ಜ್ಞಾನೇಂದ್ರಿಯಗಳು (Sense Organs)

 

• ಜ್ಞಾನೇಂದ್ರಿಯಗಳು ಪರಿಸರವನ್ನು ಅರ್ಥೈಸಿಕೊಂಡು ಅದರ ತಕ್ಕಂತೆ ಹೊಂದಿಕೊಳ್ಳಲು ಸಹಾಯ ಮಾಡುವ ವಿಶೇಷ ಅಂಗಗಳಾಗಿವೆ. ದೇಹದಲ್ಲಿ ಕಣ್ಣು, ಕಿವಿ, ಮೂಗು, ನಾಲಿಗೆ ಮತ್ತು ಚರ್ಮ ಎಂಬ ಒಟ್ಟು ಐದು ಜ್ಞಾನೇಂದ್ರಿಯಗಳಿವೆ.

ಕಣ್ಣು


ಕಣ್ಣುಗಳು ದೃಷ್ಟಿಯ ಜ್ಞಾನೇಂದ್ರಿಯಗಳಾಗಿದ್ದು ವಸ್ತುವಿನ ಬಣ್ಣ, ಗಾತ್ರ ಮತ್ತು ದೂರದ ಅರಿವು, ಮಾಡಲು ಸಹಕಾರಿಯಾಗಿವೆ.

ಕಣ್ಣಿನ ಮುಖ್ಯ ಭಾಗಗಳು:


1. ಸ್ಕ್ಲೀರಾ:
• ಕಣ್ಣಿನ ಅತ್ಯಂತ ಹೊರಪದರವಾಗಿದ್ದು ಬಿಳಿ ಬಣ್ಣದಾಗಿದೆ. ಕಣ್ಣುಗುಡ್ಡೆಯ ಮುಂಭಾಗದ ತೆಳುವಾದ ಪೊರೆಯನ್ನು ಕಾರ್ನಿಯಾ ಎಂದು ಕರೆಯುಲಾಗುತ್ತದೆ.
2. ಕೊರಾಯಿಡ್:
• ಮಧ್ಯದಲ್ಲಿರುವ ಎರಡನೆಯ ಪದರವಾಗಿದ್ದು, ಹೆಚ್ಚು ರಕ್ತನಾಳ ಮತ್ತು ನರಗಳಿಂದ ಕೂಡಿದೆ ಹಾಗೂ ಕಣ್ಣಿನ ಮಧ್ಯಭಾಗ ಬಿಟ್ಟು ಉಳಿದ ಭಾಗಗಳನ್ನು ಆವರಿಸುತ್ತದೆ.
• ಮಧ್ಯಭಾಗದ ರಚನೆಯನ್ನು ಕಣ್ಣುಪಾಪೆ (ಠಿuಠಿiಟ) ಎಂದು ಕರೆಯಲಾಗುತ್ತದೆ. ಇದರ ಮೂಲಕವೇ ಬೆಳಕು, ಕಣ್ಣಿನ ಗುಡ್ಡೆಯೊಳಕ್ಕೆ ಹಾದುಹೋಗುತ್ತದೆ.
• ಕಣ್ಣು ಗುಡ್ಡೆಯ ಮುಂಭಾಗದಲ್ಲಿ, ಸ್ನಾಯುವಿನ ಒಂದು ಪದರವನ್ನು ಕೊರಾಯಿಡ್ ರಚಿಸಿದೆ. ಇದನ್ನು ವರ್ಣಪಟಲ ಎಂದು ಕರೆಯಲಾಗುತ್ತದೆ. ಕಣ್ಣಿನ ವಿವಿಧ ಬಣ್ಣಗಳಿಗೆ ವರ್ಣಪಟಲದಲ್ಲಿರುವ ಬಣ್ಣದ ವಸ್ತುಗಳು ಕಾರಣವಾಗುತ್ತವೆ.
3. ಅಕ್ಷಿಪಟಲ:
• ಇದರಲ್ಲಿ ರಾಡ್ ಮತ್ತು ಕೋನ್ಗಳಿವೆ. ರಾಡ್ ಕೋಶಗಳು ಮಂದವಾದ ಬೆಳಕನ್ನು ಗ್ರಹಿಸಬಲ್ಲವು. ಕೋನ್Àಗಳು, ಪ್ರಕಾಶಮಾನವಾದ ಬೆಳಕನ್ನು ಗ್ರಹಿಸಬಲ್ಲವು ಮತ್ತು ಬಣ್ಣಗಳನ್ನು ಗುರುತಿಸಬಲ್ಲವು.
• ಕಣ್ಣೀರನ್ನು ಅಶ್ರುಗ್ರಂಥಿ ಸ್ರವಿಸುತ್ತವೆ.

