ಭಾರತದ ಪ್ರಮುಖ ಶೇರು ವಿನಿಮಯ ಕೇಂದ್ರಗಳು (The major stock exchange Centers in India)

 

ಮುಂಬಯಿ ಶೇರು ವಿನಿಮಯ ಕೇಂದ್ರ


✧ ಇದು ಏಶಿಯಾದ ಮೊಟ್ಟ ಮೊದಲ ಶೇರು ವಿನಿಮಯ ಕೇಂದ್ರ ( ಎನಿಸಿದೆ, ಹಾಗೂ 1956ರ ಭದ್ರತಾ ಗುತ್ತಿಗೆ ನಿಯಮಾವಳಿ ಕಾಯ್ದೆಯಡಿ ಖಾಯಂ ಮಾನ್ಯತೆಗೆ ಪಾತ್ರವಾದ ದೇಶದ ಮೊದಲ ಶೇರು ವಿನಿಮಯ ಕೇಂದ್ರವಾಗಿದೆ

✧ ಇದರ ಸ್ಥಾಪನೆ - 1875 ರಲ್ಲಿ

✧ ಈ ಕೇಂದ್ರ ಕಳೆದ 137 ವರ್ಷಗಳಲ್ಲಿ ಅತಿ ಆಸಕ್ತಿದಾಯಕ ಆದ್ಯತೆಯನ್ನುಗಳಿಸಿದೆ ಇದು ಭಾರತೀಯ ಕಾರ್ಪೊರೇಟ್ ವಲಯಕ್ಕೆ ಬಂಡವಾಳ ಎತ್ತಲು ವೇದಿಕೆಯಾಗಿ ಅವುಗಳ ಬೆಳವಣಿಗೆಗೆ ಅವಕಾಶ ಕಲ್ಪಿಸಿದೆ

✧ ಅತಿ ಹೆಚ್ಚು (4900ಕ್ಕೂ ಹೆಚ್ಚು) ಲಿಸ್ಟೆಡ್ ಕಂಪನಿಗಳನ್ನು ಹೊಂದಿದ ವಿಶ್ವದ ಅಗ್ರ ಮಾನ್ಯ ವಿನಿಮಯ ಕೇಂದ್ರ ಇದಾಗಿದ್ದು ವಿದ್ಯುನ್ಮಾನ ವಹಿವಾಟು ವ್ಯವಸ್ಥೆ ಮೂಲಕ ಕಾರ್ಯ ನಿರ್ವಹಿಸುವ ವಿಶ್ವದ ಐದನೇ ಸಕ್ರಿಯ ವಿನಿಮಯ ಕೇಂದ್ರವೆನಿಸಿದೆ

✧ ಭಾರತದಲ್ಲಿ ಸೆಕ್ಯುರಿಟೀಸ್ ಶೇರುಗಳ ವ್ಯಾಪಾರ ಆರಂಭಿಸಿದ ಮುಂಬಯಿ ಶೇರು ವಿನಿಮಯ ನಿಯಮಿತವು 1995ರಲ್ಲಿ ಬಿಎಸ್ಇ ಆನ್ ಲೈನ್ ವಹಿವಾಟು ವ್ಯವಸ್ಥೆ ಮೂಲಕ ಸಂಪೂರ್ಣವಾಗಿ ಸ್ವಯಂ ಚಾಲಿತ ವ್ಯಾಪಾರ ನಿರ್ವಹಣೆಗೆ (ಬಿಓಎಲï ಟಿ)ಮುಂದಾಯಿತು

✧ಈ ವ್ಯವಸ್ಥೆಯನ್ನು 1997ರಲ್ಲಿ ದೇಶ ವ್ಯಾಪ್ತಿ ವಿಸ್ತರಿಸಲಾಯಿತು

✧ಐಎಸ್ಓ 9001; 2000 ಪ್ರಮಾಣ ಪತ್ರವನ್ನು ಪಡೆದ ವಿಶ್ವದ ಎರಡನೇ ವಿನಿಮಯ ಕೇಂದ್ರ ಮುಂಬಯಿ ಶೇರು ವಿನಿಮಯ ಕೇಂದ್ರವಾಗಿದೆ

✧ ಆನ್ ಲೈನ್ ವಹಿವಾಟಿಗಾಗಿ ಸೆಕ್ಯುರಿಟಿ ನಿರ್ವಹಣಾ ವ್ಯವಸ್ಥೆಯ ಗುಣಮಟ್ಟ ಬಿಎಸ್ 7799-2-2002 ಪ್ರಮಾಣ ಪತ್ರವನ್ನು ಪಡೆದ ಜಗತ್ತಿನ ಎರಡನೆ ವಿನಿಮಯ ಕೇಂದ್ರವಾಗಿದೆ ಇದು ಸದ್ಯ ಐಎಸ್ಓ 27001; 2005 ಪ್ರಮಾಣ ಪತ್ರವನ್ನು ಹೊಂದಿದೆ

ರಾಷ್ಟ್ರೀಯ ಶೇರು ವಿನಿಮಯ ಕೇಂದ್ರ


✧ ಹೊಸ ಶೇರು ವಿನಿಮಯ ಕೇಂದ್ರಗಳ ಸ್ಥಾಪನೆ ಕುರಿತಾದ ಉನ್ನತಾಧಿಕಾರದ ಅಧ್ಯಯನ ಗುಂಪಿನ ವರದಿ ಆಧಾರದ ಮೇಲೆ ಭಾರತಕ್ಕೆ ರಾಷ್ಟ್ರೀಯ ಶೇರು ವಿನಿಮಯ ನಿಯಮಿತ ಅಸ್ತಿತ ಬಂದಿದೆ

✧ ದೇಶದೆಲ್ಲೆಡೆ ಹೂಡಿಕೆದಾರರಿಗೆ ಲಭ್ಯವಿರುವಂತೆ ಹಣಕಾಸು ಸಂಸ್ಥೆಗಳಿಂದ ರಾಷ್ಟ್ರೀಯ ಶೇರು ವಿನಿಮಯ ನಿಯಮಿತವನ್ನು ಅಭಿವೃದ್ಧಿ ಪಡಿಸುವಂತೆ ಬಂದ ಶಿಫಾರಸಿನನ್ವಯ ಈ ವ್ಯವಸ್ಥೆ ರೂಪುಗೊಂಡಿದೆ

✧ ಭಾರತದ ರಾಷ್ಟ್ರೀಯ ಶೇರು ವಿನಿಮಯ ನಿಯಮಿತವು 1992 ನವೆಂಬರ್ನಲ್ಲಿ ತೆರಿಗೆ ಸಲ್ಲಿಸುವ ಕಂಪನಿಯಾಗಿ ಹೊರಹೊಮ್ಮಿತು