ಜನಸಂಖ್ಯೆ(population)

 

ಜನಸಂಖ್ಯೆ ಎಂದರೆ ಒಂದು ನಿರ್ದಿಷ್ಟ ಪ್ರದೇಶದಲ್ಲಿ ವಾಸಿಸುವ ಒಟ್ಟಾರೆ ಜನರ ಸಂಖ್ಯೆ.

2011 ರ ಜನಸಂಖ್ಯಾ ಗಣತಿಯ ಪ್ರಮುಖ ಅಂಶಗಳು


● ಭಾರತದ ಒಟ್ಟಾರೆ ಜನಸಂಖ್ಯೆ - 1,21,05,69,573
● ಭಾರತದ ಒಟ್ಟಾರೆ ಜನಸಂಖ್ಯೆಯಲ್ಲಿ ಪುರುಷ ಜನಸಂಖ್ಯೆ - 62,31,21,843
● ಭಾರತದ ಒಟ್ಟು ಜನಸಂಖ್ಯೆಯಲ್ಲಿ ಸ್ತ್ರೀ ಜನಸಂಖ್ಯೆ - 58,74,47,730
● ದೇಶದ ಒಟ್ಟು ಗ್ರಾಮೀಣ ಜನಸಂಖ್ಯೆ - 83,34,63,448 (68,8%)
● ದೇಶದ ಒಟ್ಟು ನಗರ ಜನಸಂಖ್ಯೆ - 37,71,06,125 (31.2%)
● ಭಾರತದ ದಶಕದ ಬೆಳವಣಿಗೆ(2001-11) ದರ - 18,19,59,458(17,7%)
● 2011ರ ಜನಸಂಖ್ಯೆಯ ಪ್ರಕಾರ ಭಾರತದಲ್ಲಿನ ಲಿಂಗಾನುಪಾತ ದರ - ಪ್ರತಿ 1,000 ಪುರುಷರಿಗೆ 943 ಮಹಿಳೆಯರು
● ಗ್ರಾಮೀಣ ಲಿಂಗಾನುಪಾತ ದರ - 1,000 ಪುರುಷರಿಗೆ 949 ಮಹಿಳೆಯರು
● ನಗರ ಲಿಂಗಾನುಪಾತ ದರ - 1,000 ಪುರುಷರಿಗೆ 929 ಮಹಿಳೆಯರು
● ಪುರುಷರ ಸಾಕ್ಷರತೆ ದರ - 43,46,83,779 (80,9%)
● ಮಹಿಳಾ ಸಾಕ್ಷರತೆ ದರ - 32,88,14,738 (64,6%)
● 2011ರ ಜನಸಂಖ್ಯೆಯ ಪ್ರಕಾರ ದೇಶದಲ್ಲಿ ಜನಸಾಂದ್ರತೆ - ಪ್ರತಿ ಚದರ ಕಿಲೋಮೀಟರಿಗೆ 382 ಜನರು.
● 2011ರ ಜನಸಂಖ್ಯೆಯ ಪ್ರಕಾರ ದೇಶದ ಒಟ್ಟು ಜನಸಂಖ್ಯೆಯಲ್ಲಿ 0-6 ವರ್ಷಗಳ ವಯೋಮಾನದ ಜನಸಂಖ್ಯೆ - 16.45 ಮಿಲಿಯನ್
● 2011ರ ಜನಸಂಖ್ಯೆಯ ಪ್ರಕಾರ ಎಸ್ಸಿ(s.c) ಜನಸಂಖ್ಯೆ - 20.14 ಮಿಲಿಯನ್ (16.6%)
● 2011ರ ಜನಸಂಖ್ಯೆಯ ಪ್ರಕಾರ ಎಸ್ಟಿ(s.T) ಜನಸಂಖ್ಯೆ - 10,43 ಮಿಲಿಯನ್ (8.6%)
