ಡಿ.ಎನ್.ಎ

 

• ಡಿ.ಎನ್.ಎ (ಡೀಆಕ್ಸಿ ರೈಬೊ ನ್ಯೂಕ್ಲೀಯಿಕ್ ಆಸಿಡ್) ಎಲ್ಲಾ ಜೀವಿಗಳಲ್ಲೂ ಹಾಗೂ ಹಲವಾರು ವೈರಾಣುಗಳಲ್ಲಿ ಇರುವ ಪ್ರಧಾನ ಅನುವಂಶಿಕ ಜೈವಿಕ ಅಣುವಾಗಿದೆ.
• ಡಿಎನ್ಎ-ಆನುವಂಶೀಯತೆಯ ಆಧಾರವಾಗಿದ್ದು, ಪೀಳಿಗೆಯಿಂದ ಮುಂದಿನ ಪೀಳಿಗೆಗೆ ಲಕ್ಷಣಗಳನ್ನು ವರ್ಗಾವಣೆ ಮಾಡುತ್ತವೆ.
• ಇದು ಒಂದು ಆನುವಂಶೀಯ ವಸ್ತುವಾಗಿದ್ದು ಆನುವಂಶೀಯ ಮಾಹಿತಿಗಳನ್ನು ಪೀಳಿಗೆಯಿಂದ ಪೀಳಿಗೆಗೆ ವರ್ಗಾಯಿಸುತ್ತದೆ.
• ಡಿ.ಎನ್.ಎಯ ರೂಪವನ್ನು ಮೊದಲ ಬಾರಿ ಕಂಡುಹಿಡಿದಿದ ವಿಜ್ಞಾನಿಗಳು ಜೇಮ್ಸ್ ವ್ಯಾಟ್ಸನ್ ಮತ್ತು ಫ್ರಾನ್ಸಿಸ್ ಕ್ರಿಕ್.
• ಡಿ.ಎನ್.ಎ ಎಲ್ಲಾ ಜೀವಿಗಳ ಬೆಳವಣಿಗೆ ಹಾಗೂ ಕಾರ್ಯಕ್ಕೆ ತಕ್ಕ ಸೂಚನೆಯನ್ನು ನೀಡುತ್ತದೆ.
• ಡಿ ಎನ್ ಎಯ ಎರಡು ಏಳೆಗಳ ನಡುವೆ ಇರುವ ಅಕ್ಷದ ಸುತ್ತು ಸುತ್ತಲಾಗಿದೆ .
• ಜೀವಕೋಶಗಳಲ್ಲಿ ಇವು ಎರಡು ಎಳೆಗಳ ಅಣುಗಳಾಗಿ ಕಂಡು ಬರುತ್ತದೆ.
• ನ್ಯೂಕ್ಲಿಯೋಬೇಸ್ ಡಿ-ಓಕ್ಸಿ ರೈಬೊಸ್ ಶುಗರ್ ಒಂದಿಗೆ ಸೇರಿ ನ್ಯುಕ್ಲಿಯೋಸೈಡ್ ಆಗುತ್ತದೆ.ಈ ನ್ಯುಕ್ಲಿಯೋಸೈಡ್ ಫಾಸ್ಫೇಟ್ ಅಣುವಿನೊಂದಿಗೆ ಸೇರಿ ನ್ಯೂಕ್ಲಿಯೋಟೈಡ್ ಆಗುತ್ತದೆ.
• ಡಿಎನ್ಎ ಅಣುವಿನಲ್ಲಿ ಒಂದು ಜೋಡಿ ಪಾಲಿನ್ಯೂಕ್ಲಿಯೋಟೈಡ್ನ ಸರಪಳಿಗಳಿರುತ್ತವೆ. ಒಂದೊಂದು ನ್ಯೂಕ್ಲಿಯೋಟೈಡ್ ಘಟಕವೂ- (1) ಡಿ ಆಕ್ಸಿರೈಬೋಸ್ ಸಕ್ಕರೆ (2) ಫಾಸ್ಫೇಟ್ ಮತ್ತು (3) ನೈಟ್ರೋಜನ್ ಕ್ಷಾರಗಳು ಎಂಬ ಮೂರು ಸಂಯುಕ್ತಗಳನ್ನು ಹೊಂದಿದೆ.
• ಡಿ.ಎನ್.ಎ ಗಳಲ್ಲಿ ಅಡಿನೈನ್ (A) ಮತ್ತು ಗ್ವಾನಿನ್ (G) ಸೈಟೋಸಿನ್ (S) ಥೈಮೀನ್ (T) ಗಳೆಂಬ ಪ್ರತ್ಯಾಮ್ಲಗಳಿವೆ. ಅಡಿನೈನ್ ಥೈಮೀನ್ (A-T) ಜೊತೆಯಲ್ಲಿ ಮತ್ತು ಗ್ವಾನಿನ್ ಸೈಟೋಸಿನ್ (G-S). ಜೊತೆಯಲ್ಲಿ ಯಾವಾಗಲೂ ಜೋಡಣೆಯಲ್ಲಿರುತ್ತವೆ.

ಡಿ.ಎನ್.ಎ. ಯ ಪ್ರಾಮುಖ್ಯತೆ


1.ಡಿಎನ್ಎ, ಜೀವಕೋಶದ ಎಲ್ಲ ಉಪಾಪಚಯ ಚಟುವಟಿಕೆಗಳನ್ನು ನಿಯಂತ್ರಿಸಲು ಬೇಕಾದ ಸಾಂಕೇತೀಕ ಮಾಹಿತಿಯನ್ನು ಹೊಂದಿರುತ್ತದೆ.
2. ಡಿಎನ್ಎ, ಮುಂದಿನ ಸಂತಾನಗಳಿಗೆ ಒಂದೇ ರೀತಿಯ ಆನುವಂಶೀಯ ವಸ್ತುವನ್ನು ಸಮನಾಗಿ ಹಂಚಿ ಆನುವಂಶೀಯತೆÉಗೆ ಕಾರಣವಾಗುತ್ತದೆ.
3. ಡಿಎನ್ಎ, ಪ್ರೋಟೀನ್ ಸಂಶ್ಲೇಷಣೆಯಲ್ಲಿ ಪಾಲ್ಗೊಳ್ಳುತ್ತದೆ.
4. ಡಿಎನ್ಎ - ಉತ್ಪರಿವರ್ತನೆ (mutation)ಮತ್ತು ಪುನರ್ ಸಂಯೋಜನೆ (recombination)ಗೆ ಒಳಗಾಗಿ, ಸಂತಾನಗಳಲ್ಲಿ ಕೆಲವೊಮ್ಮೆ ಭಿನ್ನ ಲಕ್ಷಣಗಳನ್ನುಂಟು ಮಾಡುತ್ತದೆ.
5. ಜೈವಿಕತಂತ್ರಜ್ಞಾನದ ಬೆಳಣಿಗೆಗೆ ಮೂಲ ಘಟಕವಾಗಿದೆ.