“ಬಾಲ ಕಾರ್ಮಿಕ ನಿಷೇಧ – 2006”
 
ಆಟ ಪಾಠದೊಂದಿಗೆ ನಲಿಯುತ್ತ ಬಾಲ್ಯ ಕಳೆಯುವುದು ಪ್ರತಿಯೊಂದು ಮಗುವಿನ ಜನ್ಮಸಿದ್ಧ ಹಕ್ಕು, ಆದರೆ ಅನೇಕ ನತದೃಷ್ಟ ಮಕ್ಕಳು ಬಾಲ್ಯದಲ್ಲಿ ಸಂತಸದ ಕ್ಷಣಗಳನ್ನು ಕಾಣದೆ ಈ ಹಕ್ಕಿನಿಂದ ವಂಚಿತರಾಗುತ್ತಾರೆ. ಬಡತನ ಮತ್ತಿತರ ಕಾರಣಗಳಿಂದಾಗಿ ಹೋಟೆಲ್, ಬಾರ್, ರೆಸ್ಟೋರೆಂಟ್‍ಗಳಲ್ಲಿ ಮತ್ತು ಅಂಗಡಿ ಮುಂಗುಟ್ಟುಗಳಲ್ಲಿ ಹಾಗೂ ಖಾಸಗಿ ಕೈಗಾರಿಕಾ ಘಟಕಗಳಲ್ಲಿ ಅಪ್ರಾಪ್ತ ವಯಸ್ಸಿನ ಮಕ್ಕಳ ಬಾಲ್ಯದ ಕನಸುಗಳು ಕಮರಿ ಹೋಗುತ್ತವೆ. ಶಾಲೆಗೆ ಹೋಗುವ ವಯಸ್ಸಿನಲ್ಲಿ ಹಗಲು ರಾತ್ರಿ ದುಡಿಯುವ ಮಕ್ಕಳ ಸ್ಥಿತಿ ಶೋಚನೀಯ. ದೈಹಿಕ ಶ್ರಮ, ಮಾನಸಿಕ ಒತ್ತಡ, ಮಾಲೀಕರ ದಬ್ಬಾಳಿಕೆ ದೌರ್ಜನ್ಯಗಳಿಂದ ಜರ್ಝಿತರಾಗಿರುತ್ತಾರೆ. 5 ರಿಂದ 14 ವರ್ಷ ವಯೋಮಾನದ ಮಕ್ಕಳನ್ನು ದುಡಿಸಿಕೊಳ್ಳುವುದು ಅಪರಾಧವಾಗಿದೆ. ಈ ಅಪರಾಧವನ್ನು ತಡೆಗಟ್ಟಲು ಅನೇಕ ದೇಶಗಳಲ್ಲಿ ಕಾಯಿದೆ ಕಾನೂನುಗಳಿವೆ. ಆದರೂ ಬಹುಸಂಖ್ಯೆಯ ಮಕ್ಕಳು ದುಡಿದು ಬೆವರು ಸುರಿಸುತ್ತಲೇ ಇದ್ದಾರೆ. ದುಡಿಸಿಕೊಳ್ಳುವವರು ಅವರನ್ನು ಶೋಷಣೆ ಮಾಡುತ್ತಲೇ ಇದ್ದಾರೆ. ಜಾಗತಿಕ ಬಾಲ ಕಾರ್ಮಿಕ ವೇದಿಕೆಯ ಮೇಲಿನ 182ನೇ ಒಡಂಬಡಿಕೆಯನ್ನು ಅನುಸರಿಸಲು ಮತ್ತು ಅಳವಡಿಸಿಕೊಳ್ಳಲು ಜಾಗತಿಕ ಕಾರ್ಮಿಕ ಸಂಘಟನೆಯ ಸದಸ್ಯ ದೇಶಗಳು 1999ರಲ್ಲೇ ಒಪ್ಪಿಕೊಂಡಿದ್ದವು. ಬಾಲ್ಯದಲ್ಲಿ ದುಡಿಯಬೇಕಾಗಿ ಬರುವ ಪರಿಸ್ಥಿತಿಯಿಂದ, ಅನಿವಾರ್ಯತೆಯಿಂದ ಮಕ್ಕಳನ್ನು ಮುಕ್ತರಾಗಿಸುವುದು ಮಾನವ ಕುಲದ ಆದ್ಯತೆಗಳಲ್ಲಿ ಶ್ರೇಷ್ಠವಾಗಿದೆ ಎಂದು ಜಾಗತಿಕ ಕಾರ್ಮಿಕ ಸಂಘಟನೆ ಅಭಿಪ್ರಾಯಪಟ್ಟು ಈ ಆದ್ಯತೆಯನ್ನು ಮಾನ್ಯ ಮಾಡಿದೆ.
ಒಂದು ಸ್ಥಿತಿ:
‘ಬಾಲ ಕಾರ್ಮಿಕ ಒಂದು ಸ್ಥಿತಿ ಒಂದು ವ್ಯಕ್ತಿ ಕೂಡ ಇದರ ಸರ್ವಸಾಮಾನ್ಯ ಮತ್ತು ವ್ಯಾಖ್ಯೆ ಇಲ್ಲ. ಅಂತರಾಷ್ಟ್ರೀಯ ಸಂಘಟನೆಗಳು ಸರ್ಕಾರೇತರ ಸಂಸ್ಥೆಗಳು, ಕಾರ್ಮಿಕ ಸಂಘಗಳು ಉಪಯೋಗಿಸುವ ವ್ಯಾಖ್ಯೆಗಳು ಭಿನ್ನ-ಭಿನ್ನವಾಗಿವೆ. ಎಲ್ಲಾ ಕೆಲಸಗಳಿಗೂ ಮಕ್ಕಳಿಗೆ ಅಕ್ಷೇಪಾರ್ಹವಲ್ಲ. ಮಕ್ಕಳ ಶೋಷಣೆಯೊಂದನ್ನು ಬಿಟ್ಟರೆ ಕೆಲವು ಕೆಲಸಗಳು ಮಕ್ಕಳಿಗೆ ಅಪೇಕ್ಷಾರ್ಹವಾಗಿವೆ ಎಂದು ಸಮಾಜ ವಿಜ್ಞಾನಿಗಳು ಅಭಿಪ್ರಾಯಪಡುತ್ತಾರೆ. ಉದಾಹರಣೆಗೆ ಮನೆಮನೆಗೆ ಹೋಗಿ ದಿನಪತ್ರಿಕೆ ಹಾಕುವುದು ಮಕ್ಕಳ ಶಾಲಾ ಶಿಕ್ಷಣಕ್ಕೆ ಭಾದಕವಾಗುವುದಿಲ್ಲ. ಅದರಿಂದ ಮಕ್ಕಳಿಗೆ ಕೆಲಸ ಮಾಡುವುದು ಗೊತ್ತಾಗುತ್ತದೆ. ಅವರಿಗೆ ಜವಾಬ್ದಾರಿ ಬರುತ್ತದೆ ಮತ್ತು ಒಂದಿಷ್ಟು ಹಣಗಳಿಕೆಯೂ ಆಗುತ್ತದೆ. ಆದರೆ ಮಕ್ಕಳನ್ನು ಬಿಟ್ಟಿಯಾಗಿ ದುಡಿಸಿಕೊಂಡರೆ ಅದು ಅವರ ಶೋಷಣೆಯಾಗುತ್ತದೆ. ಯುನಿಸೆಫ್‍ನ ರ ಜಾಗತಿಕ ಮಕ್ಕಳ ವರದಿಯ ಪ್ರಕಾರ ಬಾಲ ಕಾರ್ಮಿಕ ಸ್ಥಿತಿ ಎರಡು ರೀತಿಯಲ್ಲಿದೆ. ಒಂದು ದುಡಿಯುವ ಮಕ್ಕಳನ್ನು ನಿರಂತರವಾಗಿ ದುಡಿಸಿಕೊಳ್ಳುತ್ತ ಅವರ ಶೋಷಣೆ ಮಾಡುವುದು ಇನ್ನೊಂದು ದುಡಿಯುವ ಮಕ್ಕಳ ಶಿಕ್ಷಣಕ್ಕೆ ಮನೋರಂಜನೆಗೆ ಅಡ್ಡಿಯಾಗದ ಹಾಗೆ ಅವರನ್ನು ದುಡಿಸಿಕೊಳ್ಳುವುದು, ಇವೆರಡರ ನಡುವೆ ಧ್ರುವಗಳಷ್ಟು ಅಂತರವಿರುವುದರಿಂದ ಮಕ್ಕಳ ಅಭಿವೃದ್ಧಿಗೆ ತೊಡಕಾಗುವುದಿಲ್ಲ. ವ್ಯಾಖ್ಯೆಯ ಗೊಂದಲವನ್ನು ನಿವಾರಿಸಲು ಹದಿನೆಂಟು ವರ್ಷದ ಒಳಗಿನ ಮಕ್ಕಳು ದುಡಿಯುವುದು ಮತ್ತು ಅವರನ್ನು ದುಡಿಸಿಕೊಳ್ಳುವುದರಿಂದ ಆಗುವ ದೈಹಿಕ, ಮಾನಸಿಕ, ನೈತಿಕ ಶೋಷಣೆ ಮತ್ತು ಮಕ್ಕಳು ಶಾಲೆಗೆ ಹೋಗದಂತೆ ಮಾಡುವ ಸ್ಥಿತಿ ಎನ್ನುವುದೇ ಸೂಕ್ತ ವ್ಯಾಖ್ಯೇಯಾಗುತ್ತದೆ.
ಬಾಲ ಕಾರ್ಮಿಕರ ಕುರಿತ ಅಂಕಿಸಂಖ್ಯೆಗಳು ನಂಬಲರ್ಹವಾಗಿಲ್ಲ. 2000ನೇ ವರ್ಷದಲ್ಲಿ ಜಾಗತಿಕ ಕಾರ್ಮಿಕ ಸಂಘಟನೆಯ ಅಂದಾಜಿನಂತೆ ಜಗತ್ತಿನಾದ್ಯಂತ ಇರುವ ಬಾಲ ಕಾರ್ಮಿಕರ ಸಂಖ್ಯೆ 2.46 ದಶಲಕ್ಷ, 5 ರಿಂದ 17 ವರ್ಷ ವಯೋಮಾನದ ಈ ಮಕ್ಕಳು ಅವರ ಆರೋಗ್ಯಕ್ಕೆ ರಕ್ಷಣೆಗೆ ಯೋಗ್ಯವಲ್ಲದ ಕೆಲಸದ ಸ್ಥಳಗಳಲ್ಲಿ ಕೆಲಸ ಮಾಡುತ್ತಿದ್ದಾರೆ. 8.4 ದಶಲಕ್ಷ ಮಕ್ಕಳನ್ನು ಒತ್ತಾಯದಿಂದ ದುಡಿಸಿಕೊಳ್ಳಲಾಗುತ್ತಿದೆ. ಅವರು ಒಂದು ರೀತಿಯಲ್ಲಿ ಬಾಲ ಕಾರ್ಮಿಕರಷ್ಟೇ ಅಲ್ಲದೆ ಜೀತದಾಳುಗಳೂ ಆಗಿದ್ದಾರೆ. ಕಳ್ಳಸಾಗಾಣಿಕೆ, ಕಳವು, ದರೋಡೆ ಮತ್ತು ಲೈಗಿಂಕ ಅವ್ಯವಹಾರಗಳಲ್ಲಿ ಈ ಮಕ್ಕಳನ್ನು ಬಳಸಿಕೊಳ್ಳಲಾಗುತ್ತಿದೆ. ಸಮೀಕ್ಷೆಯಲ್ಲಿ ಚೀನಾ ಮತ್ತು ಎಲ್ಲಾ ಕೈಗಾರಿಕಾ ದೇಶಗಳು ಒಳಗೊಂಡಿರಲಿಲ್ಲ. ಎಲ್ಲಾ ವರ್ಗಗಳ ಮಕ್ಕಳೂ ಎಣಿಸಲ್ಪಟ್ಟಿರಲಿಲ್ಲ. ಆರ್ಥಿಕವಾಗಿ ಸುಸ್ಥಿತಿಯಲ್ಲಿ ಇರುವ ಹದಿನಾಲ್ಕು ವರ್ಷ ಒಳಗಿನ ಮಕ್ಕಳೂ ಎಣಿಕೆಗೆ ಒಳಪಟ್ಟಿದ್ದರೆ ಈ ಬಾಲ ಕಾರ್ಮಿಕರ ಸಂಖ್ಯೆಯಲ್ಲಿ ಏರಿಕೆ ಕಂಡುಬರುತ್ತಿತ್ತು. ಬಾಲಕಾರ್ಮಿಕತನದ ಅನೇಕ ವಿಧಾನಗಳು ಇನ್ನೂ ಯಾವ ಸಮೀಕ್ಷೆಗಾಗಲಿ, ಎಣಿಕೆಗಾಗಲಿ ಸಿಕ್ಕಿಲ್ಲ. ಶಾಲೆಗೆ ಹೋಗುವುದನ್ನು ಬಿಟ್ಟು ಬೇರೆಯವರ ಮನೆಯಲ್ಲಿ ಕೆಲಸ ಮಾಡುವ ಬಾಲಕಿಯರ ಸಮೀಕ್ಷೆಗಳ ಕಣ್ಣಿಗೆ ಬೀಳುವುದೇ ಇಲ್ಲ. ಅಪ್ರಾಪ್ತ ವಯಸ್ಸಿನ ಮಕ್ಕಳನ್ನು ದುಡಿಸಿಕೊಳ್ಳುವುದು ಅಪರಾಧವಾದರೂ ಅಪರಾಧ ತಡೆಯಲು ಕಾಯ್ದೆ, ಕಾನೂನುಗಳಿದ್ದರೂ ಮಕ್ಕಳು ದುಡಿಯುತ್ತಲೇ ಇದ್ದಾರೆ. ಅವರ ಶೋಷಣೆ ನಡದೇ ಇದೆ.
