ಸಹಕಾರಿ ಚಳುವಳಿ(Cooperative movement)

 

• ಜರ್ಮನಿಯ ವೊನ್ ರೈಫೀಜನ್ ಮತ್ತು ಡೆಲಿಶ್ ನ ಹೆರ್ ಶೂಲ್ಜ್ ಅವರನ್ನು ಆದುನಿಕ ಸಹಕಾರಿ ಆಂದೋಲನದ ಮೂಲ ಪುರುಷರೆಂದು ಕರೆಯಲಾಗಿದೆ.
• ಭಾರತದಲ್ಲಿ ಸಹಕಾರಿ ಚಳುವಳಿಯ ಇತಿಹಾಸ 19 ನೇ ಶತಮಾನದ ಕೊನೆಯ ಭಾಗದಲ್ಲಿ ಪ್ರಾರಂಭವಾಯಿತು.
• ಎಲ್ಲರಿಗಾಗಿ ನಾನು; ನನಗಾಗಿ ಎಲ್ಲರೂ --ಇದು ಸಹಕಾರ ತತ್ವದ ಮುಖ್ಯ ಸಂದೇಶ. ಇಂತಹ ಶ್ರೇಷ್ಠ ತತ್ವದ ಬುನಾದಿಯ ಮೇಲೆ ಕಟ್ಟಿರುವುದು ಈ ಸಹಕಾರ ಕ್ಷೇತ್ರ.
• ದೇಶದಲ್ಲೇ ಮೊಟ್ಟಮೊದಲ ಬಾರಿಗೆ ಕೃಷಿ ಪತ್ತಿನ ಸಹಕಾರ ಕ್ಷೇತ್ರಕ್ಕೆ ಬುನಾದಿ ಹಾಕಿದ್ದು ಕರ್ನಾಟಕ ರಾಜ್ಯ. 1904ರಲ್ಲಿ ಗದಗ ಜಿಲ್ಲೆಯ ಕಣಗಿನಹಾಳ ಗ್ರಾಮದ ಸಣ್ಣರಾಮನಗೌಡ ಸಿದ್ದರಾಮನಗೌಡ ಪಾಟೀಲ ಗ್ರಾಮದಲ್ಲಿ ಕೆಲ ಸಮಾನ ಮನಸ್ಕ ರೈತರನ್ನು ಒಗ್ಗೂಡಿಸಿ, ದೇಶದ ಮೊದಲ ಕೃಷಿ ಪತ್ತಿನ ಸಹಕಾರ ಸಂಘ ಸ್ಥಾಪಿಸಿದರು..
• ಭಾರತದ ಸಹಕಾರಿ ವಲಯವು ಇದು ಜಗತ್ತಿನಲ್ಲಿಯೇ ಅತ್ಯಂತ ದೊಡ್ಡದಾದ ಸಹಕಾರಿ ಜಾಲವಾಗಿದೆ.

ಸಹಕಾರಿ ಸಂಘಗಳ ಪ್ರಕಾರಗಳು


ಸಹಕಾರ ಚಳುವಳಿಯ ಪ್ರಯೋಜನಗಳು


1. ಸುಧಾರಿತ ಕೃಷಿ ಪದ್ದತಿಗಳು : ಸಹಕಾರಿ ಸಂಘಗಳು ಕೃಷಿ ಕ್ಷೇತ್ರಕ್ಕೆ ಆಧುನಿಕ ಯಂತ್ರಗಳು,ಸಲಕರಣೆಗಳು,ಬಿತ್ತನೆ ಬೀಜಗಳು,ರಸಗೊಬ್ಬರಗಳು, ಕ್ರಿಮಿನಾಶಕಗಳು ಪೂರೈಕೆ ಮಾಡುವುದರ ಮೂಲಕ ಕೃಷಿಯಲ್ಲಿ ಜೈವಿಕ ಕೃಷಿ ಪದ್ಧತಿಯನ್ನು ಜಾರಿಗೊಳಿಸಲು ಕಾರಣವಾಗಿವೆ.
2. ಅಧಿಕ ಉತ್ಪಾದನೆ: ಸಹಕಾರಿ ಸಂಘಗಳು ಕೃಷಿಗೆ ಅತ್ಯಾಧುನಿಕ ಯಂತ್ರಗಳು ಮತ್ತು ಇತರೆ ಪರಿಕರಗಳನ್ನು ಪೂರೈಸುವ ಮೂಲಕ ಕೃಷಿ ಉತ್ಪಾದನೆ ಹೆಚ್ಚುವಂತೆ ಮಾಡಿದೆ.
3. ಆಡಳಿತ ತರಬೇತಿ: ಜನರು ತಾವೇ ಸಹಕಾರಿ ಸಂಘಗಳ ನಿರ್ವಹಣೆ ಮತ್ತು ನಿಯಂತ್ರಣ ಮಾಡುವುದರ ಮೂಲಕ ನಿರ್ವಹಣೆ ವಿಷಯದಲ್ಲಿ ಸೂಕ್ತ ತರಬೇತಿ ಮತ್ತು ಅನುಭವ ಪಡೆಯುತ್ತಾರೆ.
4. ಅವಶ್ಯಕ ಸಾಮಗ್ರಿಗಳು ಪೂರೈಕೆ :ಸಹಕಾರಿ ಸಂಘಗಳು ಜನರಿಗೆ ಬೇಕಿರುವ ಸಾಮಗ್ರಿಗಳನ್ನೂ ಪೂರೈಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ
5. ಯೋಗ್ಯ ಬೆಲೆ: ಸಹಕಾರಿ ಸಂಘಗಳ ರೈತರು ಬೆಳೆದ ಬೆಳೆಗಳಿಗೆ ಯೋಗ್ಯ ಬೆಲೆ ಪಡೆಯುವುದು ಸಾಧ್ಯಗೊಳಿಸಿದೆ
6. ನೈತಿಕ ಲಾಭಗಳು :ಸಂಘಗಳು ಗ್ರಾಮೀಣ ಪ್ರದೇಶಗಳಲ್ಲಿ ನೈತಿಕ ಪರಿಸರವನ್ನು ಸುಧಾರಿಸಲಿದೆ.ಅವು ಜನರ ಕುಡಿತ, ಜೂಜು, ಮುಂತಾದ ದುಶ್ಚಟಗಳನ್ನು ಕಡಿಮೆಗೊಳಿಸಿದೆ.
7.ರಾಜಕೀಯ ತಿಳುವಳಿಕೆ:ಸಹಕಾರಿ ಸಂಘಗಳು ರಾಜಕೀಯ ತಿಳುವಳಿಕೆಯನ್ನು ನೀಡುತ್ತಿವೆ.

