ಸರ್ಕಾರದ ವೆಚ್ಚ

 

ವೆಚ್ಚದ ವರ್ಗಿಕರಣ


1.ಯೋಜನಾ ವೆಚ್ಚ:


ವಿವಿಧ ಆರ್ಥಿಕ ಮತ್ತು ಸಾಮಾಜಿಕ ಸೇವೆಗಳು, ರಾಷ್ಟ್ರ ನಿರ್ಮಾಣದ ಕಾರ್ಯಗಳು ಮುಂತಾದ ಅಭಿವೃದ್ಧಿ ಚಟುವಟಿಕೆಗಳ ಮೇಲೆ ಮಾಡುವ ವೆಚ್ಚಗಳನ್ನು ಯೋಜನಾ ವೆಚ್ಚ ಎಂದು ಕರೆಯಲಾಗುತ್ತದೆ.
i ಆರ್ಥಿಕ ಸೇವೆಗಳು:ಕೇಂದ್ರ ನಿರ್ವಹಿಸುವ ಆರ್ಥಿಕ ಸೇವೆಗಳೆಂದರೆ ಕೃಷಿ ಮತ್ತು ಸಂಬಂದಿ ಸೇವೆಗಳು,ಗ್ರಾಮೀಣಾಭಿವೃದ್ಧಿ,ಕೈಗಾರಿಕೆ,ಇಂಧನ,ಸಾರಿಗೆ ಮತ್ತು ಸಂಪರ್ಕ,ಇತ್ಯಾದಿ.
ii ಸಾಮಾಜಿಕ ಸೇವೆಗಳು:ಸಾಮಾಜಿಕ ಸೇವಾ ವೆಚ್ಚದಲ್ಲಿ ಮುಖ್ಯವಾಗಿ ಶಿಕ್ಷಣ ,ಕಲೆ ಮತ್ತು ಸಂಸ್ಕೃತಿ,ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಯೋಜನೆ,ಸಾಮಾಜಿಕ ಯೋಗಕ್ಷೇಮ,ನೈರ್ಮಲ್ಯ ಮತ್ತು ಗೃಹ ನಿರ್ಮಾಣ ಮುಂತಾದ ಬಾಬುಗಳಿವೆ.
iii ಸಾಮಾನ್ಯ ಸೇವೆಗಳು : ಇದರಲ್ಲಿ ಆಂತರಿಕ ಮತ್ತು ಭಾಹ್ಯ ಭದ್ರತಾ ಸಿಬ್ಬಂದಿಗಳ ಅಭಿವೃದ್ಧಿ ವೆಚ್ಚಗಳು ಸೇರಿಕೊಂಡಿವೆ.

