್ವಜನಿಕ ವ್ಯವಹಾರಗಳ ಬಗೆಗೆ ಅನುಭವವಿರುವ ವ್ಯಕ್ತಿಯನ್ನು ಅಧ್ಯಕ್ಷನನ್ನಾಗಿ ನೇಮಿಸಲಾಗುತ್ತಿದೆ.
• ಉಚ್ಚ ನ್ಯಾಯಾಲಯದ ನ್ಯಾಯಾಧೀಶರನ್ನು ಅಥವಾ ನ್ಯಾಯಾಧೀಶರಾಗುವ ಅರ್ಹತೆಯುಳ್ಳ ಸಾರ್ವಜನಿಕ ಹಣಕಾಸು ವಿಷಯದಲ್ಲಿ ವಿಶೇಷಜ್ಞಾನ ಹೊಂದಿದ, ಹಣಕಾಸು ವಿಷಯ ಹಾಗೂ ಆಡಳಿತದಲ್ಲಿ ಹೆಚ್ಚಿನ ಅನುಭವವಿರುವ ಹಾಗೂ ಅರ್ಥಶಾಸ್ತ್ರದಲ್ಲಿ ವಿಶೇಷ ಜ್ಞಾನವನ್ನು ಹೊಂದಿರುವ ವ್ಯಕ್ತಿಗಳನ್ನು ಸದಸ್ಯರನ್ನಾಗಿ ನೇಮಕ ಮಾಡಲಾಗುತ್ತದೆ.

ಕಾರ್ಯಗಳು


• ಕೇಂದ್ರ ಹಾಗೂ ರಾಜ್ಯಗಳ ನಡುವಣ ಆದಾಯದ ಹಂಚಿಕೆಗೆ ಸಂಬಂಧಿಸಿದಂತೆ ರಾಷ್ಟ್ರಾಧ್ಯಕ್ಷರಿಗೆ ಸಲಹೆ ನೀಡುತ್ತದೆ.
• ಯಾವ ನಿಯಮಗಳನ್ನು ಅನುಸರಿಸಿ ಕೇಂದ್ರವು ಭಾರತದ ಸಂಚಿತ ನಿಧಿ (Consolidated fund)ಯಿಂದ ರಾಜ್ಯಗಳಿಗೆ ಧನ ಸಹಾಯ ಮಾಡಬೇಕು ಎಂಬುದರ ಬಗೆಗೆ ರಾಷ್ಟ್ರಾಧ್ಯಕ್ಷರಿಗೆ ಸಲಹೆ ನೀಡುತ್ತದೆ.
• ಉತ್ತಮ ಹಣಕಾಸು ಸ್ಥಿತಿಯನ್ನು ಕಾಪಾಡಲು ರಾಷ್ಟ್ರಾಧ್ಯಕ್ಷರು ಕೇಳುವ ಯಾವುದೇ ವಿಷಯಕ್ಕೆ ಸಂಬಂಧಿಸಿದಂತೆ ಸಲಹೆ ನೀಡುತ್ತದೆ.

14 ನೇ ಕೇಂದ್ರ ಹಣಕಾಸು ಆಯೋಗ


ಮೊದಲ ಹಣಕಾಸು ಆಯೋಗ:-
ಭಾರತದಲ್ಲಿ 1951 ರಲ್ಲಿ ಕೆ.ಸಿ. ನಿಯೋಗಿ ಅವರ ಅಧ್ಯಕ್ಷತೆಯಲ್ಲಿ ಮೊದಲ ಹಣಕಾಸು ಆಯೋಗವನ್ನು ಸ್ಥಾಪಿಸಲಾಯಿತು.
14 ನೇ ಹಣಕಾಸು ಹಣಕಾಸು ಆಯೋಗದ ಸದಸ್ಯರುಗಳು:-
ಅಧ್ಯಕ್ಷರು: ವೈ.ವಿ ರೆಡ್ಡಿ
1.ಡಾ.ಎಂ ಗೋವಿಂದ ರಾವ್
2. ಸುಷ್ಮನಾಥ್
3. ಪ್ರೊ. ಅಭಿಜಿತ್ ಸೇನ್
4. ಡಾ. ಸುದೀಪ್ತೋ ಮುಂಡ್ಲೆ
ಕಾರ್ಯದರ್ಶಿ:- ಅಜಯ್ ನಾರಾಯಣ್ ಝಾ
ಆಯೋಗದ ವರದಿಯ ಜಾರಿ:-
ಈ ಆಯೋಗವು 2015 ರ ಎಪ್ರೀಲ್ 1 ರಿಂದ 2020 ರ ಮಾರ್ಚ್ 31ರ ವರೆಗೆ ಜಾರಿಯಲ್ಲಿರುತ್ತವೆ.
ಹಣಕಾಸು ಆಯೋಗಗಳು ಅಧ್ಯಕ್ಷರುಗಳು
1 ನೇ ಹಣಕಾಸು ಆಯೋಗ ಕೆ.ಸಿ ನಿಯೋಗಿ
2 ನೇ ಹಣಕಾಸು ಆಯೋಗ ಕೆ. ಸಂತಾನಂ
3 ನೇ ಹಣಕಾಸು ಆಯೋಗ ಎ.ಕೆ ಚಂದಾ
4 ನೇ ಹಣಕಾಸು ಆಯೋಗ ಪಿ. ವಿ ರಾಜಮನ್ನಾರ್
5 ನೇ ಹಣಕಾಸು ಆಯೋಗ ಮಹಾವೀರತ್ಯಾಗಿ
6 ನೇ ಹಣಕಾಸು ಆಯೋಗ ಬ್ರಹ್ಮಾನಂದ ರೆಡ್ಡಿ
7 ನೇ ಹಣಕಾಸು ಆಯೋಗ ಜೆ. ಎಂ. ಸೇಲಠ್
8 ನೇ ಹಣಕಾಸು ಆಯೋಗ ವೈ.ಬಿ ಚೌಹಾಣ್
9 ನೇ ಹಣಕಾಸು ಆಯೋಗ ಎನ್.ಕೆ ಸಾಲ್ವೆ
10 ನೇ ಹಣಕಾಸು ಆಯೋಗ ಕೆ.ಸಿ ಪಂತ್
11 ನೇ ಹಣಕಾಸು ಆಯೋಗ ಎಂ.ಎಂ ಖುಸ್ರೋ
12 ನೇ ಹಣಕಾಸು ಆಯೋಗ ಸಿ. ರಂಗರಾಜನ್
13 ನೇ ಹಣಕಾಸು ಆಯೋಗ ಡಾ. ವಿಜಯ್ ಎಲ್ ಖೇಲ್ಕರ್
14 ನೇ ಹಣಕಾಸು ಆಯೋಗ ಡಾ. ವೈ.ವಿ ರೆಡ್ಡಿ