ಡಿಸೆಂಬರ್ 16th, 2017

 

1:ರೈಲು ನಿಲ್ದಾಣಗಳ ಸುರಕ್ಷತೆಗೆ ‘ನಿರ್ಭಯಾ’ ನಿಧಿ ಬಳಕೆ


• ಮಹಿಳೆಯರ ಸುರಕ್ಷತೆಗಾಗಿ 983 ರೈಲು ನಿಲ್ದಾಣಗಳಲ್ಲಿ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಿಕೊಳ್ಳಲು ನಿರ್ಧರಿಸಲಾಗಿದೆ.
• ಇದಕ್ಕೆ ನಿರ್ಭಯ ನಿಧಿ ಬಳಸಿಕೊಳ್ಳಲು ಸರಕಾರ ರಾಜ್ಯಸಭೆಗೆ ತಿಳಿಸಿದೆ.
• 2013 ರ ಬಜೆಟ್ ನಲ್ಲಿ ನಿರ್ಭಯ ನಿಧಿ ಸ್ಥಾಪಿಸಲು ಘೋಷಿಸಲಾಗಿತ್ತು.
• 202 ನಿಲ್ದಾಣಗಳನ್ನು ಸೂಕ್ಷ್ಮ ನಿಲ್ದಾಣಗಳೆಂದು ಎಂದು ಗುರುತಿಸಲಾಗಿದೆ.ಈ ನಿಲ್ದಾಣಗಳಲ್ಲಿ [ISS] ಸಮಗ್ರ ಭದ್ರತಾ ವ್ಯವಸ್ಥೆ ಅಳವಡಿಕೆ.
• CCTV ಕ್ಯಾಮರಾ-> ಪ್ರವೇಶ ನಿಯಂತ್ರಣ ವ್ಯವಸ್ಥೆ
ಜನರು ಮತ್ತು ಲಗೇಜುಗಳ ಪರಿಶೀಲನೆ
ಬಾಂಬ್ ಪತ್ತೆ, etc. ISS ನಲ್ಲಿ ಸೇರುತ್ತವೆ.

2.ಯೋಧರ ಸ್ಮರಣಾರ್ಥ ಉದ್ಯಾನ


• “ಭಾರತ-ಬಾಂಗ್ಲದೇಶ” ಮೈತ್ರಿ ಉದ್ಯಾನ ಮುಖ್ಯಮಂತ್ರಿ ಮಾಣಿಕ್ ಸರ್ಕಾರ ಉದ್ಘಾಟಿಸಿದ್ದಾರೆ.
• 1971 ರ ಬಾಂಗ್ಲಾ ವಿಮೋಚನಾ ಯುದ್ಧದ ಸಂದರ್ಭದಲ್ಲಿ ಮಡಿದ ಭಾರತ ಮತ್ತು ಬಾಂಗ್ಲದೇಶ ಯೋಧರ ಸ್ಮರಣಾರ್ಥ ಅಗರ್ತಲಾದಲ್ಲಿ ಈ ಉದ್ಯಾನ ನಿರ್ಮಾಣ.
• ಅಗರ್ತಲಾದಿಂದ 130KM ಗಡಿಗ್ರಾಮ-> ಚೊಟ್ಟ ಕೋಲದಲ್ಲಿ 20.20 ಪ್ರದೇಶದಲ್ಲಿ ನಿರ್ಮಾಣ.
• ಇಂದಿರಾಗಾಂಧಿ & ವಂಗಬಂಧು ->ಶೇಕ್ ವಲಜಿಬರ್ ರೆಹಮಾನ್ ಅವರ ಪ್ರತಿಮೆಗಳನ್ನು ಸ್ಥಾಪಿಸಲಾಗಿದೆ
• 67 ಅಡಿ ಎತ್ತರದ ಗೋಪುರ ನಿರ್ಮಿಸಿದ್ದು ಈ ಮೂಲಕ ನೆರೆಯ ಬಾಂಗ್ಲಾದ ನೊಖಲಿ ಮತ್ತು ಫೆನಿ ಜಿಲ್ಲೆಗಳ ಕೆಲವು ಭಾಗಗಳನ್ನು ವೀಕ್ಷಿಸಬಹುದು.
• 1971 ರ ಯುದ್ಧದ ಸಂದರ್ಭದ ಶಸ್ತ್ರಾಸ್ತ್ರ, ಭಾವಚಿತ್ರಗಳ ದಸ್ತು ಸಂಗ್ರಹಾಲಯವಿದೆ.

3.ಯೂತ್ ಕ್ವೇಕ್ ವರ್ಷದ ಪದ


• ಯುವ ಮತದಾರರಲ್ಲಿ ರಾಜಕೀಯ ಜಾಗೃತಿ ಎಂಬ ಅರ್ಥ ನೀಡುವ “ಯೂತ್ ಕ್ವೇಕ್” ಪದವನ್ನು 2017ರ ವರ್ಷದ ಪದ ಎಂದು oxford dictionary ಘೋಷಿಸಿದೆ.
• ಸಂಸ್ಕೃತಿ, ರಾಜಕಾರಣ OR ಅಥವಾ ಸಾಮಾಜಿಕ ಬದಲಾವಣೆಯಲ್ಲಿ ಯುವಜನರ ಪಾತ್ರ ಎಂದು ಈ ಪದವನ್ನು oxford dictionary ವಿವರಿಸಿದೆ.
• ಭಾಷಾ ಆಸಕ್ತಿ, ಪುರಾವೆಗಳ ಆಧಾರದಲ್ಲಿ ಈ ಪದವನ್ನು ಆಯ್ಕೆ ಮಾಡಲಾಗಿದೆ.