ಸಹಕಾರಿ ಚಳುವಳಿಯ ದೋಷಗಳು


1. ಬಂಡವಾಳದ ಕೊರತೆ:ಭಾರತದಲ್ಲಿ ಸಹಕಾರಿ ಸಂಘಗಳು ಬಂಡವಾಳದ ಕೊರತೆಯ ಸಮಸ್ಯೆಯನ್ನು ಎದುರಿಸುತ್ತಿವೆ.ಇದರಿಂದಾಗಿ ಅವು ಸದಸ್ಯರಿಗೆ ಅಗತ್ಯ ಹಣಕಾಸನ್ನು ಪೂರೈಸುವುದು ಸಾಧ್ಯವಾಗಿಲ್ಲ.
2. ಅದಕ್ಷತೆ ಮತ್ತು ಭ್ರಷ್ಟಾಚಾರ : ಸಹಕಾರಿ ಸಂಘಗಳು ಅದಕ್ಷತೆ ಮತ್ತು ಭ್ರಷ್ಟಾಚಾರಕ್ಕೆ ಹೆಸರುವಾಸಿ ಪಡೆದಿವೆ.
3. ರಾಜಕೀಯ ಹಸ್ತಕ್ಷೇಪ :ಸಹಕಾರಿ ಸಂಘಗಳು ರಾಜಕೀಯ ಹಸ್ತಕ್ಷೇಪದಿಂದಾಗಿ ಬಲಿಷ್ಠವಾಗಿ ಬೆಳೆಯಲು ಸಾಧ್ಯವಾಗುತ್ತಿಲ್ಲ.
4. ತರಬೇತಿಯ ಅಭಾವ:ಸೂಕ್ತ ತರಬೇತಿ ಅಭಾವದಿಂದ ಸಂಸ್ಥೆಗಳ ದಕ್ಷ ನಿರ್ವಹಣೆ ಸಾಹ್ಯವಾಗುತ್ತಿಲ್ಲ.
5. ಮಿತಿ ಮೀರಿದ ಬಾಕಿದಾರರು :ಸಹಕಾರಿ ಸಂಘಗಳಿಂದ ಸಾಲ ಪಡೆದ ಸದಸ್ಯರು ಸರಿಯಾಗಿ ಮರು ಪಾವತಿ ಮಾಡುತ್ತಿಲ್ಲ. ಇದರಿಂದ ಬಾಕಿದಾರರ ಸಂಖ್ಯೆ ಮೀಟಿ ಮೀರಿ ಬೆಳೆಯುತ್ತಿದೆ.
6.ಜನಪ್ರಿಯವಾಗಿಲ್ಲ :ಭಾರತದಲ್ಲಿ ಸಹಕಾರಿ ಚಳುವಳಿಗಳು ಆರಂಭವಾಗಿ ಒಂದು ಶತಮಾನವೇ ಕಳೆದರೂ ಸಹ ಸಹಕಾರಿ ಸಂಘಗಳುಅಷ್ಟೊಂದು ಜನಪ್ರಿಯವಾಗಿಲ್ಲ.ಜನರು ಅಹಕಾರಿ ಚಳುವಳಿಯ ಯಶಸ್ಸಿಗೆ ಶ್ರಮಿಸುತ್ತಿಲ್ಲ.