2. ಯೋಜನೇತರ ವೆಚ್ಚ


ಅಭಿವೃದ್ಧಿ ಚಟುವಟಿಕೆಗಳನ್ನು ಹೊರತುಪಡಿಸಿ ಇತರ ಬಾಬುಗಳಾದ ಆಡಳಿತ,ರಕ್ಷಣೆ,ಬಡ್ಡಿ ಪಾವತಿ,ಸಹಾಯ ಧನ,ಅನುದಾನ ಇತ್ಯಾದಿಗಳ ಮೇಲೆ ಮಾಡುವ ವೆಚ್ಚಗಳನ್ನು ಯೋಜನೇತರ ವೆಚ್ಚಗಳು ಎನ್ನುತ್ತಾರೆ.
i ನಾಗರಿಕ ಆಡಳಿತ ಸೇವಾ ವೆಚ್ಚ :ನಾಗರಿಕ ಆಡಳಿತ ಸೇವಾ ವೆಚ್ಚವು ಸರ್ಕಾರ ತನ್ನ ದಿನ ನಿತ್ಯದ ಆಡಳಿತವನ್ನು ನಡೆಸಿಕೊಂಡು ಹೋಗಲು ಮಾಡುವ ವೆಚ್ಚಗಳಾಗಿವೆ.ಈ ವಿಭಾಗದಲ್ಲಿ ಮುಖ್ಯವಾಗಿ ಸಾಮಾಜಿಕ,ಆರ್ಥಿಕ ಮತ್ತು ಸಾಮಾನ್ಯ ಸೇವಾ ವೆಚ್ಚಗಳಿರುತ್ತವೆ.
ii ರಕ್ಷಣಾ ವೆಚ್ಚ :ಕೇಂದ್ರ ಸರ್ಕಾರ ಮಾಡುವ ವೆಚ್ಚಗಳಲ್ಲಿ ಅತ್ಯಂತ ಪ್ರಮುಖವಾದ ವೆಚ್ಚವೆಂದರೆ ರಕ್ಷಣಾ ವೆಚ್ಚ.2017 -18 ನೇ ಸಾಲಿನ ಕೇಂದ್ರ ಆಯವ್ಯದಲ್ಲಿ ರೂ 3,59,854 ಕೋಟಿಗಳನ್ನು ರಕ್ಷಣಾ ಕ್ಷೇತ್ರಕ್ಕೆ ಮೀಸಲಿಡಲಾಗಿದೆ.
iii ಬಡ್ಡಿ ಪಾವತಿಗಳು:ಸರ್ಕಾರ ತಾನು ಆಂತರಿಕವಾಗಿ ಮತ್ತು ಭಾಹ್ಯವಾಗಿ ಮಾಡುವ ಸಾಲಗಳ ಮೇಲೆ ಕೊಡಮಾಡುವ ಬಡ್ಡಿಯು ಒಟ್ಟು ಯೋಜನಾ ವೆಚ್ಚದ ಬಾಬಿನಲ್ಲೇ ಅತಿ ಹೆಚ್ಚು ಪ್ರಮಾಣದ್ದಾಗಿದ್ದು ಇದು ಕೇಂದ್ರ ಸರ್ಕಾರದ ಮುಂಗಡ ಪತ್ರದಲ್ಲಿನ ಒಟ್ಟು ವೆಚ್ಚದ ಶೇಕಡಾ 20 ಕ್ಕಿಂತಲೂ ಅಧಿಕ ಹಣವನ್ನು ಕಬಳಿಸುತ್ತಿದೆ.
iv ಸಹಾಯ ದನಗಳು : ಕೇಂದ್ರವು ಆಹಾರ,ರಸಗೊಬ್ಬರ,ರಫ್ತು ವೃದ್ಧಿ ಮುಂತಾದ ಬಾಬುಗಳಿಗೆ ಸಹಾಯಧನ ನೀಡುತ್ತಿದೆ.
v ಅನುದಾನಗಳು:ಕೇಂದ್ರ ಸರ್ಕಾರ ರಾಜ್ಯ ಸರ್ಕಾರ ಮತ್ತು ಕೇಂದ್ರಾಡಳಿತ ಪ್ರದೇಶಗೈಗೆ ಬೃಹತ್ ಪ್ರಮಾಣದ ಅನುದಾನ ನೀಡುತ್ತಿದೆ.
vi ಸಾಲಗಳು ಮತ್ತು ಮುಂಗಡಗಳು:ಭಾರತವು ಒಂದು ಗಣರಾಜ್ಯವಾಗಿರುವುದರಿಂದ ಅದು ತನ್ನ ರಾಜ್ಯಗಳಿಗೆ ಮತ್ತು ಕೇಂಡ್ರೆಡಳಿತ ಪ್ರದೇಶಗಳಿಗೆ ಸಾಲಗಳನ್ನು ಮತ್ತು ಮುಂಗಡಗಳನ್ನು ನೀಡಬೇಕಾಗುತ್ತದೆ.
vii ಇತರೆ ವೆಚ್ಚಗಳು:ಪ್ರವಾಹ,ಬರಗಾಲ,ಭೂ ಕಂಪ ಮತ್ತಿತರ ಪ್ರಕೃತಿ ವಿಕೋಪಗಳು ಸಂಭವಿಸಿದಾಗ ನೀಡಲಾಗುವ ಸಹಾಯ ಧನ ಮತ್ತು ನೆರವುಗಳು ,ಪುನರ್ವಸತಿ ಸೌಲಭ್ಯ ,ಇತ್ಯಾದಿ ಯೋಜನೇತರ ವೆಚ್ಚಗಳಾಗಿವೆ.