ಭಾರತವು ಬಾಲ ಕಾರ್ಮಿಕ ಪದ್ಧತಿಯ ನಿಷೇಧಕ್ಕೆ ಬದ್ಧವಾಗಿದೆ. ಮಕ್ಕಳನ್ನು ಅನಾರೋಗ್ಯಕರ ಸ್ಥಳಗಳಲ್ಲಿ ದುಡಿಸಿಕೊಳ್ಳಬಾರದೆಂದು ಸಂವಿಧಾನ ಸ್ಪಷ್ಟವಾಗಿ ತಿಳಿಸಿದೆ. ಬಾಲಕಾರ್ಮಿಕ (ನಿಷೇಧ) ಕಾಯ್ದೆಗಳು ಅಲ್ಲದೆ ಮಕ್ಕಳ ಉದ್ಯೋಗ ಕಾಯ್ದೆ. ಕನಿಷ್ಟ ವೇತನಗಳ ಕಾಯ್ದೆ ಪ್ಲ್ಯಾಂಟೇಶನ್ ಕಾಯ್ದೆ ಬೀಡಿ, ಸಿಗರೇಟು ಕಾರ್ಮಿಕರ ಕಾಯ್ದೆ ಇತ್ಯಾದಿ ಕಾಯ್ದೆಗಳೂ ಸಹ ಬಾಲಕಾರ್ಮಿಕ ಪದ್ಧತಿಯನ್ನು ನಿಷೇಧಸುತ್ತವೆ. ಭಾರತ ಸರ್ಕಾರವು 2006 ಆಗಸ್ಟ್ 1 ರಂದು ಬಾಲಕಾರ್ಮಿಕ ಪದ್ಧತಿಯನ್ನು ನಿಷೇಧಿಸಿತು. ಅದು ಅಕ್ಟೋಬರ್ 10 ರಂದು ಜಾರಿಗೆ ಬಂದಿದೆ.
ಭಾರತದಲ್ಲಿ ಬಾಲ ಕಾರ್ಮಿಕರು:
ಭಾರತದಲ್ಲಿ ಬಾಲ ಕಾರ್ಮಿಕರ ಸಂಖ್ಯೆ ಇಷ್ಟೇ ಎಂದು ಖಚಿತವಾಗಿ ಹೇಳುವುದು ಸುಲಭವಿಲ್ಲ. ಬಾಲಕಾರ್ಮಿಕರ ಬಗೆಗಿನ ಅಂಕಿಸಂಖ್ಯೆಗಳನ್ನು ಸಂಗ್ರಹಿಸುವಲ್ಲಿ ಮತ್ತು ವಿಶ್ಲೇಷಿಸುವಲ್ಲಿ ಭಾರತ ಸರ್ಕಾರ ದಿವ್ಯ ನಿರ್ಲಕ್ಷ್ಯ ತಳೆಯುತ್ತ ಬಂದಿದೆ. ಬಾಲ ಕಾರ್ಮಿಕರ ಶೇಕಡವಾರು ಪ್ರಮಾಣ 1961ರಲ್ಲಿ ರಲ್ಲಿ 7,13ರಷ್ಟು ಇತ್ತೆಂದು ಜಣಗಣತಿ ಅಂಕಿ ಸಂಖ್ಯೆಗಳು ತಿಳಿಸುತ್ತವೆ. ಬಾಲಕಾರ್ಮಿಕ ವ್ಯಾಖ್ಯೆ ಭಿನ್ನ ಭಿನ್ನವಾಗಿ ಇರುವುದರಿಂದಲೂ ಮತ್ತು ಬಿಟ್ಟಿ ಕಾರ್ಮಿಕರನ್ನು ಲೆಕ್ಕಕ್ಕೆ ತೆಗೆದುಕೊಳ್ಳದೇ ಇರುವುದರಿಂದಲೂ ಜನಗಣತಿಯ ಅಂಕಿಸಂಖ್ಯೆಗಳು ತಪ್ಪು ಮಾಹಿತಿಯನ್ನು ಮತ್ತು ತಪ್ಪು ಸಂದೇಶವನ್ನು ಒದಗಿಸುತ್ತವೆ. ಅದರಿಂದ ಹೋಲಿಕೆಯೂ ಸಮಂಜಸವಾಗುವುದಿಲ್ಲ. 1981ರ ಜನಗಣತಿಯ ಪ್ರಕಾರ ದೇಶದಲ್ಲಿ 13.6 ದಶಲಕ್ಷ ಬಾಲಕಾರ್ಮಿಕರಿದ್ದರು. ಜನಗಣತಿಯ ಎರಡು ಭಿನ್ನ ಅಂಕಿಸಂಖ್ಯೆಗಳನ್ನು ಸರಕಾರ ಸಮಾನಾಂತರವಾಗಿ ಪರಿಗಣಿಸಿದ ಪರಿಣಾಮವಾಗಿ ಬಾಲಕಾರ್ಮಿಕರ ಸಂಖ್ಯೆ 17 & 20 ದಶಲಕ್ಷ ಮಧ್ಯದಲ್ಲಿ ಉಳಿದಿದೆ. 1983ರ ರಾಷ್ಟ್ರೀಯ ಮಾದರಿ ಸಮೀಕ್ಷೆ ವರದಿಗಳ ಬಾಲಕಾರ್ಮಿಕರ ಸಂಖ್ಯೆಯನ್ನು 17.4 ದಶಲಕ್ಷ ಎಂದು ತಿಳಿಸಿದೆ. ಕಾರ್ಮಿಕ ಸಚಿವಾಲಯ ನಡೆಸಿದ ಒಂದು ಸಮೀಕ್ಷೆಯಲ್ಲಿ ಹೊರಬಂದ ಬಾಲಕಾರ್ಮಿಕರ ಸಂಖ್ಯೆ 44 ದಶಲಕ್ಷ ಬಾಲಕಾರ್ಮಿಕರ ನಿರ್ದಿಷ್ಟ ಸಂಖ್ಯೆ ಲಭ್ಯವಾಗದಿರುವುದಕ್ಕೆ ಮುಖ್ಯ ಕಾರಣವೆಂದರೆ, ಮಕ್ಕಳು ದುಡಿಯುವುದನ್ನು ಯಾರು ತಿಳಿಸದಿರುವುದು, ಕಾನೂನು ಕ್ರಮಕ್ಕೆ ಹೆದರಿಯೇ ಯಾರೂ ತಿಳಿಸುವುದಿಲ್ಲ. ಕಠಿಣ ಗಣನೆ ಪದ್ಧತಿ, ಅಂಕಿಸಂಖ್ಯೆಗಳ ಭಿನ್ನತೆ, ಆರ್ಥಿಕತೆಯ ವ್ಯಾಪಕ ಅಸಂಘಟಿತ ವಲಯದ ಮಾಹಿತಿ ದೊರೆಯದೇ ಭಾರತದಲ್ಲಿ ಬಾಲ ಕಾರ್ಮಿಕರ ಸಂಖ್ಯೆ ಈ ಕೆಳಗಿನಂತೆ ಭಿನ್ನವಾಗಿವೆ:
2011ರ ಜನಗಣತಿಯ ಪ್ರಕಾರ – 43.53ದಶಲಕ್ಷ
2001ರ ಜನಗಣತಿಯ ಪ್ರಕಾರ – 12.5 ದಶಲಕ್ಷ
1994ರಲ್ಲಿ ಕಾರ್ಮಿಕ ಸಚಿವಾಲಯದ ಪ್ರಕಾರ 20 ದಶಲಕ್ಷ
1991ರ ಜನಗಣತಿ – 11.28 ದಶಲಕ್ಷ
1983ರಲ್ಲಿ ಯೋಜನಾ ಆಯೋಗದ ಪ್ರಕಾರ 17.86 ದಶಲಕ್ಷ
1983 ಬರೋಡಾದ ಆಪರೇಷನ್ ಆ್ಯಂಡ್ ರಿಸರ್ಚ್ ಗ್ರೂಪ್ ಸಮೀಕ್ಷೆಯ ಪ್ರಕಾರ – 44 ದಶಲಕ್ಷ
1981ರ ಜನಗಣತಿ – 13.6 ದಶಲಕ್ಷ
ಹಂಚಿಕೆ:
2001ರ ಜನಗಣತಿಯ ಬಲಕಾರ್ಮಿಕರನ್ನು ಒಂಬತ್ತು ಕೈಗಾರಿಕಾ ವಿಭಾಗಗಳಲ್ಲಿ ವಿಭಜಿಸಿತು:
1. ನಾಗರಿಕತೆ
2. ಕೃಷಿ ಕಾರ್ಮಿಕ
3. ದನಕರು, ಅರಣ್ಯ, ಮೀನುಗಾರಿಕೆ, ಪ್ಲಾಂಟೇಷನ್
4. ಗಣಿಗಾರಿಕೆ
5. ತಯಾರಿಕೆ & ಸಂಸ್ಕರಣೆ
6. ಕಟ್ಟಡ ನಿರ್ಮಾಣ
7. ವ್ಯಾಪಾರ ಮತ್ತು ವಾಣಿಜ್ಯ
8. ಸಾರಿಗೆ, ಸಂಪರ್ಕ & ಶೇಖರಣೆ
9. ಇತರ ಸೇವೆಗಳು
ಇದರಿಂದ ಗ್ರಾಮೀಣ ಪ್ರದೇಶದ ಬಹಳಷ್ಟು ಬಾಲಕಾರ್ಮಿಕರು (ಶೇಕಡಾ 84.29) ಕೃಷಿ ಕಾರ್ಯದಲ್ಲಿ ನಿರತವಾಗಿರುವುದು ತಿಳಿದು ಬರುತ್ತದೆ. ನಗರ ಪ್ರದೇಶದ ಬಾಲಕಾರ್ಮಿಕರ ಪೈಕಿ ಶೇಕಡಾ 39ರಷ್ಟು ಬಾಲಕಾರ್ಮಿಕರು ತಯಾರಿಕೆ, ಸಂಸ್ಕರಣೇ, ಸರ್ವಿಸಿಂಗ್ & ರಿಪೇರಿ ಇತ್ಯಾದಿಗಳಲ್ಲಿ ಕೆಲಸ ಮಾಡುತ್ತಾರೆ. ಮಾನವ ಹಕ್ಕುಗಳ ಸಂಘಟನೆಗಳು ಕೃಷಿ & ತಯಾರಿಕಾ ವಲಯಗಳ ಮೇಲೆ ಗಮನವನ್ನು ಕೇಂದ್ರಿಕರಿಸುತ್ತ ಬಂದಿವೆ. ಏಕೆಂದರೆ ಕೃಷಿ & ತಯಾರಿಕಾ ವಲಯಗಳಲ್ಲಿ ಕೆಲಸ ಮಾಡುವ ಬಾಲಕಾರ್ಮಿಕರಲ್ಲಿ ಹೆಚ್ಚಿನವರು ಜೀತದಾಳುಗಳಾಗಿದ್ದಾರೆ. ಜೀತದಾಳುಗಳಿಗೆ ವೇತನ ಅಥವಾ ಸಂಭಾವನೆ ಕೊಡದೆ ಅವರನ್ನು ಜೀವನಪರ್ಯಂತ ದುಡಿಸಿಕೊಳ್ಳಲಾಗುತ್ತದೆ. ಅಂತರಾಷ್ಟ್ರೀಯ ಕಾರ್ಮಿಕ ಸಂಘವು 1992ರಲ್ಲಿ ನಡೆಸಿದ ಎಣಿಕೆಯ ಪ್ರಕಾರ, ಭಾರತದಲ್ಲಿ ಜೀತದಾಳುಗಳ ಸಂಖ್ಯೆ ಒಂದು ದಶಲಕ್ಷಕ್ಕೆ ಹತ್ತಿರವಾಗಿತ್ತು. 1999ರಲ್ಲಿ ಸಂಯಕ್ತ ರಾಷ್ಟ್ರ ಸಂಘ ನಡೆಸಿದ ಎಣಿಕೆಯಲ್ಲಿ ಆ ಸಂಖ್ಯೆ 20 ದಶಲಕ್ಷಕ್ಕೆ ಏರಿತು.