4. ಇಂಡೋ-ಮಾಲ್ಡೀವ್ಸ್ ಸಮರಾಭ್ಯಾಸ


• ಭಾರತೀಯ ಸೇನೆಯ ಗೂರ್ಖಾ ರೈಫಲ್ಸ್ & ಮಾಲ್ಡೀವ್ಸ್ ಸೇನೆಯ ನಡುವೆ 14 ದಿನಗಳ ಜಂಟಿ ಸಮರಾಭ್ಯಾಸ ಇಕುವೇರಿನ (ಸ್ನೇಹಿತರು) ಬೆಳಗಾವಿಯ ಮರಾಠಾ ಲಘು ಪದಾತಿದಳದ ಕವಾಯತು ಮೈದಾನದಲ್ಲಿ ಆರಂಭಗೊಂಡಿದೆ.
• ಎರಡು ದೇಶಗಳಲ್ಲಿ ಭಯೋತ್ಪಾದನೆ ತೊಲಗಿಸಲು ಈ ಸಮರಾಭ್ಯಾಸ ನಡೆಸಲಾಗಿದೆ.

5.ತಾರಿಣಿಗೆ ವಿಶ್ವಮಾನವ ಪ್ರಶಸ್ತಿ.


• ವಿಶ್ವಮಾನವ ಪ್ರಶಸ್ತಿಗೆ ತಾರಿಣಿ ಚಿದಾನಂದಗೌಡ ಭಾಜನರಾಗಿದ್ದಾರೆ.
• ದೇಜಗೌ ಟ್ರಸ್ಟಿನಿಂದ ಈ ಪ್ರಶಸ್ತಿ ನೀಡಿಕೆ.
• ಪ್ರಶಸ್ತಿಯು 25000 ನಗದು, ಫಲಕ ಒಳಗೊಂಡಿದೆ.

6.ಪುತಿನ ಸಾಹಿತ್ಯ ಗೌರವ


• 2016ನೇ ಸಾಲಿನ ಪುತಿನ ಸಾಹಿತ್ಯ ಪುರಸ್ಕಾರಕ್ಕೆ ಸಾಹಿತಿ ಪ್ರೊ.ಜಿ.ಎಸ್.ಸಿದ್ದಲಿಂಗಯ್ಯ ಪಾತ್ರರಾಗಿದ್ದಾರೆ.
• ಪುತಿನ ಕಾವ್ಯ ನಾಟಕ ಗೌರವ ನಾಗರಾಜ ರಾಮಸ್ವಾಮಿ ದಸ್ತಾರಿಗೆ ಸಂದಿದೆ.
• ಪ್ರಸ್ತಕ ವರ್ಷದಿಂದ ಪುತಿನ ಟ್ರಸ್ಟ್ ವತಿಯಿಂದ ಕನ್ನಡ ಲೇಖಕರಿಗೆ ಜೀವಮಾನದ ಸಾಧನೆಗೆ ವಿಶೇಷ ಪುರಸ್ಕಾರ ನೀಡುವ ಯೋಜನೆ ರೂಪಿಸಲಾಗಿದೆ.
• ಸಾಹಿತ್ಯ ಪುರಸ್ಕಾರ 51 ಸಾವಿರ ನಗದು ಮತ್ತು ಫಲಕ ಒಳಗೊಂಡಿದೆ.
• ಕಾವ್ಯ ನಾಟಕ ಪ್ರಶಸ್ತಿ 25 ಸಾವಿರ ನಗದು ಮತ್ತು ಫಲಕ ಒಳಗೊಂಡಿದೆ.

7.ಸಮೃದ್ಧಿ ಸೂಚ್ಯಂಕ: ಭಾರತಕ್ಕೆ 100ನೇ ಸ್ಥಾನ


• ಭಾರತ ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿಯನ್ನು ಅಳೆಯುವ ಸಮೃದ್ಧಿ ಸೂಚ್ಯಂಕದಲ್ಲಿ 100ನೇ ಸ್ಥಾನ ಪಡೆದಿದೆ.
• ವಿಶ್ವದ 149 ದೇಶಗಳಲ್ಲಿ 104 ಸೂಚಕಗಳನ್ನು ಆಧರಿಸಿ ರಚನೆ.
• ಲಂಡನ್ ಮೂಲದ ಸಂಸ್ಥೆ ಅಧ್ಯಯನ
• ಭಾರತ,
1. ಆರ್ಥಿಕ ಗುಣಮಟ್ಟದಲ್ಲಿ 56TH
2. ಉದ್ಯಮ ಪರಿಸರ 65TH
3. ಆಡಳಿತ 41ST
4. ಶಿಕ್ಷಣ 99TH
5. ಅರೋಗ್ಯ 109TH
6. ಸುರಕ್ಷತೆ ಮತ್ತು ಭದ್ರತೆ 134TH
7. ವೈಯಕ್ತಿಕ ಸ್ವಾತಂತ್ರ್ಯ 100TH, ಸ್ಥಾನ ಪಡೆದಿದೆ.

Contributed by: Mallikajan.Korbu