ಕಿವಿ


• ಕಿವಿ ಒಂದು ಶ್ರವಣಾಂಗವಾಗಿದ್ದು, ಶಬ್ದವನ್ನು ಗ್ರಹಿಸುವುದರ ಜೊತೆಗೆ ದೇಹದ ಸಮತೋಲನವನ್ನು ಕಾಪಾಡುತ್ತವೆ.
• ಕಿವಿಯ ಹೊರಕಿವಿ ಮಧ್ಯಕಿವಿ ಮತ್ತು ಒಳಕಿವಿ ಎಂಬ ಮೂರು ಮುಖ್ಯ ಭಾಗಗಳನ್ನು ಹೊಂದಿದೆ.
• ಹೊರಕಿವಿಯಲ್ಲಿ ಕಿವಿಯ ಹಾಲೆ ಮತ್ತು ಕರ್ಣನಾಳಗಳಿವೆ.
• ಮಧ್ಯಕಿವಿಯು ಒಂದು ಚಿಕ್ಕ ಪ್ರದೇಶವಾಗಿದ್ದು ಕಿವಿಯ ತಮಟೆ ಮತ್ತು ಮೂರು ಚಿಕ್ಕ ಮೂಳೆಗಳಿಂದಾದ ಒಂದು ಸರಪಳಿಯನ್ನು ಹೊಂದಿದೆ.
• ಒಳಕಿವಿಯು ಒಂದು ಸೂಕ್ಷ್ಮವಾದ ಅಂಗವಾಗಿದ್ದು ಒಳಗೆ ಎಂಡೋಲಿಂಫ್ ಎಂಬ ದ್ರವವನ್ನು ಹೊಂದಿದ್ದು ಪೆರಿಲಿಂಫ್ ಎಂಬ ಇನ್ನೊಂದು ದ್ರವದಿಂದ ಆವೃತವಾಗಿದೆ. ಒಳಕಿವಿಯು ಮಾನವನ ದೇಹದ ಸಮತೋಲನೆಗೆ ಸಂಬಂಧಿಸಿದೆ.

ಮೂಗು


• ಮೂಗು ವಾಸನೆಯನ್ನು ಗ್ರಹಿಸುವ ಜ್ಞಾನೇಂದ್ರಿವಾಗಿದ್ದು, ಉಸಿರಾಡಲೂ ಸಹಾಯಕವಾಗಿರುವ ಅಂಗವಾಗಿದೆ.
• ಮೂಗಿನ ಒಳ ಗೋಡೆಯಲ್ಲಿ ರೋಮಗಳ ಪದರ ಮತ್ತು ಶ್ಲೇಷ್ಮ ಗ್ರಂಥಿಗಳಿವೆ.ರೋಮಗಳ ಪದರವು ಗಾಳಿಯನ್ನು ಶೋಧಿಸಿ ಶುದ್ಧ ಗಾಳಿಯನ್ನು ಮಾತ್ರ ಶ್ವಾಸಕಾಂಗದ ಒಳಗಡೆಗೆ ಕಳುಹಿಸುತ್ತದೆ.

ನಾಲಿಗೆ


• ನಾಲಿಗೆಯು ರುಚಿಯನ್ನು ಗ್ರಹಿಸುವ ಜ್ಞಾನೇಂದ್ರಿವಾಗಿದ್ದು, ರುಚಿಯ ಗ್ರಾಹಕಗಳು ಅಂದರೆ ರಸಾಂಕುರಗಳನ್ನು ಹೊಂದಿದೆ.
• ನಾಲಿಗೆಯ ಮುಂಭಾಗದಲ್ಲಿ ಸಿಹಿಯನ್ನು ಗ್ರಹಿಸುವ ರಸಾಂಕುರಗಳು ಇವೆ.
• ನಾಲಿಗೆಯ ಮುಂಭಾಗದ ಅಂಚಿನಲೂ ಉಪ್ಪನ್ನು ಗ್ರಹಿಸುವ ರಸಾಂಕುರಗಳು ಇವೆ.
• ನಾಲಿಗೆಯ ಪಾಶ್ರ್ಚಭಾಗದಲ್ಲಿ ಹುಳಿರುಚಿಯನ್ನು ಗ್ರಹಿಸುವ ರಸಾಂಕುರಗಳು ಇವೆ.
• ನಾಲಿಗೆಯ ಹಿಂಭಾಗದಲ್ಲಿ ಕಹಿರುಚಿಯನ್ನು ಗ್ರಹಿಸುವ ರಸಾಂಕುರಗಳು ಇವೆ.

ಚರ್ಮ


• ಚರ್ಮವು ಸ್ಪರ್ಶದ ಜ್ಞಾನೇಂದ್ರಿಯವಾಗಿದ್ದು, ನರತುದಿಗಳಿಂದ ಕೂಡಿದ ಸ್ಪರ್ಶಗ್ರಾಹಕಗಳು ಚರ್ಮದ ಮೇಲೆಲ್ಲಾ ಹರಡಿವೆ. ಸ್ಪರ್ಶ, ಒತ್ತಡ, ನೋವು, ಕಾವು, ತಂಪು- ಇವುಗಳ ಜ್ಞಾನವನ್ನು ಚರ್ಮ ಅರಿಯುತ್ತದೆ.
• ಮಾನವ ಚರ್ಮದ ಕಾರ್ಯಗಳು :
• ಶರೀರದ ಒಳ ಭಾಗದಲ್ಲಿರುವ ಅಂಗಾಂಶಗಳನ್ನು ಯಾಂತ್ರಿಕ ಆಘಾತಗಳಿಂದ ಸೂರ್ಯನ ನೇರಳಾತೀತ ಕಿರಣಗಳಿಂದ ಮತ್ತು ಸೂಕ್ಶ್ಮಾಣು ಜೀವಿಗಳ ಸೋಕಿನಿಂದ ರಕ್ಷಿಸುತ್ತವೆ.
• ಶಾಖ,ಸ್ಪರ್ಶ,ನೋವು ಮುಂತಾದ ಪ್ರಚೋದನೆಗಳನ್ನು ಗ್ರಹಿಸುತ್ತದೆ.
• ಬೆವರನ್ನು ಹೊರ ಹಾಕುವ ಮೂಲಕ ದೇಹದ ಉಷ್ಣಾoಶವನ್ನು ಒಂದೇ ಸಮನಾಗಿರುವಂತೆ ರಕ್ಷಿಸುತ್ತದೆ.