ಅಘಾತಕಾರಿ ಅಂಕಿಗಳು:
2001ರ ಜನಗಣತಿಯ ಪ್ರಕಾರ ನಾಲ್ಕು ರಾಜ್ಯಗಳಲ್ಲಿ ಬಾಲಕಾರ್ಮಿಕರ ಸಂಖ್ಯೆ ಒಂದು ದಶಲಕ್ಷಗಿಂತ ಅಧಿಕವಾಗಿತ್ತು. ಆ ರಾಜ್ಯಗಳೆಂದರೆ ಆಂಧ್ರಪ್ರದೇಶ, ಮಧ್ಯಪ್ರದೇಶ, ರಾಜಸ್ಥಾನಿಗಳಿಗಿಂತ ಆಂಧ್ರಪ್ರದೇಶದಲ್ಲಿ ಅಧಿಕವಾಗಿತ್ತು. ಬಹಳಷ್ಟು ಬಾಲಕಾರ್ಮಿಕರು ಹೊಲ ಗದ್ದೆಗಳಲ್ಲಿ ದುಡಿಯುವ ಬಾಲಕರ್ಮಿಕರ ಪೈಕಿ ಶೇಕಡಾ 60 ರಷ್ಟು ಜನರ ವಯಸ್ಸು ಹತ್ತು ವರ್ಷ. ರಾಜಧಾನಿ ನಗರಗಳ & ಮೆಟ್ರೋ ಹಾಗೂ ಮೆಗಾ ಸಿಟಿಗಳ ಸಮೀಕ್ಷೆಗಳ ಅಂಕಿ ಸಂಖ್ಯೆಗಳ ಅಘಾತಕಾರಿಯಾಗಿವೆ. ಅತ್ಯಧಿಕ ಬಾಲಕಾರ್ಮಿಕರಿರುವುದು ಮುಂಬೈ ನಗರದಲ್ಲಿ, ನಗರ ಪ್ರದೇಶದಲ್ಲಿರುವ ಬಾಲಕಾರ್ಮಿಕರು ಹೋಟೇಲ್, ರೆಸ್ಟೋರೆಂಟ್, ಕ್ಯಾಂಟೀನುಗಳಲ್ಲಿ ಕೆಲಸ ಮಾಡುತ್ತಾರೆ. ಮನೆಗೆಲಸ ಮಾಡುವ ಮಕ್ಕಳೂ ಇದ್ದಾರೆ. ಮನೆಗೆಲಸ ಮಾಡುವ ಗ್ರಾಹಕ ವಸ್ತುಗಳನ್ನು ತಿರುಗಿ ಮಾರುವ ಹಾಗೂ ಚಿಂದಿ ಚೂರುಗಳನ್ನು ಸಂಗ್ರಹಿಸುವ ಮಕ್ಕಳು ಗಣನೆಗೆ ಬರುವುದಿಲ್ಲ. ಮದ್ದಿನ ಸಾಮಾನು, ಕಡ್ಡಿಪಟ್ಟಿಗೆ ತಯಾರಿಕಾ ಘಟಕಗಳಲ್ಲಿ, ಪೆನ್ಸಿಲ್ ಕೈಗಾರಿಕೆಯಲ್ಲಿ, ಗ್ಯಾಸ್ ಇಂಡಸ್ಟ್ರೀಯಲ್ಲಿ ಕೆಲಸ ಮಾಡುವ ಮಕ್ಕಳು ಅಪಾಯದ ನೆರಳಿನಲ್ಲಿ ಇರಬೇಕಾಗುತ್ತದೆ. ಟೀ ಸ್ಟಾಲ್, ರೆಸ್ಟೋರೆಂಟ್, ಢಾಬಾಗಳಲ್ಲಿ ಕೆಲಸ ಮಾಡುವ ಮಕ್ಕಳಿಗೆ ದಿನಗೂಲಿ ಸಿಗುತ್ತದೆ. ರಜೆ & ಇತರ ಯಾವ ಸೌಲಭ್ಯಗಳೂ ಇರುವುದಿಲ್ಲ, ಬಾಲಕಾರ್ಮಿಕರ ಸಮಸ್ಯೆ ಸಂಘಟಿತ ವಲಯಕ್ಕಿಂತಲೂ ಅಸಂಘಟಿತ ವಲಯದಲ್ಲಿ ಹೆಚ್ಚು ಗಂಭೀರವಾಗಿದೆ, ಏಕೆಂದರೆ ಅಸಂಘಟಿತ ವಲಯದಲ್ಲಿ ಮಾಲೀಕರು ಕಾಯಿದೆ ಕಾನೂನುಗಳನ್ನು ಉಲ್ಲಂಘಿಸುವುದು ಯಾರ ಗಮನಕ್ಕೂ ಬರುವುದಿಲ್ಲ.
ಮಕ್ಕಳು ವಿಶೇಷವಾಗಿ ಬಾಲಕಿಯರು ಅಂತರಾಷ್ಟ್ರೀಯ ಗಡಿಗಳ ಉದ್ದಕ್ಕೂ ಅಪಹರಿಸಲ್ಪಡುತ್ತಾರೆ, ಆದರೆ ಮೂಲಭೂತ ಹಿಂಸೆ, ಚಿತ್ರಹಿಂಸೆಯನ್ನು ಅನುಭವಿಸುತ್ತಾರೆ, ಅಪಹರಿಸಲ್ಪಡುವ ಮಕ್ಕಳು ಅಂಗಡಿಗಳಲ್ಲಿ, ಕಟ್ಟಡ ನಿರ್ಮಾಣ ಸ್ಥಳದಲ್ಲಿ ವೇಶ್ಯಾ ಗೃಹಗಳಲ್ಲಿ ಕೆಲಸ ಮಾಡಬೇಕಾಗುತ್ತದೆ. 7 ರಿಮದ 11 ವರ್ಷ ವಯೋಮಾನದ ಬಾಲಕಿಯರು ಒತ್ತಾಯ ಪೂರ್ವಕವಾಗಿ ಲೈಗಿಂಕ ಕಾರ್ಯಕರ್ತೆಯರಾಗಿ ಪರಿವರ್ತನೆ ಹೊಂದುತ್ತಾರೆ. ಅವರನ್ನು ದೈಹಿಕವಾಗಿ ಮತ್ತು ಮಾನಸಿಕವಾಗಿ ಹಿಂಸಿಗೆ ಮತ್ತು ಶೋಷಣೆಗೆ ಒಳಷಡಿಸಲಾಗುತ್ತದೆ. ಅವರು ಎಚ್‍ಐವಿ ವೈರಸ್ ಸೇರಿದಂತೆ ಇತರ ರೋಗಗಳಿಗೆ ಗುರಿಯಾಗುತ್ತಾರೆ, ಬಲಿ ಆಗುತ್ತಾರೆ.
ಉತ್ತರ ಪ್ರದೇಶದ ಪಶ್ಚಿಮ ಭಾಗದಲ್ಲಿ ಗ್ರಾಮೀಣ ಮಹಿಳೆಯರ ಅಭಿವೃದ್ಧಿ ಮೇಲೆ ನಡೆಸಲಾದ ಒಂದು ಅಧ್ಯಯನ 6ರಿಂದ 11 ವರ್ಷ ವಯೋಮಾನದ 245 ಗ್ರಾಮೀಣ ಬಾಲಕಿಯರನ್ನು ಸಂದರ್ಶಿಸಲಾಯಿತು. ಅವರಲ್ಲಿ 83 ಬಾಲಕಿಯರು ಲಾಭದಾಯಕ & ಆರೋಗ್ಯದಾಯಕ ಚಟುವಟಿಕೆಗಳಲ್ಲಿ ತೊಡಗಿರುವುದು ಕಂಡುಬಂದಿತು. 11 ರಿಂದ 18 ವರ್ಷ ವಯೋಮಾನದ ಬಾಲಕಿಯರೂ ಆರ್ಥಿಕ ಚಟುವಟಿಕೆಗಳಲ್ಲಿ ನಿರತರಾಗಿದ್ದರು. ಉತ್ತರ ಪ್ರದೇಶದ ಭಡೋನಿ ಸುತ್ತಮುತ್ತ ಕೆಲಸಗಾರರಲ್ಲಿ ಶೇ. 25 ರಷ್ಟು ಕೆಲಸಗಾರರು ಜಮಖಾನ ನೇಯುತ್ತಾರೆ. ಅವರೆಲ್ಲರೂ ಬಾಲಕಾರ್ಮಿಕರಾಗಿದ್ದಾರೆ. ಮಿರ್ಜಾಪುರದಲ್ಲಿರುವ 20,000 ಕೆಲಸಗಾರರಲ್ಲಿ 8000 ಮಕ್ಕಳಿದ್ದಾರೆ.
