ಮಾನವ ಅಭಿವೃದ್ಧಿ ವರದಿ(Human Development Report)

 

ಮಾನವ ಬೆಳವಣಿಗೆ ಸೂಚಕವನ್ನು (ಎಚ್‍ಡಿಐ) ಮಾನವ ಅಭಿವೃದ್ಧಿಯ ನಾಲ್ಕು ಶ್ರೇಣಿಗಳಲ್ಲಿ ದೇಶಗಳನ್ನು ವರ್ಗೀಕರಿಸಲು ಬಳಸಲಾಗುತ್ತದೆ. ಇದು ಜೀವಿತಾವಧಿ, ಶಿಕ್ಷಣ, ಮತ್ತು ತಲಾ ಆದಾಯ ಸೂಚಕಗಳ ಒಂದು ಸಂಯುಕ್ತ ಅಂಕಿ ಅಂಶ ಆಗಿದೆ. ಜೀವಿತಾವಧಿ, ಶಿಕ್ಷಣ ಮಟ್ಟ, ತಲಾವಾರು ಜಿಡಿಪಿ ಹೆಚ್ಚಾದಾಗ ಒಂದು ದೇಶದ ಎಚ್‍ಡಿಐ ಅಂಕ ಹೆಚ್ಚುತ್ತದೆ. ಎಚ್‍ಡಿಐ ಅನ್ನು ಪಾಕಿಸ್ತಾನದ ಅರ್ಥಶಾಸ್ತ್ರಜ್ಞ ಮಹ್ಬೂಬ್ ಉಲ್ ಹಕ್ ಅಭಿವೃದ್ಧಿಪಡಿಸಿದರು.

• ಪ್ರತಿ ವರ್ಷವೂ ವಿಶ್ವ ಸಂಸ್ಥೆಯ ಅಂಗ ಸಂಸ್ಥೆಯಾದ ಯುನೈಟೆಡ್ ನೇಷನ್ಸ್ ಡೆವಲಪ್ಮೆಂಟ್ ಪ್ರೋಗ್ರಾಮ್(UNDP) ಮಾನವ ಅಭಿವೃದ್ಧಿ ಸೂಚನಕವನ್ನು ಬಿಡುಗಡೆ ಮಾಡುತ್ತದೆ.
• 2017 ನೇ ಸಾಲಿನಲ್ಲಿ ಪ್ರಕಟಿಸಿದ ವರದಿಯ ಪ್ರಕಾರ ನಾರ್ವೆ ದೇಶವು ಮೊದಲ ಸ್ಥಾನದಲ್ಲಿದ್ದು, ಭಾರತವು 131 ಸ್ಥಾನದಲ್ಲಿದೆ.