ಭಾರತದ ಆರ್ಥಿಕ ಸುಧಾರಣೆಗಳು(Economic reforms of India)

 

ಸ್ವತಂತ್ರ ನಂತರ ಮಿಶ್ರ ಆರ್ಥಿಕ ವ್ಯವಸ್ಥೆಯನ್ನು ಅಳವಡಿಸಿಕೊಂಡ ಭಾರತದ ಆರ್ಥಿಕತೆಯು ಈ ಕೆಳಕಂಡ ನೀತಿಗಳನ್ನು ಅಳವಡಿಸಿಕೊಂಡಿತ್ತು.
೧)ಕೇಂದ್ರೀಕೃತ ಯೋಜನಾ ವ್ಯವಸ್ಥೆ
೨)ಸಾರ್ವಜನಿಕ ವಲಯಕ್ಕೆ ಪ್ರೋತ್ಸಾಹ
೩)ಖಾಸಗಿ ವಲಯದ ನಿಯಂತ್ರಣ
೪)ರಕ್ಷಾಣಾತ್ಮಕ ವಿದೇಶಿ ವ್ಯಾಪಾರ

ಆರ್ಥಿಕ ಸುಧಾರಣೆಗಳ ಲಕ್ಷಣಗಳು


೧.ಉದಾರೀಕರಣ:ಆರ್ಥಿಕ ಚಟುವಟಿಕೆಗಳ ಮೇಲೆ ಸರ್ಕಾರದ ಹತೋಟಿ ನಿಯಂತ್ರಣಗಳನ್ನು ಸಡಿಲಗೊಳಿಸಿ ಮುಕ್ತ ಆರ್ಥಿಕ ವ್ಯವಸ್ಥೆಯ ಕಾರ್ಯಾಚರಣೆಗೆ ಅವಕಾಶ ನೀಡುವುದಕ್ಕೆ ಉದಾರೀಕರಣ ಎನ್ನುತ್ತೇವೆ.ಇದರ ಮುಖ್ಯ ಲಕ್ಷಣ ಎಂದರೆ ಆರ್ಥಿಕ ಚಟುವಟಿಕೆಗಳ ಮೇಲೆ ಸರ್ಕಾರದ ಹಸ್ತಕ್ಷೇಪವನ್ನು ಕಡಿಮೆ ಮಾಡುವುದಾಗಿದೆ.

೨.ಖಾಸಗೀಕರಣ:ಸರ್ಕಾರದ ಒಡೆತನ ಮತ್ತು ಆಡಳಿತಕ್ಕೆ ಒಳಪಟ್ಟ ಉದ್ಯಮ ಸಂಸ್ಥೆಗಳನ್ನು ಖಾಸಗಿಯವರ ಒಡೆತನ ಮತ್ತು ಆಡಳಿತಕ್ಕೆ ವಹಿಸುವ ಕ್ರಮವನ್ನು ಖಾಸಗೀಕರಣ ಎನ್ನುತ್ತೇವೆ.

೩.ಜಾಗತೀಕರಣ:ಭಾರತದ ಆರ್ಥಿಕ ವ್ಯವಸ್ಥೆಯನ್ನು ಜಗತ್ತಿನ ಆರ್ಥಿಕತೆಗಳೊಂದಿಗೆ ಸಂಯೋಜಿಸುವುದನ್ನು ಜಾಗತೀಕರಣ ಎನ್ನುತ್ತೇವೆ.

೪.ಮಾರುಕಟ್ಟೆ ಸ್ನೇಹಿ ಸರ್ಕಾರ:ನೂತನ ಆರ್ಥಿಕ ನೀತಿಗಳು ಮಾರುಕಟ್ಟೆ ಸ್ನೇಹಿ ಸರ್ಕಾರದ ಕಾರ್ಯಾಚರಣೆಗೆ ಅನುವು ಮಾಡಿಕೊಟ್ಟಿದೆ.

೫.ಆಧುನೀಕರಣ:ನೂತನ ಆರ್ಥಿಕ ನೀತಿಯು ಆರ್ಥಿಕ ವ್ಯವಸ್ಥೆಯಲ್ಲಿ ಅತ್ಯಾಧುನಿಕ ತಂತ್ರಜ್ಞಾನವನ್ನು ಅಳವಡಿಕೆಗೆ ಅನುವು ಮಾಡಿ ಕೊಟ್ಟಿದೆ.

ಆಥಿಕ ಸುಧಾರಣೆಗಳ ಮುಖ್ಯ ವಲಯಗಳು


೧.ಆರ್ಥಿಕ ವಲಯದ ಸುಧಾರಣೆ.
೨.ಕೈಗಾರಿಕಾ ವಲಯದ ಸುಧಾರಣೆ
೩.ಹಣಕಾಸು ವಲಯದ ಸುಧಾರಣೆ
೪.ಸಾರ್ವಜನಿಕ ವಲಯದ ಸುಧಾರಣೆ
೫.ವಿದೇಶಿ ವಲಯದ ಸುಧಾರಣೆ