ಆರ್ಥಿಕತೆ ಮತ್ತು ಬಾಲಕಾರ್ಮಿಕರು
1977ರ ಯುನಿಸೆಫ್ ವರದಿ (Roots of child word) ಯ ಪ್ರಕಾರ ಬಾಲ ಕಾರ್ಮಿಕರ ಸಂಖ್ಯೆ ಬಡದೇಶಗಳಲ್ಲಿ ಅಧಿಕವಾಗುತ್ತಿದೆ. 80 ರ ದಶಕದಲ್ಲಿ ಬಡ ದೇಶಗಳಲ್ಲಿ ಬಾಲಕಾರ್ಮಿಕರು ಹೆಚ್ಚಾಗಲು ಸರಕಾರಿ ಸಾಲ ಅಸಮರ್ಪಕ ಆರ್ಥಿಕ ಅಶಾಂತಿ ಮುಂತಾದವುಗಳು ಕಾರಣವಾದವು. ಅನೇಕ ದೇಶಗಳಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಹಣದ ಕೊರತೆ ಉಂಟಾಯಿತು. ಅದರ ಪರಿಣಾಮವಾಗಿ ಮಕ್ಕಳು ಬಾಲಕಾರ್ಮಿಕರಾಗಿ ಪರಿವರ್ತಿತರಾದರು. ಭಾರತದಲ್ಲಿ ಬಾಲಕಾರ್ಮಿಕ ಸಮಸ್ಯೆಗೆ ಬಡತನ ಕಾರಣವಾಗಿದೆ. ಈ ಬಡತನಕ್ಕೂ & ಜಾತಿ ವ್ಯವಸ್ಥೆಗೂ ಸಂಬಂಧವಿದೆ. ಒಬ್ಬ ಬಾಲಕಾರ್ಮಿಕನನ್ನು ದೇಶದ ಜಾತಿ ವ್ಯವಸ್ಥೆಗೆ ಹೋಲಿಸಿದರೆ ಪರಿಶಿಷ್ಟ ಜಾತಿ & ಪರಿಶಿಷ್ಟ ಪಂಗಡದ ಜನರಲ್ಲಿ ಬಾಲಕಾರ್ಮಿಕರ ಸಂಖ್ಯೆ ಅಧಿಕವಾಗಿದೆ, ಕೆಳಜಾತಿ ಮಕ್ಕಳು ಬಡತನದಿಂದಾಗಿ ದುಡಿಯುವುದು ಅನಿವಾರ್ಯವಾಗುತ್ತದೆ. ದುಡಿತ ಅರನ್ನು ಬಾಲಕಾರ್ಮಿಕರನ್ನಾಗಿ ಮಾಡುತ್ತದೆ. ಜೀತ ಬಾಲಕಾರ್ಮಿಕ ಪದ್ಧತಿ ಬಾಲಕಾರ್ಮಿಕರಿಗಿಂತ ಅತ್ಯಂತ ಹೀನಾಯ & ಅಸಹನೀಯ ಬಡತನ & ಸಾಮಾಜಿಕ ಭದ್ರತೆಯ ಕೊರತೆಯಿಂದಾಗಿ ಮಕ್ಕಳು ಜೀತದಾಳುಗಳಾಗುತ್ತಾರೆ. ಬಡವರಿಗೆ ಸಾಲ, ಸೌಲಭ್ಯಗಳು ಹೇರಳವಾಗಿರದೆ ವಿರಳಾತಿ ವಿರಳ ಆಗಿರುತ್ತದೆ.ಸಹಕಾರಿ ಸಾಲ ಬ್ಯಾಂಕ್ ಸಾಲ ಇತ್ಯಾದಿ ಸಾಲಗಳು ಅವಶ್ಯಕತೆಗಳನ್ನು ಪೂರೈಸುವ ಕೆಲವೇ ಕುಟುಂಬಗಳಿಗೆ ಲಭಿಸುತ್ತವೆ. ದಲ್ಲಾಳಿಗಳು (ಮಧ್ಯವರ್ತಿಗಳು) ಸಾಲ ದೊರಕಿಸಲು ಮಧ್ಯ ಪ್ರವೇಶಿಸುತ್ತಾರೆ. ಬಡವರಿಗೆ ಸಾಲ ದೊರೆಯುತ್ತದೆ. ಸಾಲ ಮರುಪಾವತಿ ವಿಳಂಬವಾಗಿ ಅಸಲಿನ ಜೊತೆ ಬಡ್ಡಿ ಬೆಳೆಯುತ್ತದೆ. ಸಾಲ ತೀರಿಸಲಾಗದೆ ಇದ್ದಾಗ ಬಡವರು ತಮ್ಮ ಮಕ್ಕಳನ್ನು ದುಡಿಯಲು ಹಚ್ಚುತ್ತಾರೆ. ಮಕ್ಕಳ ದುಡಿಮೆಯ ಫಲ ಸಾಲದ ಮೇಲಿನ ಬಡ್ಡಿಗಿಂತ ಕಡಿಮೆಯಾಗಿರುತ್ತದೆ. ಜೀತದಾಳುಗಳಾದ ಮಕ್ಕಳು ಸಾಲ ತೀರುವವರೆಗೆ ದುಡಿಯಬೇಕಾಗುತ್ತದೆ. ಸಾಲ ತೀರುವುದಿಲ್ಲ ಅವರು ಜೀತ ವಿಮುಕ್ತರಾಗುವುದಿಲ್ಲ.
ಕಾಯಿದೆಗಳು ಮತ್ತು ಆಯೋಗಗಳು
1933: ಭಾರತದಲ್ಲಿ ಬಾಲಕಾರ್ಮಿಕ ಪದ್ಧತಿಗೆ ಸಂಬಂಧಿಸಿ ಪ್ರಪ್ರಥಮ ಕಾಯಿದೆ. Emmetment of children pledging of labour act of february 1933
1938 ಮಕ್ಕಳ ಉದ್ಯೋಗ ಕಾಯಿದೆ (Employment of Children Act)
1948: ಕನಿಷ್ಟ ವೇತನಗಳು ಕಾಯಿದೆ. (Minimum wages Act )
1948:Factories Act
1951 : ಪ್ಲಾಂಟೇಶನ್ ಲೇಬರ್ ಆ್ಯಕ್ಟ್
1952: ಗಣಿಗಳ ಕಾಯಿದೆ. (Mines Act)
1958:Merchant Shipping Act
1961 ಬೀಡಿ & ಸಿಗರೇಟ್ ಕಾರ್ಮಿಕರ (ಉದ್ಯೋಗ ಸ್ಥಿತಿ) ಕಾಯಿದೆ.
1974: 1959ರ ಮಕ್ಕಳ ಹಕ್ಕುಗಳ ಮೇಲಿನ ಸಂಯುಕ್ತ ರಾಷ್ಟ್ರ ಸಂಘದ ಘೋಷಣೆಗೆ ಅನುಗುಣವಾಗಿ ಭಾರತವು 1974ರಲ್ಲಿ ರಾಷ್ಟ್ರೀಯ ಮಕ್ಕಳ ನೀತಿಯನ್ನು ಅಳವಡಿಸಿಕೊಂಡಿತು.
1979: ಸಂಯುಕ್ತ ರಾಷ್ಟ್ರ ಸಂಘದ ಸಾಮಾನ್ಯ ಸಭೆಯೂ
1979ನ್ನು ಅಂಶ ರಾಷ್ಟ್ರೀಯ ಮಕ್ಕಳ ವರ್ಷವನ್ನಾಗಿ ಘೋಷಿಸಿತು.
1986: ಬಾಲಕಾರ್ಮಿಕ (ನಿಷೇಧ & ನಿಯಂತ್ರಣ) ಕಾಯಿದೆ.
1986: ಬಾಲಕಾರ್ಮಿಕ ಕಾಯಿದೆ
1987: ರಾಷ್ಟ್ರೀಯ ಬಾಲಕಾರ್ಮಿಕ ನೀತಿ
1991: ಅಂತರಾಷ್ಟ್ರೀಯ ಕಾರ್ಮಿಕ ಸಂಘವು 1991 ಡಿಸೆಂಬರ್‍ನಲ್ಲಿ ಬಾಲ ಕಾರ್ಮಿಕ ಪದ್ದತಿಯ ನಿರ್ಮೂಲನೆಗೆ ಅಂತರ ರಾಷ್ಟ್ರೀಯ ಕಾರ್ಯಕ್ರಮವನ್ನು ಆರಂಭಿಸಿತು. ಆ ಕಾರ್ಯ ಕ್ರಮದಲ್ಲಿ 1992ರಲ್ಲಿ ಪಾಲ್ಗೊಂಡಿತು.
1994:1994 ಸೆಪ್ಟೆಂಬರ್ 26ರಂದು ಬಾಲಕಾರ್ಮಿಕ ಪದ್ಧತಿಯ ನಿರ್ಮೂಲನೆಗೆ ರಾಷ್ಟ್ರೀಯ ಪ್ರಾಧಿಕಾರದ ರಚನೆ.
1996: ಬಾಲಕಾರ್ಮಿಕ ಪದ್ಧತಿಯ ಮೇಲೆ ಸರ್ವೋಚ್ಛ ನ್ಯಾಯಾಲಯದ ನಿರ್ದೇಶನ.
2006: ಬಾಲಕಾರ್ಮಿಕ ಪದ್ಧತಿ ನಿಷೇಧಕ್ಕೆ ಕಾರ್ಮಿಕ ಸಚಿವಾಲಯವು 2006 ಆಗಸ್ಟ್ 1ರಂದು ಪ್ರಕಟಣೆಯನ್ನು ಹೊರಡಿಸಿತು. ಆದರೆ 2006 ಅಕ್ಟೋಬರ್ 10ರಂದು ಜಾರಿಗೆ ಬಂತು.
ಆಯೋಗಗಳು ಕಮಿಟಿಗಳು
1. ರಾಯಲ್ ಕಮಿಶನ್ ಆನ್‍ಲೇಬರ
2. ಲೇಬರ್ ಇನ್ವಸ್ಟಿಗೇಶನ್ ಕಮಿಟಿ
3. ನ್ಯಾಷನಲ್ ಕಮಿಷನ್ ಆನ್ ಲೇಬರ್ 1966-69
4. ಗುರುಪಾದ ಸ್ವಾಮಿ ಕಮಿಟಿ ಆನ್ ಚೈಲ್ಡ್ ಲೇಬರ್ 1979.
5. ಸನತಾ ಮೆಹತಾ ಕಮಿಟಿ ಆನ್ ಚೈಲ್ಡ್ ಲೇಬರ್ 1984.
ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆ:
ಭಾರತವು ಬಾಲಕಾರ್ಮಿಕ ಪದ್ಧತಿಯ ನಿರ್ಮೂಲನೆಗೆ ಬದ್ಧವಾಗಿದೆ. ಹದಿನಾಲ್ಕು ವರ್ಷಕ್ಕಿಂತ ಕಡಿಮೆ ವಯುಸ್ಸಿನ ಮಕ್ಕಳನ್ನು ಯಾವುದೇ ಫ್ಯಾಕ್ಟರಿಯಲ್ಲಿ ಅಥವಾ ಗಣಿಯಲ್ಲಿ ಅಥವಾ ಯಾವುದೇ ಅನಾರೋಗ್ಯಕರ ಸ್ಥಳದಲ್ಲಿ ದುಡಿಯಲು ಹಚ್ಚುವುದು ಅಪರಾಧ ಎಂದು ಸಂವಿಧಾನದ 24ನೇ ಕಲಮು ಸ್ಪಷ್ಟವಾಗಿ ತಿಳಿಸುತ್ತದೆ. ಅಪ್ರಾಪ್ತ ವಯಸ್ಸಿನ ಮಕ್ಕಳನ್ನು ದುಡಿಯಲು ಒತ್ತಾಯಿಸಬಾರದು & ಹೆದರಿಸಿ ಬೆದರಿಸಿ ಅವರನ್ನು ದುಡಿಸಿಕೊಳ್ಳಬಾರದು ಹಾಗೇನಾದರೂ ಮಾಡಿದರೆ ಅದು ಅಪರಾಧವಾಗುತ್ತದೆ ಎಂದು 39 (ಇ) ನೇ ಕಲಮಿನಡಿಯಲ್ಲಿ ನಿರ್ದೇಶಕ ತತ್ವಗಳು ಭಾರತ ಸರ್ಕಾರವು ಬಾಲಕಾರ್ಮಿಕ ಕಾಯಿದೆಯನ್ನು 1986ರಲ್ಲಿ ಜಾರಿಗೊಳಿಸಿತು. 14 ವರ್ಷ ಪೂರ್ಣಗೊಳ್ಳದ ಮಕ್ಕಳು ದುಡಿಯುವುದನ್ನು ಅವರನ್ನು ದುಡಿಸಿಕೊಳ್ಳುವುದು ಈ ಕಾಯಿದೆ ಪ್ರತಿಬಂಧಿಸುತ್ತದೆ. ಇದು ಅಲ್ಲದೆ ಬಾಲಕಾರ್ಮಿಕ ಮೇಲಿನ ರಾಷ್ಟ್ರೀಯ ನೀತಿ (National Policy on Child Labour) ಯನ್ನು ಭಾರತ ಸರ್ಕಾರ 1987ರಲ್ಲಿ ಘೋಷಿಸಿತು.
ಈ ರಾಷ್ಟ್ರೀಯ ನೀತಿಯ ಅಡಿಯಲ್ಲಿ ಇರುವ ಕ್ರಿಯಾಯೋಜನೆ ಈ ಕೆಳಗಿನಂತೆ ಇದೆ:
ಸಾಧ್ಯವಾದಗಲೆಲ್ಲಾ ಮಕ್ಕಳ ಅಭಿವೃದ್ಧಿಗೆ ಉಪಯುಕ್ತ ಆಗುವ ಸಾಮಾನ್ಯ ಅಭಿವೃದ್ಧಿ ಕಾರ್ಯಕ್ರಮಗಳ ಮೇಲೆ ಗಮನವನ್ನು ಕೇಂದ್ರಿಕರಿಸುವುದು.