● 2011ರ ಜನಸಂಖ್ಯೆಯ ಪ್ರಕಾರ ಅತಿ ಹೆಚ್ಚು ಫಲವತ್ತತೆ ದರವನ್ನು ಹೊಂದಿರುವ ರಾಜ್ಯ - ಬಿಹಾರ (3.7)
● ಭಾರತದ ಅತ್ಯಂತ ಹೆಚ್ಚು ಜನನಿಬಿಡ ರಾಜ್ಯ - ಉತ್ತರ ಪ್ರದೇಶ
● ಅತಿ ಕಡಿಮೆ ಜನಸಂಖ್ಯೆ ಹೊಂದಿರುವ ರಾಜ್ಯ - ಸಿಕ್ಕಿಂ
● ಅತಿ ಹೆಚ್ಚು ಸಾಕ್ಷರತೆ ದರ ಹೊಂದಿರುವ ರಾಜ್ಯ - ಕೇರಳ(93.91%)
● ಅತಿ ಕಡಿಮೆ ಸಾಕ್ಷರತೆ ದರ ಹೊಂದಿರುವ ರಾಜ್ಯ - ಬಿಹಾರ(63.82%)
● ಅತಿ ಹೆಚ್ಚು ಸಾಕ್ಷರತೆ ದರ ಹೊಂದಿರುವ ಕೇಂದ್ರಾಡಳಿತ ಪ್ರದೇಶ - ಲಕ್ಷದ್ವೀಪ
● ಅತಿ ಕಡಿಮೆ ಸಾಕ್ಷರತೆ ದರ ಹೊಂದಿರುವ ಕೇಂದ್ರಾಡಳಿತ ಪ್ರದೇಶ - ದಾದ್ರಾ ಮತ್ತು ನಗರ ಹವೇಲಿ
● ಅತಿ ಹೆಚ್ಚು ಜನಸಾಂದ್ರತೆ ಹೊಂದಿರುವ ರಾಜ್ಯ - ಬಿಹಾರ(ಪ್ರತಿ ಚದರ ಕಿಲೋಮೀಟರಿಗೆ 1,102 ಜನರು)
● ಅತಿ ಕಡಿಮೆ ಜನಸಾಂದ್ರತೆ ಹೊಂದಿರುವ ರಾಜ್ಯ - ಅರುಣಾಚಲ ಪ್ರದೇಶ
● ಅತಿ ಹೆಚ್ಚು ಜನಸಾಂದ್ರತೆ ಹೊಂದಿರುವ ಕೇಂದ್ರಾಡಳಿತ ಪ್ರದೇಶ - ದೆಹಲಿ
● ಅತಿ ಕಡಿಮೆ ಜನಸಾಂದ್ರತೆ ಹೊಂದಿರುವ ಕೇಂದ್ರಾಡಳಿತ ಪ್ರದೇಶ - ಅಂಡಮಾನ್
● ಅತಿ ಹೆಚ್ಚು ಲಿಂಗಾನುಪಾತ ದರ ಹೊಂದಿರುವ ರಾಜ್ಯ - ಕೇರಳ(ಪ್ರತಿ 1,000 ಪುರುಷರಿಗೆ 1084 ಮಹಿಳೆಯರು)
● ಅತಿ ಕಡಿಮೆ ಲಿಂಗಾನುಪಾತ ದರ ಹೊಂದಿರುವ ರಾಜ್ಯ - ಹರಿಯಾಣ(ಪ್ರತಿ 1,000 ಪುರುಷರಿಗೆ 879 ಮಹಿಳೆಯರು)
● ಅತಿ ಹೆಚ್ಚು ಲಿಂಗಾನುಪಾತ ದರ ಹೊಂದಿರುವ ಕೇಂದ್ರಾಡಳಿತ ಪ್ರದೇಶ - ಪುದುಚೇರಿ
● ಅತಿ ಕಡಿಮೆ ಲಿಂಗಾನುಪಾತ ದರ ಹೊಂದಿರುವ ಕೇಂದ್ರಾಡಳಿತ ಪ್ರದೇಶ - ದಮನ್ ಮತ್ತು ದಿಯು
● ಅತಿ ಹೆಚ್ಚು ಜನಸಂಖ್ಯೆಯುಳ್ಳ ಜಿಲ್ಲೆ - ಥಾಣೆ (ಮಹಾರಾಷ್ಟ್ರ)
● ದೇಶದ ಕನಿಷ್ಠ ಜನಸಂಖ್ಯೆಯುಳ್ಳ ಜಿಲ್ಲೆ - Dibangdhari (ಅರುಣಾಚಲ ಪ್ರದೇಶ)