ಸಾರ್ವಜನಿಕ ಸಾಲ(Public Debt)

 

ಸರ್ಕಾರ ಸಾರ್ವಜನಿಕ ಮೂಲಗಳಿಂದ ಎತ್ತುವ ಸಾಲವನ್ನು ಸಾರ್ವಜನಿಕ ಸಾಲ ಎನ್ನಲಾಗುತ್ತದೆ.

ಸಾರ್ವಜನಿಕ ಸಾಲದ ಪ್ರಾಮುಖ್ಯತೆ


• ಆಂತರಿಕ ಸಾಲ ಮತ್ತು ಬಾಹ್ಯಸಾಲ.
• ಉತ್ಪಾದಕ ಸಾಲ ಮತ್ತು ಅನುತ್ಪಾದಕ ಸಾಲ.
• ಸ್ವಯಂ ಪ್ರೇರಿತ ಸಾಲ ಮತ್ತು ಕಡ್ಡಾಯ ಸಾಲ.
• ಅಲ್ಪಾವಧಿ ಸಾಲ ಮತ್ತು ದೀರ್ಘಾವಧಿ ಸಾಲ.
• ಮರುಪಾವತಿ ಸಾಲ ಮತ್ತು ಮರುಪಾವತಿ ಇಲ್ಲದ ಸಾಲ.
• ನಿಧಿಯುಕ್ತ ಸಾಲ ಮತ್ತು ನಿಧಿರಹಿತ ಸಾಲ.
• ಒಟ್ಟು ಸಾಲ ಮತ್ತು ನಿವ್ವಳ ಸಾಲ.
• ವ್ಯವಹರಿಸಲಾಗುವ ಮತ್ತು ವ್ಯವಹರಿಸಲಾಗದ ಸಾಲಗಳು.

ಮುಂಗಡ ಪತ್ರ


• ಕೇಂದ್ರ ಸರ್ಕಾರದ ಮುಂಗಡ ಪತ್ರವನ್ನು ಪ್ರತಿವರ್ಷ ಕೇಂದ್ರ ಹಣಕಾಸು ಮಂತ್ರಿ ತಯಾರಿಸಿ, ಸಂಸತ್ತಿನಲ್ಲಿ ಮಂಡಿಸುತ್ತಾರೆ. ಮುಂಗಡ ಪತ್ರದ ತಯಾರಿಕೆಯಲ್ಲಿ ಹಣಕಾಸು ಸಚಿವರು ಹಣಕಾಸು ಸಚಿವಾಲಯ ಮತ್ತು ಇತರೆ ಸಂಬಂಧ ಪಟ್ಟ ಎಲ್ಲ ಇಲಾಖೆಗಳು ಪ್ರಸ್ತುತ ವರ್ಷದ ವಿವರವಾದ ಲೆಕ್ಕಪತ್ರಗಳು ಮತ್ತು ಮುಂಬರುವ ವರ್ಷದಲ್ಲಿ ಮಾಡಲಾಗುವ ಖರ್ಚುಗಳ ವಿವರವನ್ನು ಹಣಕಾಸು ಸಚಿವಾಲಯಕ್ಕೆ ಸಲ್ಲಿಸುತ್ತಾರೆ. ಮುಂಗಡ ಪತ್ರವನ್ನು ಎರಡು ಭಾಗವಾಗಿ ವಿಂಗಡಿಸಲಾಗುತ್ತದೆ. ಕಂದಾಯ ಮುಂಗಡಪತ್ರ ಮತ್ತು ಬಂಡವಾಳ ಮುಂಗಡಪತ್ರ.
• ಕಂದಾಯ ಅಥವಾ ಆದಾಯ ಮುಂಗಡಪತ್ರವು ಸಾರ್ವಜನಿಕ ಉದ್ಯಮಗಳು, ತೆರಿಗೆ ಮತ್ತು ತೆರಿಗೆಯೇತರ ಮೂಲಗಳಿಂದ ಬರುವ ಆದಾಯ ಮತ್ತು ಈ ಆದಾಯದಿಂದ ಮಾಡಲಾಗುವ ವೆಚ್ಚವನ್ನು ತೋರ್ಪಡಿಸುತ್ತದೆ.
• ಬಂಡವಾಳ ಮುಂಗಡಪತ್ರವು ಬಂಡವಾಳದ ಆದಾಯ ಮತ್ತು ಬಂಡವಾಳದ ವೆಚ್ಚಗಳನ್ನು ಒಳಗೊಂಡಿರುತ್ತದೆ.
• ಮುಂಗಡ ಪತ್ರವನ್ನು ವಾರ್ಷಿಕ ಹಣಕಾಸು ಹಾಶಿಕೆ ಅಥವಾ ವಾರ್ಷಿಕ ಹಣಕಾಸು ಪ್ರಣಾಳಿಕೆ ಎಂದು ಕರೆಯಲಾಗುತ್ತದೆ. ಇದು ಪ್ರಮುಖವಾದ ಹಣಕಾಸು ದಾಖಲೆ ಸಂವಿಧಾನದ 112ನೇ ಕಾಲಂ ಅನ್ವಯ ಸರ್ಕಾರ ಪ್ರತಿ ವರ್ಷ ಹಣಕಾಸು ಸ್ವೀಕೃತಿ ಹಾಗೂ ಖರ್ಚು ವೆಚ್ಚಗಳ ಅಂದಾಜನ್ನು ಸಂಸತ್ತಿನಲ್ಲಿ ಮಂಡಿಸಬೇಕಾಗುತ್ತದೆ.