ವೇತನ ಅರೆವೇತನದ ಆಧಾರದ ಮೇಲೆ ಬಾಲಕಾರ್ಮಿಕರು ದುಡಿಯುವ ಮಕ್ಕಳು ಅಧಿಕವಾಗಿ ಇರುವ ಪ್ರದೇಶಗಳಲ್ಲಿ ಯೋಜನಾಧಾರಿತ ಕ್ರಿಯಾಯೋಜನೆಗಳನ್ನು 1994 ಆಗಸ್ಟ್ 15ರಂದು ಆಗಿನ ಪ್ರಧಾನಮಂತ್ರಿ ಪಿ.ವಿ. ನರಸಿಂಹರಾವ್ ಅವರು ಬಾಲಕಾರ್ಮಿಕ ಪದ್ಧತಿಯ ನಿಷೇಧ ಬಗೆಗಿನ ಕಾರ್ಯಕ್ರಮದ ತಮ್ಮ ಪ್ರಸ್ತಾವನೆಯನ್ನು ಪ್ರಕಟಿಸಿದೆ. 1986ರ ಬಾಲಕಾರ್ಮಿಕ ಕಾಯಿದೆಯಲ್ಲಿ ಸೂಚಿಸಲಾದ ಅನಾರೋಗ್ಯಕರ ಕೈಗಾರಿಕೆಗಳಲ್ಲಿ ಕೆಲಸ ಮಾಡುವ ಎರಡು ದಶಲಕ್ಷ ಬಾಲಕಾರ್ಮಿಕರನ್ನು ವಿಮುಕ್ತಿ ಗೊಳಿಸುವ ಉದ್ದೇಶ ಆ ಕಾರ್ಯಕ್ರಮದಾಗಿತ್ತು. ಬಾಲಕಾರ್ಮಿಕರು ಕೂಡಲೆ ಕೆಲಸವನ್ನು ಬಿಟ್ಟು ಶಾಲೆಗೆ ಸೇರಲು & ಶಾಲೆಗೆ ಸೇರಿದ್ದಕ್ಕೆ ಒಂದು ನೂರು ರೂಪಾಯಿ ಪ್ರೋತ್ಸಾಹ ಧನ & ಪ್ರತಿದಿನ ಒಂದು ಊಟ ಒದಗಿಸಿಕೊಡಲು ಕಾರ್ಯಕ್ರಮದಲ್ಲಿ ಅವಕಾಶ ಕಲ್ಪಿಸಿಕೊಡಲಾಗಿತ್ತು. ಭಾರತ ಸರ್ಕಾರವು ಇತ್ತೀಚೆಗೆ ಎರಡು ಕಾರ್ಯಕ್ರಮಗಳನ್ನು ಅಳವಡಿಸಿದೆ. ಒಂದು ರಾಷ್ಟ್ರೀಯ ಬಾಲಕಾರ್ಮಿಕ ಯೋಜನೆ (National Child Labour Project Scheme) ಇನ್ನೊಂದು ವಿಮುಕ್ತಿ ಹೊಂದಿದ ಬಾಲಕಾರ್ಮಿಕರಿಗೆ ಪುನರ್ವಸತಿ ಕಲ್ಪಿಸುವ ಸರ್ಕಾರೇತರ ಸಂಸ್ಥೆಗಳಿಗೆಎ ಅನುದಾನವನ್ನು ನೀಡುವುದು. ಈಗ ದೇಶಾದ್ಯಂತ 100 ರಾಷ್ಟ್ರೀಯ ಬಾಲಕಾರ್ಮಿಕ ಯೋಜನೆಗಳಿವೆ. ಈ ಯೋಜನೆಗಳಿಂದ 2.11 ಲಕ್ಷ ಬಾಲಕಾರ್ಮಿಕರಿಗೆ ಪ್ರಯೋಜನವಾಗುತ್ತದೆ. ಹತ್ತನೆ ಪಂಚವಾರ್ಷಿಕ ಯೋಜನೆಯಲ್ಲಿ ಇನ್ನೂ 150 ಯೋಜನೆಗಳನ್ನು ಹೆಚ್ಚುವರಿಯಾಗಿ ಆರಂಭಿಸಲು ನಿರ್ಧರಿಸಲಾಗಿದೆ.
2006 ಆಗಸ್ಟ 1ರಂದು ಭಾರತ ಸರ್ಕಾರವು ಮಹತ್ವ ಪೂರ್ಣ ಪ್ರಕಟಣೆಯನ್ನು ಹೊರಡಿಸಿತು. ಅದು ಢಾಬಾಗಳಲ್ಲಿ, ಹೋಟೆಲ್ ರೆಸ್ಟೋರೆಂಟ್‍ಗಳಲ್ಲಿ, ಟೀ ಶಾಪ್‍ಗಳಲ್ಲಿ ಮಕ್ಕಳು ದುಡಿಯುವುದನ್ನು ಅವರನ್ನು ದುಡಿಸಿಕೊಳ್ಳುವುದನ್ನು ಪ್ರತಿಬಂಧಿಸುವುದಕ್ಕೆ ಸಂಬಂಧಪಟ್ಟಿತ್ತು. ಪ್ರಕಟಣೆಯ ಪ್ರಕಾರ ಬಾಲಕಾರ್ಮಿಕ ಪದ್ಧತಿಯ ನಿಷೇಧ ಅಕ್ಟೋಬರ್ 10ರಂದು ಜಾರಿಗೆ ಬಂದಿದೆ. ಇದನ್ನು ಬಾಲಕಾರ್ಮಿಕ (ನಿಷೇಧ & ನಿಯಂತ್ರಣ) ಕಾಯಿದೆ 1986ರ ಅಡಿಯಲ್ಲಿ ಜಾರಿಗೊಳಿಸಲಾಗಿದೆ. ಮಕ್ಕಳನ್ನು ದುಡಿಸಿಕೊಳ್ಳುವ ಮೂಲಕ ಕಾಯಿದೆಯನ್ನು ಉಲ್ಲಂಘಿಸುವ ದಂಡ & ಶಿಕ್ಷೆಗೆ ಒಳಗಾಗಬೇಕಾಗುತ್ತದೆ.ಸರಕಾರಿ ನೌಕರರು ಮಕ್ಕಳನ್ನು ಮನೆಯಲ್ಲಿ ದುಡಿಸಿಕೊಳ್ಳುವುದನ್ನು ಈ ಮೊದಲೇ ನಿಷೇಧಿಸಲಾಗಿದೆ. ಪ್ರಕಟಣೆಯ ಮೂಲಕ ಸರಕಾರವು ಪ್ರತಿಯೊಬ್ಬರ ಮೇಲೆಯೂ ನಿಯಂತ್ರಣಗಳನ್ನು ಹೇರಿದೆ.
1996ರ ಡಿಸೆಂಬರ್ 10ರಂದು ಸರ್ವೋಚ್ಛ ನ್ಯಾಯಾಲಯ ನೀಡಿದ ಒಂದು ಮಹತ್ವದ ತೀರ್ಪಿನಲ್ಲಿ ಮಕ್ಕಳ ಶೋಷಣೆಯನ್ನು ತಡೆಗಟ್ಟಲು & ಅವರ ಆರ್ಥಿಕ, ಸಾಮಾಜಿಕ & ಮಾನವೀಯ ಹಕ್ಕುಗಳನ್ನು ರಕ್ಷಿಸಲು ಅವರು ಅನಾರೋಗ್ಯಕರ ಕೆಲಸ ಮಾಡುವುದನ್ನು ನಿಷೇಧಿಸಬೇಕು & ಅವರಿಗಾಗಿ ಪುನರ್ವಸತಿ ನಿಧಿಯನ್ನು ಸ್ಥಾಪಿಸಬೇಕೆಂದು ಆದೇಶಿಸಿತ್ತು. ಬಾಲ ಕಾರ್ಮಿಕ ಕಾಯಿದೆಯನ್ನು ಉಲ್ಲಂಘಿಸುವವರು ಪ್ರತಿಯೊಬ್ಬ ಬಾಲಕಾರ್ಮಿಕನ ಪುನರ್ವಸತಿಗೆ 20,000 ರೂ. ಠೇವಣಿ ಇಡಬೇಕೆಂದು ನಿರ್ದೇಶನ ನೀಡಿತು.
ಮಾಲೀಕನು ಬಾಲಕಾರ್ಮಿಕರನ್ನು ಕೆಲಸದಿಂದ ವಿಮುಕ್ತಗೊಳಿಸಿದ ಮೇಲೆಯೂ ಮಾಲೀಕನ ಹೊಣೆಗಾರಿಕೆ ಕಡಿಮೆಯಾಗುವುದಿಲ್ಲ. ಬಾಲಕನ ಬದಲಿಗೆ ಅವನ ಕುಟುಂಬದ ಒಬ್ಬ ವಯಸ್ಕನಿಗೆ ಕೆಲಸ ಒದಗಿಸಲು ಸರ್ವೋಚ್ಛ ನ್ಯಾಯಾಲಯ ನಿರ್ದೇಶಿಸಿತು. ಸಂಬಂಧಪಟ್ಟ ಸರ್ಕಾರ ಬಾಲಕಾರ್ಮಿಕನ ಪುನರ್‍ವಸತಿಗಾಗಿ 5000 ರೂಪಾಯಿ ನಿಧಿಯಲ್ಲಿ ಠೇವಣಿ ಇಡಬೇಕಾಗುತ್ತದೆ.
ಬಾಲಕಾರ್ಮಿಕನ ಕ್ಷೇತ್ರದ ಬಹಳಷ್ಟು ಸುಧಾರಣೆಯ ನಿರೀಕ್ಷೆಗಳು ಕಂಡು ಬಂದರೆ 1986ರ ಬಾಲಕಾರ್ಮಿಕ (ನಿಷೇಧ & ನಿಯಂತ್ರಣ) ಕಾಯ್ದೆ ಯಾವುದೇ ರೀತಿಯ ಉದ್ದೇಶಿತ ಕ್ರಿಯೆಗೆ ರಾಜ್ಯ ಸರ್ಕಾರಗಳಿಗೆ ಪ್ರೇರಣೆಯಾಗಲಿಲ್ಲ. ಬಾಲಕಾರ್ಮಿಕ ಪದ್ಧತಿಗೆ ಮೂಲಕಾರಣವಾದ ಬಡತನದ ನಿವಾರಣೆ ಒಂದು ರಾತ್ರಿಯಲ್ಲಿ ಸಾಧ್ಯವಿಲ್ಲದೆ ಇರುವಾಗ ಕಾಯಿದೆಯನ್ನು ನಿರೀಕ್ಷಿತ ಭರವಸೆಯೊಂದಿಗೆ ರೂಪಿಸಲಾಗಿದೆ. ಆರೋಗ್ಯಕರ ಸಂಘಟನಾತ್ಮಕ ವಲಯಗಳಲ್ಲಿ 14 ವರ್ಷದ ಒಳಗಿನ ಮಕ್ಕಳು ದುಡಿಯುವುದಕ್ಕೆ ಸೂಕ್ತ ರಕ್ಷಣೆ & ಸೌಲಭ್ಯಗಳೊಂದಿಗೆ ಅವಕಾಶ ಕಲ್ಪಿಸಿಕೊಡಲಾಗಿದೆ. ಆದರೆ ಕಠಿಣ ತಪಾಷಣೆ ವ್ಯವಸ್ಥೆಯ ಸಡಿಲಿಕೆಯಿಂದಾಗಿ ಮಾಲೀಕರು ಬಾಲಕಾರ್ಮಿಕರಿಗೆ ಸಿಗಬೇಕಾದ ಸೌಲಭ್ಯಗಳನ್ನು ಸಿಗದಂತೆ ಮಾಡುತ್ತಾ ಬಂದಿದ್ದಾರೆ.
ಇತ್ತೀಚಿನ ಕ್ರಮಗಳು
• ಬಾಲ ಕಾರ್ಮಿಕರಿಗೆ ಪುನರ್ವವಸತಿ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು. ಪ್ರಧಾನಮಂತ್ರಿ ಘೋಷಣೆ
• ವಿಮೋಚಿತ ಬಾಲಕಾರ್ಮಿಕರಿಗೆ ಉಚಿತ ವೃತ್ತಿಪರ ಶಿಕ್ಷಣ ‘ಶಾಲೆಯಲ್ಲಿ ಕೆಲಸ’ (Work in School ) ಕಾರ್ಯಕ್ರಮ.
• ವೃತ್ತಿ ಶಿಕ್ಷಣಕ್ಕಾಗಿ ಪಾಲಕ - ಪೋಷಕರಿಗೆ ಸಲಹೆ & ಪ್ರೋತ್ಸಾಹ ಧನ ನೀಡುವುದು.
• ಬಾಲಕಾರ್ಮಿಕ ನಿಷೇಧ ಪರಿಣಾಮಕಾರಿ ಜಾರಿಗೆ ಸರಕಾರೇತರ ಸಂಸ್ಥೆಗಳನ್ನು ಬಳಸಿಕೊಳ್ಳುವುದು.
• ಪುನರ್ವಸತಿಗಾಗಿ ಸರಕಾರೇತರ ಸಂಸ್ಥೆಗಳಿಗೆ ಅನುದಾನ ನೀಡುವುದು.
ಮಕ್ಕಳನ್ನು ಕೆಲಸದಿಂದ ವಿಮೋಚನೆಗೊಳಿಸಿ, ಅವರ ಮನೆಗೆ ಕಳಿಸುವುದು. ಅವರಿಗೆ ಅಲ್ಪಕಾಲದ ಆಶ್ರಯ ಶಾಲೆಗಳಲ್ಲಿ ಶಿಕ್ಷಣ & ತರಬೇತಿ ನೀಡುವುದು, ಮಧ್ಯಾಹ್ನದ ಬಿಸಿಯೂಟ & ಸರ್ವಶಿಕ್ಷಣ ಅಭಿಯಾನ ಮೂಲಕ ಶಾಲೆಬಿಟ್ಟ ಮಕ್ಕಳನ್ನು ಮತ್ತು ಶಾಲೆಯತ್ತ ಆಕರ್ಷಿಸುವುದು.
ಮಕ್ಕಳು ಸಾಕ್ಷಿಗಳಾಗಲು ಅರ್ಹರೇ?
ನ್ಯಾಯ ವಿಧಿಯಲ್ಲಿ ನ್ಯಾಯ ಪ್ರಕ್ರಿಯೆಯಲ್ಲಿ & ನ್ಯಾಯ ವಿಚಾರಣೆಯಲ್ಲಿ ಹೆಚ್ಚಿನ ಪ್ರಾಮುಖ್ಯತೆ ಇರುವುದು ಸಾಕ್ಷಿಗಳಿಗೆ ಏಕೆಂದರೆ ಸಾಕ್ಷಿಗಳ ಆಧಾರದ ಮೇಲೆಯೇ ನ್ಯಾಯ ನಿರ್ಣಯವಾಗುತ್ತದೆ. ಬಹಳಷ್ಟು ಪ್ರಕರಣಗಳಲ್ಲಿ ಆರೋಪಿಗಳ ದೋಷ ಅಥವಾ ನಿರ್ದೋಷತನ ಸಾಕ್ಷಿಗಳ ಹೇಳಿಕೆಯಿಂದ ಸ್ಪಷ್ಟವಾಗುತ್ತದೆ. ಸಾಕ್ಷಿ ಪ್ರಕರಣಕ್ಕೆ ಯಾವುದೇ ರೀತಿಯಲ್ಲಿ ಸಂಬಂಧಪಟ್ಟ ವ್ಯಕ್ತಿ ಆಗಿರುತ್ತಾನೆ ಅಥವಾ ಆಗಿರುತ್ತಾಳೆ. ನ್ಯಾಯಾಲಯಗಳಲ್ಲಿ ಸಾಕ್ಷಿಗಳಿಲ್ಲದೆ ಹೋದರೆ ನ್ಯಾಯ ವಿಚಾರಣೆ ನಡೆಯುವುದೇ ಇಲ್ಲ ನ್ಯಾಯಾಲಯಗಳು ಸಾಕ್ಷಿಗಳಿಲ್ಲದೆ ನ್ಯಾಯ ವಿಚಾರಣೆ ನಡೆಸಿದರೆ ನ್ಯಾಯ ವ್ಯವಸ್ಥೆ ಅಸ್ತವ್ಯಸ್ತವಾಗುತ್ತದೆ. ನ್ಯಾಯ ಕ್ರಿಯೆಯಲ್ಲಿ ಇಷ್ಟೊಂದು ಮಹತ್ವ ಹೊಂದಿರುವ ಸಾಕ್ಷಿಗಳು ಸ್ತ್ರೀ, ಪುರುಷ, ವೃದ್ಧ ಅಥವಾ ಬಾಲಕ, ಬಾಲಕಿಯಾಗಿರಬಹುದು, ಸಾಕ್ಷಿ ಸಂಬಂಧಿತ ಪ್ರಚಲಿತವಾಗಿರುವ 1872ರ ಸಾಕ್ಷ್ಯ ಕಾಯಿದೆಯ ಪ್ರಕಾರ ಎಲ್ಲರೂ ಸಾಕ್ಷಿಗಳಾಗಲು ಅರ್ಹರಾಗುತ್ತಾರೆ. ಅದಕ್ಕೆ ವಯಸ್ಸು & ಲಿಂಗ ಭೇದವಿಲ್ಲ ಇಲ್ಲಿಯವರೆಗಿನ ಕೆಲವು ವಿಶಿಷ್ಟ ಪರಿಸ್ಥಿತಿಗಳಲ್ಲಿ ರೋಗಿ, ಹುಚ್ಚ & ಉಪವಾಸ ಬಿದ್ದ ವ್ಯಕ್ತಿಗಳನ್ನು ಸಹ ಸಾಕ್ಷ್ಯ ಹೇಳಲು ಅರ್ಹರೆಂದು ಪರಿಗಣಿಸಲಾಗಿದೆ. ಒಬ್ಬ ಹುಚ್ಚನೂ ಸಹ ಅವನಿಗೆ ಕೇಳಲಾಗುವ ಪ್ರಶ್ನೆಗಳನ್ನು ತಿಳಿದುಕೊಂಡು ಉತ್ತರಿಸುವ ಸಾಮಥ್ರ್ಯ ಹೊಂದಿದ್ದರೆ ಸಾಕ್ಷಿಯಾಗಲು ಅರ್ಹನಾಗುತ್ತಾನೆ.
ಈಗ ನಮ್ಮ ಮುಂದೆ ಇರುವ ಪ್ರಶ್ನೆ ಎಂದರೆ ಮಕ್ಕಳು, ಅಪ್ರಾಪ್ತ ವಯಸ್ಸಿನ ಬಾಲಕರೂ ಸಾಕ್ಷ್ಯ ಹೇಳಲು ಅರ್ಹರಾಗುತ್ತಾರೆಯೇ? ಎಂಬುದು ನ್ಯಾಯಾಂಗವೂ ಬಾಲ ಸಾಕ್ಷಿಗಳನ್ನೂ ಸಹ ಬೇರೆ ಸಾಕ್ಷಿಗಳ ಹಾಗೆಯೇ ಪರಿಗಣಿಸುತ್ತಾ ಬಂದಿದೆ. ಯಾವುದೇ ಬಾಲಕನು ಸಾಕ್ಷ್ಯ ಹೇಳಲು ನ್ಯಾಯಾಲಯದಲ್ಲಿ ಹಾಜರಾದರೆ, ನ್ಯಾಯಾಲಯವು ಬಾಲ್ಯ ಸಾಕ್ಷಿಯನ್ನು ಪರಿಶೀಲಿಸುತ್ತದೆ. ಬಾಲಕ ಅಥವಾ ಬಾಲಕಿಯ ಲಿಖಿತ ಹೇಳಿಕೆಯನ್ನು ಪಡೆದುಕೊಂಡು ಪರಿಶೀಲಿಸುವ ಮುನ್ನ ಅವನು ಅಥವಾ ಅವಳು ಸಾಕ್ಷ್ಯ ಹೇಳಲು ಹೊಂದಿರುವ ಅರ್ಹತೆಯನ್ನು ಪರೀಕ್ಷಿಸಲಾಗುತ್ತದೆ. ಅದಕ್ಕಾಗಿ ಕೆಲವು ಸಾಮಾನ್ಯ ಪ್ರಶ್ನೆಗಳನ್ನು ಕೇಳಲಾಗುತ್ತದೆ & ಇತರ ಕೆಲವು ಮಹತ್ವದ ಅಂಶಗಳ ಬಗ್ಗೆ ವಿಚಾರಿಸಲಾಗುತ್ತದೆ. ಮಹತ್ವದ ಅಂಶಗಳೆಂದರೆ ಬಾಲ ಸಾಕ್ಷಿಯ ವಯಸ್ಸು ಶಿಕ್ಷಣ, ಹುಟ್ಟಿ ಬೆಳೆದ ವಾತಾವರಣ, ವರ್ತನೆ, ತಿಳುವಳಿಕೆ ಇತ್ಯಾದಿ.
ಬಾಲ ಸಾಕ್ಷಿ ಬೌದ್ಧಿಕವಾಗಿ ಅಪರಿಪಕ್ಷ ಎಂದು ನ್ಯಾಯಾಲಯಕ್ಕೆ ಮನವರಿಕೆಯಾದರೆ ಅವನ ಅಥವಾ ಅವಳ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ಒಂದು ವೇಳೆ ಬೌದ್ಧಿಕವಾಗಿ ಪರಿಪೂರ್ಣ ಎಂದು ಮನವರಿಕೆಯಾದರೆ ಹೇಳಿಕೆಯನ್ನು ನ್ಯಾಯಾಲಯ ಗಂಭೀರವಾಗಿ ಪರಿಗಣಿಸುತ್ತದೆ. ಆಗ ಅವನ ಅಥವಾ ಅವಳ ಹೇಳಿಕೆಯನ್ನು ಲಿಖಿತ ರೂಪದಲ್ಲಿ ದಾಖಲಿಸಿಕೊಳ್ಳಲಾಗುತ್ತದೆ.
ಭಾರತೀಯ ಸಾಕ್ಷ್ಯ ಅಧಿನಿಯಮದಲ್ಲಿ ಬಾಲ ಸಾಕ್ಷಿಗಳ ವಯಸ್ಸನ್ನು ನಿರ್ದಿಷ್ಟವಾಗಿ ತಿಳಿಸಿಲ್ಲ, ವಯಸ್ಸನ್ನು ತಿಳಿಸಲು ಯಾವ ಮಾನದಂಡವೂ ಇಲ್ಲ. ಕೆಲವು ವಿಶೇಷ ಸಂದರ್ಭಗಲ್ಲಿ 7-8 ವರ್ಷ ವಯಸ್ಸಿನ ಮಕ್ಕಳನ್ನೂ ಸಹ ಸಾಕ್ಷಿಗಳಾಗಿ ಪರಿಗಣಿಸಲಾಗಿದೆ. ಸಾಮಾನ್ಯವಾಗಿ 12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಬಾಲ ಸಾಕ್ಷಿಗಳಿಗೆ ಶಪಥ ನೀಡಲಾಗುವುದಿಲ್ಲ. ಮಕ್ಕಳು ಈಶ್ವರನ ಪ್ರತಿರೂಪವಾಗಿರುತ್ತಾರೆ. ಅವರ ಮನಸ್ಸು ಸರಳವಾಗಿರುತ್ತದೆ. ನಿಷ್ಕಲಶ್ಮವಾಗಿರುತ್ತದೆ. ಅವರ ನೆನಪಿನ ಶಕ್ತಿಯೂ ವಯಸ್ಕರಿಗಿಂತ ಅಧಿಕವಾಗಿರುತ್ತದೆ. ಸಣ್ಣ ಸಣ್ಣ ಘಟನೆಗಳನ್ನೂ ಸಹ ಅವರು ನೆನಪಿನಲ್ಲಿ ಇಟ್ಟುಕೊಳ್ಳುತ್ತಾರೆ. ಮಕ್ಕಳು ಸಾಕ್ಷ್ಯ ಹೇಳಲು & ಸಾಕ್ಷ್ಯಿಗಳಾಗಲು ಪೂರ್ಣ ಅರ್ಹರಾಗಿರುತ್ತಾರೆ ಎಂಬುದು ತಜ್ಞರ ಅಭಿಪ್ರಾಯ ಆಗಿರುತ್ತದೆ. ಆದರೆ ಕಾನೂನು ತಜ್ಞರು ಇದನ್ನು ಒಪ್ಪುವುದಿಲ್ಲ ಅವರಿಗೆ ಬಾಲಸಾಕ್ಷಿಗಳಲ್ಲಿ ನಂಬಿಕೆ ಇಲ್ಲ. ಅವರ ಪ್ರಕಾರ ನ್ಯಾಯ ವಿತರಣೆಯಲ್ಲಿ ಬಾಲ ಸಾಕ್ಷಿಗಳ ಮೇಲೆ ಅವಲಂಬಿಸುವುದು ಅಪಾಯಕರವಾಗುತ್ತದೆ. ಏಕೆಂದರೆ ಬಾಲ ಸಾಕ್ಷಿಗಳು ದಂಡ ಅಥವಾ ಶಿಕ್ಷೆಯ ಭಯದಿಂದಾಗಲಿ ಅಥವಾ ಆಸೆ ಆಮಿಷಗಳಿಗೆ ಒಳಗಾಗಿಯಾಗಲಿ ಪ್ರಭಾವಿತರಾಗಿ ಸತ್ಯವನ್ನು ತಿರುಚಿ ಹೇಳಬಹುದು.