ಸಾರ್ವಜನಿಕ ಸಾಲದ ವರ್ಗೀಕರಣ


• ಸಂಚಿತ ನಿಧಿ : ಸರ್ಕಾರದ ಎಲ್ಲಾ ಆದಾಯ, ಸಾಲ ಸ್ವೀಕೃತಿ, ವಸೂಲಾತಿ ಈ ನಿಧಿಯಡಿ ಬರುತ್ತವೆ. ಸರ್ಕಾರದ ಎಲ್ಲ ಖರ್ಚುಗಳನ್ನು ಈ ವೆಚ್ಚದಡಿ ನಿರ್ವಹಿಸಲಾಗುತ್ತದೆ. ಸಂಸತ್ತಿನ ಅನುಮತಿಯಿಲ್ಲದೆ ಸಂಚಿತ ನಿಧಿಯಿಂದ ಹಣ ತೆಗೆಯಲು ಸಾಧ್ಯವಿಲ್ಲ.
• ಸಾಂದರ್ಭಿಕ ನಿಧಿ : ತುರ್ತು ಹಾಗೂ ಅನಿರೀಕ್ಷಿತ ಸಂದರ್ಭಗಳಲ್ಲಿ ಅಥವಾ ನೈಸರ್ಗಿಕ ವಿಪತ್ತುಗಳ ಸಂದರ್ಭದಲ್ಲಿ ಅಗತ್ಯವಾಗಿ ಬೇಕಾಗುವ ಹಣಕಾಸಿಗೆ ಸಂಬಂಧಿಸಿದಂತೆ ವೆಚ್ಚವನ್ನು ನಿಭಾಯಿಸಲುಲ ಸಾಂದರ್ಭೀಕ ನಿಧಿಯನ್ನು ಸ್ಥಾಪಿಸಲಾಗಿರುತ್ತದೆ.
• ಸಾರ್ವಜನಿಕ ಖಾತೆ : ಸಂಚಿತ ನಿಧಿಗೆ ಸಂಬಂದಿಸಿದ ಸರ್ಕಾರದ ಸಾಮಾನ್ಯ ಸ್ವೀಕೃತಿ ಮತ್ತು ವೆಚ್ಗಚಗಳಲ್ಲದೆ, ಸರ್ಕಾರದ ಬ್ಯಾಂಕ್ರ ತರಹ ನಿರ್ವಹಿಸುವ ವ್ಯವಹಾರ. ಉದಾ : ಭವಿಷ್ಯ ನಿದಿ, ಸಣ್ಣ ಉಳಿತಾಯ ಸಂಗ್ರಹಣೆ ಹಾಗೂ ಇತರೆ ಠೇವಣಿಗಳ ವಹಿವಾಟನ್ನು ಸರ್ಕಾರವು ಸಾರ್ವಜನಿಕ ಖಾತೆಯಲ್ಲಿ ಠೇವಣಿ ಇಡುತ್ತದೆ.

• ರೆವಿನ್ಯೂ ಬಜೆಟ್ : ಕಂದಾಯ ವೆಚ್ಚವೆಂದರೆ ಸರ್ಕಾರದ ನಿರ್ವಹಣೆ ವಿವಿಧ ಸೇವೆ ಪೂರೈಕೆಗೆ ಮಾಡುವ ವೆಚ್ಚವಾಗಿದೆ. ಸಾಲದ ಮೇಲಿನ ಬಡ್ಡಿ ಸಹಾಯ ಧನ ಕೂಡ ಇದರಲ್ಲಿ ಸೇರುತ್ತದೆ.
• ಬಂಡವಾಳ ಬಜೆಟ್ : ಇದು ಸ್ವೀಕೃತಿ ಮತ್ತು ಪಾವತಿ ಎರಡನ್ನೂ ಒಳಗೊಂಡಿರುತ್ತದೆ. ಸಾರ್ವಜನಿಕ ಖಾತೆಯ ವಹಿವಾಟುಗಳು ಬಂಡವಾಳ ಬಜೆಟ್ನಲ್ಲಿ ಬರುತ್ತವೆ.
• ಮುಂಗಡ ಪತ್ರದ ಕೊರತೆ : ಬಂಡವಾಳ ಸ್ವೀಕೃತಿ ಒಳಗೊಂಡ ಕಂದಾಯ ಸ್ವೀಕೃತಿ ಮತ್ತು ಸಾಲ ಮರುಪಾವತಿ, ಒಟ್ಟು ಪಾವತಿ ನಡುವಿನ ಅಂತರವನ್ನೇ ಮುಂಗಡ ಪತ್ರ ಕೊರತೆ ಎನ್ನುತ್ತಾರೆ.
• ಪ್ರಾಥಮಿಕ ಕೊರತೆ : ಆರ್ಥಿಕ ಕೊರತೆ ಹಾಗೂ ಬಡ್ಡಿ ಪಾವತಿ ನಡುವಿನ ಅಂತರವನ್ನು ಪ್ರಾಥಮಿಕ ಕೊರತೆ ಎನ್ನಲಾಗುತ್ತದೆ.