ರಾಜ್ಯವಾರು ಬಾಲಕಾರ್ಮಿಕರ ಸಂಖ್ಯೆ(5-14 ವರ್ಷದ ಮಕ್ಕಳು 2001ರ ಜನಗಣತಿಯ ಪ್ರಕಾರ)
ಲಕ್ಷಗಳಲ್ಲಿ
ಉತ್ತರ ಪ್ರದೇಶ 19.28 ಆಂಧ್ರಪ್ರದೇಶ 13.63
ರಾಜಸ್ಥಾನ 12.63 ಬಿಹಾರ 11.18
ಮಧ್ಯ ಪ್ರದೇಶ 10.65 ಪಶ್ಚಿಮಬಂಗಾಳ 8.57
ಕರ್ನಾಟಕ 8.23 ಮಹಾರಾಷ್ಟ್ರ 7.64
ಗುಜರಾತ 4.86 ತಮಿಳುನಾಡು 4.19
ಜಾರ್ಖಂಡ್ 4.07 ಓರಿಸ್ಸಾ 3.78
ಛತ್ತೀಸಗಡ 3.65 ಆಸ್ಸಾಂ 3.51
ಹರ್ಯಾಣ 2.53 ಪಂಜಾಬ್ 1.77
ಜಮ್ಮು & ಕಾಶ್ಮೀರ 1.೭೬ ಹಿಮಾಚಲಪ್ರದೇಶ 1.08
ಉತ್ತರಾಂಚಲ 0.70 ಮೇಘಾಲಯ 0.54
ನಾಗಾಲ್ಯಾಂಡ್ 0.46 ದೆಹಲಿ 0.42
ಮಣಿಪುರ 0.29 ಮಿಝೋರಾಂ 0.26
ಕೇರಳ 0.26 ತ್ರಿಪುರ 0.22
ಈ ಹಿಂದೆ ಅನೇಕ ಪ್ರಕರಣಗಳಲ್ಲಿ ಬಾಲಸಾಕ್ಷಿಗಳ ಹೇಳಿಕೆಗಳ ಆಧಾರದ ಮೇಲೆ ನ್ಯಾಯ ನಿರ್ಣಯ ಮಾಡಲಾಗಿದೆ.ಬಾಲಸಾಕ್ಷಿಗಳನ್ನು ಪರಿಗಣಿಸಲಾಗದೆ ಕೆಲವು ಪ್ರಕರಣಗಳು ಈ ಕೆಳಗಿನಂತಿವೆ,
1. ಸಿದ್ಧೇಶ್ವರ ಗಂಗೂಲಿ ವಿರುದ್ಧ ಪಶ್ಚಿಮ ಬಂಗಾಳ ಸರ್ಕಾರ ವರ್ಷ 1958. ಬಾಲ ಸಾಕ್ಷಿಗಳ ಹೇಳಿಕೆ ನ್ಯಾಯಾಲಯಕ್ಕೆ ಪೂರ್ಣ ತೃಪ್ತಿಕರವಾಗಿ ಕಂಡು ಬಂದರೆ & ಬಾಲ ಸಾಕ್ಷಿಯ ಹೇಳಿಕೆಯಿಂದ ಆರೋಪಿಯ ಅಪರಾಧ ಸಾಬೀತಾದರೆ ಆರೋಪಿಗೆ ದಂಡ ಅಥವಾ ಶಿಕ್ಷೆ ವಿಧಿಸಲಾಗುತ್ತದೆ.
2. ಬಿಹಾರ ರಾಜ್ಯ ವಿರುದ್ದ ಕಪಿಲ್ ಸಿಂಗ್ ಎ.ಆಯ್.ಆರ್. ವರ್ಷ 1969. ಬಾಲ ಸಾಕ್ಷಿಗಳ ವಿಶ್ವಾಸಾರ್ಹತೆಯ ಪ್ರಶ್ನೆ ಇರುವವರೆಗೆ ನ್ಯಾಯಾಲಯವು ಅವರ ಸಾಕ್ಷ್ಯಗಳನ್ನು ಪರಿಗಣಿಸುವಾಗ ಬಹಳ ಎಚ್ಚರಿಕೆಯಿಂದ ಇರಬೇಕಾಗುತ್ತದೆ.
3. ಜೋಗಿ ಸಾಹು ಪ್ರಕರಣ ವರ್ಷ 1970 ಬಾಲ ಸಾಕ್ಷಿಗಳಲ್ಲಿ ವಿಶ್ವಾಸವಿಡುವುದು ಅಥವಾ ವಿಶ್ವಾಸ ಇಡದಿರುವುದು ಆಯಾ ಪ್ರಕರಣದ ಪರಿಸ್ಥಿತಿಯ ಮೇಲೆ ಅವಲಂಬಿಸಿರುತ್ತದೆ.
4. ಧರ್ಮಪಾಲ ಪ್ರಕರಣ ವರ್ಷ 1971 ಬಾಲ ಸಾಕ್ಷಿಗಳ ಹೇಳಿಕೆ ವಿಶ್ವಾಸಾರ್ಹವಾಗಿದ್ದರೆ ಹೇಳಿಕೆಯ ಬಗ್ಗೆ ಯಾವುದೇ ಅನುಮಾನ ಇಲ್ಲದಿದ್ದರೆ & ಹೇಳಿಕೆಯು ಸಹಜ & ಸರಳ ಎಂದು ಕಂಡು ಬಂದರೆ ಅದನ್ನು ಸ್ಪಷ್ಟೀಕರಿಸುವ ಸಾಧ್ಯತೆ ಇರುವುದಿಲ್ಲ.
5. ಬ್ರಹ್ಮದೇವ ಯಾದವ ವಿರುದ್ದ ಬಿಹಾರ ರಾಜ್ಯ ವರ್ಷ 1981. ಬಾಲ ಸಾಕ್ಷಿಗಳ ಹೇಳಿಕೆ ಅಪಾಯಕಾರಿ ಎಂದು ಕಂಡುಬಂದಲ್ಲಿ ಅವರನ್ನು ಅವಿಶ್ವಾಸಾರ್ಹ (ವಿಶ್ವಾಸಕ್ಕೆ ಅರ್ಹವಲ್ಲದ) ಬಾಲ ಸಾಕ್ಷಿ ಎಂದು ಪರಿಗಣಿಸಲಾಗುತ್ತದೆ.
6. ಯಾದರಾಮ್ ವಿರುದ್ದ ಉತ್ತರ ಪ್ರದೇಶ ಪ್ರಕರಣ ವರ್ಷ 1981. ಬಾಲ ಸಾಕ್ಷಿಗಳ ಹೇಳಿಕೆಗಳ ಆಧಾರದ ಮೇಲೆ ಮಾತ್ರವೇ ಆರೋಪಿಗಳ ಅಪರಾಧವನ್ನು ಸಾಬೀತುಪಡಿಸಿ ನ್ಯಾಯ ನಿರ್ಣಯ ಮಾಡಲಾಗುವುದಿಲ್ಲ ಆದರೂ ಪ್ರಜ್ಷೆಯ ನಿಯಮ ಪ್ರಕಾರ ಇಂತ ಪ್ರಕರಣಗಳಲ್ಲಿ ಸ್ಪಷ್ಟ ಸಾಕ್ಷ್ಯಗಳನ್ನು ನ್ಯಾಯಾಲಯ ಹುಡುಕಬೇಕಾಗುತ್ತದೆ.
7. ಶ್ಯಾಂನಾರಾಯಣ ಸಿಂಗ್ ವಿರುದ್ಧ ಬಿಹಾರ ರಾಜ್ಯ ವರ್ಷ 1993. ಬಾಲ್ಯ ಲಾಕ್ಷಿಗಳ ಹೇಳಿಕೆಯಲ್ಲಿ ಕಾಲ್ಪನಿಕತೆ ಅಥವಾ ವಿರೋಧಾಭ್ಯಾಸ ಕಂಡು ಬರದಿದ್ದರೆ ಹೇಳಿಕೆಯನ್ನು ನಂಬಬಹುದು.
8. ಕ್ಯಾಪ್ಟನ್ ರಾಧೋಶ್ಯಾಂ ವಿರುದ್ದ ಉತ್ತರ ಪ್ರದೇಶ ರಾಜ್ಯ ವರ್ಷ 1994. ಬಾಲಕರ / ಬಾಲಕಿಯರ ಮನಸ್ಸು ಬಿಳಿ ಹಾಳಿಯ ಹಾಗೆ ಶುದ್ಧವಾಗಿರುತ್ತದೆ. ಅವರ ನೆನಪಿನ ಶಕ್ತಿಯೂ ಚುರುಕಾಗಿರುತ್ತದೆ. ಬಾಲ ಸಾಕ್ಷಿಗಳ ಹೇಳಿಕೆಗಳನ್ನು ನ್ಯಾಯಲಯವು ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ.
9. ರಾಜಾರಾಂ ಯಾದವ & ಇತರರ ವಿರುದ್ಧ ಬಿಹಾರ ರಾಜ್ಯ ವರ್ಷ 1996. ಬಾಲ ಸಾಕ್ಷಿಗಳ ಹೇಳಿಕೆಗಳ ಮೇಲೆ ಅವಲಂಬಿಸುವ ಮುನ್ನ ಅವರ ಹೇಳಿಕೆ ನ್ಯಾಯಾಲಯಕ್ಕೆ ತೃಪ್ತಿಕರವಾಗಿ ಕಂಡು ಬರಬೇಕು, ಕಾಯಿದೆ ಕಾನೂನಿಗಿಂತ ವ್ಯವಹಾರಿಕ ಪಜ್ಞೆಯ ನಿಯಮ ಮುಖ್ಯವಾಗುತ್ತದೆ.
10. ಪಂಭಿ & ಇತರರ ವಿರುದ್ಧ ಉತ್ತರ ಪ್ರದೇಶ ವರ್ಷ 1998. ಬಾಲಕ ಅಥವಾ ಬಾಲಕಿಯರು ಸಾಕ್ಷಿಗಳಾಗಿ ಸಾಕ್ಷ್ಯ ಹೇಳಲು ಬಂದರೆ ನ್ಯಾಯಾಲಯ ಅವರ ಅರ್ಹತೆಯನ್ನು ಪರೀಕ್ಷಿಸಬೇಕಾಗುತ್ತದೆ. ಏಕೆಂದರೆ ಮಕ್ಕಳು ಬೇರೆಯವರ ಪ್ರಭಾವಕ್ಕೆ ಬೇಗ ಒಳಗಾಗುತ್ತಾರೆ.
11. ರಾಜೇಶ ಕುಮಾರ ವಿರುದ್ದ ಉತ್ತರ ಪ್ರದೇಶ ವರ್ಷ 2006. ಬಾಲ ಸಾಕ್ಷಿಗಳು ಕೇಳಲಾಗುವ ಪ್ರಶ್ನೆಗಳನ್ನು ತಿಳಿದುಕೊಳ್ಳಲು ಸಮರ್ಥರಾಗಿದ್ದರೆ ಅವರ ಹೇಳಿಕೆಯಿಂದ ಆರೋಪಿಯ ಅಪರಾಧ ಸಿದ್ಧವಾದರೆ ನ್ಯಾಯ ನಿರ್ಣಯಕ್ಕೆ ಯಾವುದೇ ಅಡ್ಡಿ ಆತಂಕ ಇರುವುದಿಲ್ಲ.
ಬಾಲ ಕಾರ್ಮಿಕ ನಿಷೇಧ ವಿಶ್ಲೇಷಣೆ
ಸುಖದೇವ ದಾಸ ಒಬ್ಬ ಬಾಲ ಕಾರ್ಮಿಕ , ಅವನು ಬಾಲ ಕಾರ್ಮಿಕ ನಿಷೇಧ ಪುನರ್ ಪರಿಶೀಲಿತ ಕಾಯಿದೆಜಾರಿಗೆ ಬರುವವರೆಗೆ (2006 ಅಕ್ಟೋಬರ್ 10ರವರೆಗೆ) ಕೋಲ್ಕತ್ತಾದ ಒಂದು ಟೀ ಸ್ಟಾಲ್‍ನಲ್ಲಿ ದುಡಿಯುತ್ತಿದ್ದ,ಹೋಟೆಲ್ ಮಾಲೀಕನು ಸುಖದೇವನಿಗೆ ಊಟ, ವಸತಿ ಅಲ್ಲದೆ ತಿಂಗಳಿಗೆ 800 ರೂ. ಕೊಡುತ್ತಿ ಈಗ ಸುಖದೇವನಪಾಲಿಗೆ ಕಾಯಿದೆ ಅಘಾತವಾಗಿದೆ. ಅವನ ತಂದೆ ಬದುಕಿಲ್ಲ, ತಾಯಿ ರೋಗಿ ಇಬ್ಬರು ಸಹೋದರರು ಇದ್ದಾರೆ,ಸುಖದೇವನ ಗಳಿಕೆಯೇ ಕುಟುಂಬಕ್ಕೆ ಆಧಾರವಾಗಿತ್ತು.
ಅನೇಕ ಬಾಲಕಾರ್ಮಿಕರು ಅವರ ಕುಟುಂಬಗಳಿಗೆ ಆಧಾರವಾಗಿದ್ದಾರೆ. ಪಶ್ಚಿಮ ಬಂಗಾಳ ರಾಜ್ಯದಲ್ಲಿ ಕಾರ್ಮಿಕಇಲಾಖೆಯು ಸಮಾಜ ಕಲ್ಯಾಣ ಇಲಾಖೆಯ ಸಹಯೋಗದೊಂದಿಗೆ ಬಾಲಕಾರ್ಮಿಕರ ಪುನರ್ವಸತಿಗೆ ಪ್ರಯತ್ನಿಸುತ್ತಿದೆ.ತಜ್ಞರ ಅಭಿಪ್ರಾಯದ ಪ್ರಕಾರ ಪುನರ್ವಸತಿಯಲ್ಲಿ ವಿಮೋಚಿತ ಬಾಲಕಾರ್ಮಿಕರಿಗೆ ತ್ವರಿತ ಶಿಕ್ಷಣ & ಉದ್ಯೋಗ ಕೌಶಲ್ಯತಿಳಿಸಿಕೊಡುವ ವ್ಯವಸ್ಥೆ ಇರಬೇಕು & ಉದ್ಯೋಗದ ಭರವಸೆಯೂ ಇರಬೇಕು.
2006 ಅಕ್ಟೋಬರ್ 10ರಿಂದ ಜಾರಿಗೆ ಬಂದಿರುವ ಬಾಲಕಾರ್ಮಿಕ ( ನಿಷೇಧ ) ತಿದ್ದುಪಡಿ ಕಾಯಿದೆ 14ವರ್ಷದೊಳಗಿನ ಮಕ್ಕಳು ದುಡಿಯುವುದನ್ನು ಮತ್ತು ದುಡಿಸಿಕೊಳ್ಳುವುದನ್ನು ನಿಷೇಧಿಸುತ್ತದೆ. ಮಕ್ಕಳನ್ನುದುಡಿಸಿಕೊಳ್ಳುವವರು 20000 ರೂ ದಂಡ ತೆರಬೇಕಾಗುತ್ತದೆ ಅಥವಾ ಒಂದು ವರ್ಷ ಜೈಲು ಶಿಕ್ಷೆಯನ್ನುಅನುಭವಿಸಬೇಕಾಗುತ್ತದೆ. ಸೂಕ್ತ ಪುನರ್ವಸತಿ ಕಾರ್ಯಕ್ರಮಗಳಿಲ್ಲದೆ ಕಾಯಿದೆಯನ್ನು ಜಾರಿಗೊಳಿಸಲಾಗಿದೆ. ನಿಷೇಧ ವನ್ನು ಸ್ವಾಗತಿಸಿರುವ ಕೇಂದ್ರ ಕಾರ್ಮಿಕ ಸಚಿವಾಲಯದ ಅಧಿಕಾರಿಗಳು & ಮಕ್ಕಳ ಹಕ್ಕುಗಳ ಕಾರ್ಯಕರ್ತರು ನಿಷೇಧ ಜಾರಿಗೆ ಎದುರಾಗುವ ಸವಾಲುಗಳನ್ನು ಸ್ವೀಕರಿಸಿದ್ದಾರೆ, ನಿಷೇಧ ದ ಪರಿಣಾಮಕಾರಿ ಜಾರಿ ಸುಲಭವಲ್ಲ.ಮಕ್ಕಳನ್ನು ದುಡಿಸಿಕೊಳ್ಳುವ ಮಾಲೀಕರ ಸರಕಾರೇತರ ಸಂಸ್ಥೆಗಳ ನಾಗರಿಕರ & ಮಾಧ್ಯಮಗಳ ಸಹಕಾರ ಬೆಂಬಲನಮಗೆ ಬೇಕು ಎಂದು ಅಧಿಕಾರಿಗಳು ಹೇಳುತ್ತಾರೆ.
“ಬಚ್ಚನ್ ಬಚಾವೋ ಆಂದೋಲನ” ಇದು ದೆಹಲಿ ಮೂಲದ ಒಂದು ಸರಕಾರೇತರ ಸಂಸ್ಥೆ. ಇದರ ಕಾರ್ಯಕರ್ತಕೈಲಾಸ್ ಸತ್ಯಾರ್ಥಿ ಹೇಳುವ ಪ್ರಕಾರ ನಿಷೇಧ ಜಾರಿ ಸರ್ಕಾರದಿಂದಷ್ಟೇ ಯಶಸ್ವಿಯಾಗುವುದಿಲ್ಲ. ಆದರೂ ಅವರುಕ್ರಮವನ್ನು ಸ್ವಾಗತಿಸಿದ್ದಾರೆ, ಅವರ ಸಂಘಟನೆಯ ನಿಷೇಧ ಕ್ಕಾಗಿ ಅನೇಕ ವರ್ಷಗಳಿಂದಲೂ ಒತ್ತಾಯಿಸಿತ್ತು.
ನಿಷೇಧ ಜಾರಿಯಾದ ಒಂದು ವರ್ಷದ ನಂತರ 9 ವರ್ಷದ ಒಬ್ಬ ಬಾಲಕ ದಕ್ಷಿಣ ದೆಹಲಿಯಲ್ಲಿನ ಮುನಿಕ್ರದಲ್ಲಿನಒಂದು ಢಾಬಾದಲ್ಲಿ ಕೆಲಸ ಮಾಡುತ್ತಿದ್ದ ಬಿಹಾರದ ಕತಿಹಾರದಲ್ಲಿ ಬಾಲಕನು ರಿಕ್ಷಾ ನಡೆಸುತ್ತಿದ್ದರು. ರಾಜಧಾನಿನಗರಗಳ ಸುತ್ತಲಿನ ಢಾಬಾಗಳಲ್ಲಿ & ಗ್ಯಾರೇಜುಗಳಲ್ಲಿ ಬಾಲಕಾರ್ಮಿಕರು ದುಡಿಯುವುದು ಈಗಲೂ ಕಂಡು ಬರುತ್ತದೆ.ಏಳು ವರ್ಷ ವಯಸ್ಸಿನ ಬಾಲಕಿಯರು ಬೇರೆಯವರ ಮನೆಗಳಲ್ಲಿ ಮನೆಗೆಲಸ ಮಾಡುತ್ತಾರೆ. ಕೆಲವು ಮಕ್ಕಳು ಭಿಕ್ಷೆಬೇಡುವುದಕ್ಕಿಂತ ಕೆಲಸ ಮಾಡುವುದೇ ಒಳ್ಳೆಯದು. ಒರಿಸ್ಸಾದ ಸುಂದರಗಡ ಜಿಲ್ಲೆಯ ಘಾಸಿಪುರದ ಊರ್ಮಿಳಾ ಎಂಬಬಾಲಕಿ ನೋಯಿಡಾದಲ್ಲಿ ನಿವೃತ್ತ ಸೇನಾಧಿಕಾರಿ ಮನೆಯಲ್ಲಿ ಕೆಲಸ ಮಾಡುತ್ತಾಳೆ.
ಮಕ್ಕಳನ್ನು ದುಡಿಸಿಕೊಳ್ಳುವ ಮಾಲಿಕರಿಗೆ ನಿಷೇಧದ ಪೂರ್ಣ ಅರಿವು ಇದೆ. ಆದರೂ ಅವರು ಕಾಯಿದೆಯಿಂದತಪಿಸ್ಪಿಕೊಳ್ಳಲು ಆಲೋಚಿಸುತ್ತಾರೆ. ಕಾನೂನಿನ ಕೈಗಳೇನೋ ಉತ್ಸವವಾಗಿವೆ, ಆದರೆ ನಾವೇನೂ ತಪ್ಪು ಮಾಡಿಲ್ಲನಮ್ಮಂಥವರಿಗೆ ಭಯವಿಲ್ಲ ಎಂದು ಗ್ಯಾರೇಜಿನ ಮಾಲೀಕರ ರಷೀದ್ ಹೇಳುತ್ತಾರೆ.
ಸರ್ಕಾರದ ಅಂದಾಜಿನ ಪ್ರಕಾರ (2001ರ ಜನಗಣತಿ) ಸುಮಾರು 2,56,000 ಮಕ್ಕಳು ದೇಶಾದ್ಯಂತದುಡಿಯುತ್ತಾರೆ. ಇವರಲ್ಲಿ 1,85,000 ಮಕ್ಕಳು ಮನೆಗೆಲಸದವರು & 70,000 ಮಕ್ಕಳು ಢಾಬಾ & ರೆಸ್ಟೋರೆಂಟ್‍ಗಳಲ್ಲಿಕೆಲಸ ಮಾಡುವವರು ಆಗಿದ್ದಾರೆ. ಇವರಿಗೆಲ್ಲಾ ನಿಷೇಧದಿಂದ ಪರಿಹಾರ ಸಿಗುವುದಿಲ್ಲ. ಬಹಳಷ್ಟು ರಾಜ್ಯಗಳಲ್ಲಿಬಾಲಕಾರ್ಮಿಕರ ಸ್ಥಿತಿ ಶೋಚನಿಯವಾಗಿಯೇ ಇದೆ. ಮಧ್ಯಪ್ರದೇಶದ ರಾಜಧಾನಿ ಭೂಪಾಲ್ ಸೇರಿದಂತೆ ಅನೇಕ ನಗರ& ಪಟ್ಟಣಗಳಲ್ಲಿ ಅಸಂಖ್ಯಾತ ಮಕ್ಕಳು ದುಡಿಯುವುದು ಕಂಡು ಬರುತ್ತದೆ.
‘ಚೈಲ್ಡ್ ಲೈನ್’ ಎಂಬ ಸರ್ಕಾರೇತರ ಸಂಸ್ಥೆಯ ಅರ್ಚನಾ ಸಹಾಯ್ ಅವರಿಗೆ ಬಾಲಕಾರ್ಮಿಕರ ನಿಷೇಧ ವಿಶ್ವಾಸಾರ್ಹವಾಗಿದೆ. “ಅದರಿಂದ ಬಾಲಕಾರ್ಮಿಕರಿಗೆ ಪ್ರಯೋಜನವಾಗುತ್ತದೆ. ಅನೇಕ ಪ್ರಕರಣಗಳಲ್ಲಿ ಮಕ್ಕಳನ್ನುದುಡಿಸಿಕೊಳ್ಳುವ ಮಾಲೀಕರ ವಿರುದ್ಧ ಕ್ರಮಕೈಗೊಳ್ಳಲು ಪೋಲೀಸರು ನಿರಾಕರಿಸಿದ್ದಾರೆ. ಈಗ ಬಾಲಕಾರ್ಮಿಕರಕಾಯಿದೆಯ ತಿದ್ದುಪಡಿಯಿಂದ ಕಾಯಿದೆ ಜಾರಿ ಪರಿಣಾಮಕಾರಿ ಆಗುವ ನಿರೀಕ್ಷೆ ಇದೆ” ಎಂದು ಅರ್ಚನಾ ಸಹಾಯ್ಹೇಳುತ್ತಾರೆ. ಪುನರ್ವಸತಿ ಇಲ್ಲದ ಬಾಲಕಾರ್ಮಿಕರಿಗೆ ಶಿಕ್ಷಣ ಉಪಯೋಗವಿಲಲ” ಎಂದು ರಾಷ್ಟ್ರೀಯ ಮಹಿಳಾ ಮಕ್ಕಳ& ಯುವಕರ ಅಭಿವೃದ್ಧಿ ಸಂಸ್ಥೆ (NIWCYD) ಯ ಪ್ರಶಾಂತ್ ಕುಮಾರ ದುಬೆ ಅವರು ಹೇಳುತ್ತಾರೆ, ಅವರಿಗೆಬಾಲಕಾರ್ಮಿಕರ ವಯಸ್ಸಿನ ಬಗ್ಗೆ ಗೊಂದಲ ಇದೆ. ಅದನ್ನು ಸ್ಪಷ್ಟಪಡಿಸಬೇಕು ಎಂದು ಹೇಳುತ್ತಾರೆ.